Namo Namaste Narasimha

Composer : Shri Jagannatha dasaru

By Smt.Nandini Sripad

ಕರಿಗಿರಿ ನರಸಿಂಹದೇವರ ಸ್ತೋತ್ರ
ರಾಗ: ಶಂಕರಾಭರಣ, ಆದಿತಾಳ

ನಮೋ ನಮಸ್ತೆ ನರಸಿಂಹದೇವ । ಸ್ಮರಿಸುವವರ ಕಾವಾ ॥ಪ॥
ಸುಮಹಾತ್ಮ ನಿನೆಗೆಣೆ ಲೋಕದೊಳಾವ । ತ್ರಿಭುವನ ಸಂಜೀವ।
ಉಮೆಯರಸನ ಹೃತ್ಕಮಲ ದ್ಯುಮಣಿ ಮಾ – ।
ರಮಣ ಕನಕ ಸಂಯಮಿವರ ವರದ ॥ ಅ ಪ ॥

ಕ್ಷೇತ್ರಜ್ಞ ಕ್ಷೇಮಧಾಮ ಭೂಮಾ । ದಾನವಕುಲ ಭೀಮಾ ।
ಗಾತ್ರ ಸನ್ನುತ ಬ್ರಹ್ಮಾದಿ ಸ್ತೋಮ । ಸನ್ಮಂಗಳನಾಮಾ ।
ಚಿತ್ರ ಮಹಿಮ ನಕ್ಷತ್ರ ನೇಮಿ ಸ – ।
ರ್ವತ್ರ ಮಿತ್ರ ಸುಚರಿತ್ರ ಪವಿತ್ರ ॥ 1 ॥

ಅಪರಾಜಿತ ಅನಘ ಅನಿರ್ವಿಣ್ಯಾ । ಲೋಕೈಕ ಶರಣ್ಯಾ ।
ಶಫರಾಕೇತು ಕೋಟಿ ಲಾವಣ್ಯಾ । ದೈತ್ಯೇಂದ್ರ ಹಿರಣ್ಯಕ – ।
ಶಿಪುಸುತನ ಕಾಯ್ದಪೆನೆನುತಲಿ ನಿ – ।
ಷ್ಕಪಟ ಮನುಜ ಹರಿವಪುಷ ನೀನಾದೆ ॥ 2 ॥

ತಪನ ಕೋಟಿ ಪ್ರಭಾವ ಶರೀರಾ । ದುರಿತೌಘ ವಿದೂರಾ ।
ಪ್ರಪಿತಾಮಹ ಭಕ್ತಜನಮಂದಾರಾ । ಖಳ ವಿಪಿನ ಕುಠಾರಾ ।
ಕೃಪಣಬಂಧು ತವ ನಿಪುಣತನಕೆ ನಾ – ।
ನುಪಮೆಗಾಣೆ ಕಾಶ್ಯಪಿವರವಾಹನ ॥ 3 ॥

ವೇದವೇದಾಂಗ ವೇದಾವೇದ್ಯಾ । ಸಾಧ್ಯ ಅಸಾಧ್ಯ ।
ಶ್ರೀದಾ ಮುಕ್ತ ಮುಕ್ತರಾರಾಧ್ಯಾ । ಅನುಪಮ ಅನವದ್ಯ ।
ಮೋದಮಯನೆ ಪ್ರಹ್ಲಾದವರದ ನಿ – ।
ತ್ಯೋದಯ ಮಂಗಳ ಪಾದಕಮಲಕೆ ॥ 4 ॥

ಅನಿಮಿತ್ತ ಬಂಧು ಜಗನ್ನಾಥ । ವಿಠ್ಠಲ ಸಾಂಪ್ರತ ।
ನಿನಗೆ ಬಿನ್ನೈಪೆನು ಎನ್ನಯ ಮಾತಾ । ಲಾಲಿಸುವುದು ತಾತ ।
ಗಣನೆ ಇಲ್ಲದವಗುಣವೆಣಿಸದೆ ಪ್ರತಿ – ।
ಕ್ಷಣಕೆ ಕಥಾಮೃತ ಉಣಿಸು ಕರುಣದಿ ॥ 5 ॥


rAga: SaMkarABaraNa , AditALa

namO namaste narasiMhadEva | smarisuvavara kAvA ||pa||
sumahAtma ninegeNe lOkadoLAva | triBuvana saMjIva|
umeyarasana hRutkamala dyumaNi mA – |
ramaNa kanaka saMyamivara varada || a pa ||

kShEtraj~ja kShEmadhAma BUmA | dAnavakula BImA |
gAtra sannuta brahmAdi stOma | sanmaMgaLanAmA |
citra mahima nakShatra nEmi sa – |
rvatra mitra sucaritra pavitra || 1 ||

aparAjita anaGa anirviNyA | lOkaika SaraNyA |
SaParAkEtu kOTi lAvaNyA | daityEMdra hiraNyaka – |
Sipusutana kAydapenenutali ni – |
ShkapaTa manuja harivapuSha nInAde || 2 ||

tapana kOTi praBAva SarIrA | duritauGa vidUrA |
prapitAmaha BaktajanamaMdArA | KaLa vipina kuThArA |
kRupaNabaMdhu tava nipuNatanake nA – |
nupamegANe kASyapivaravAhana || 3 ||

vEdavEdAMga vEdAvEdyA | sAdhya asAdhya |
SrIdA mukta muktarArAdhyA | anupama anavadya |
mOdamayane prahlAdavarada ni – |
tyOdaya maMgaLa pAdakamalake || 4 ||

animitta baMdhu jagannAtha | viThThala sAMprata |
ninage binnaipenu ennaya mAtA | lAlisuvudu tAta |
gaNane illadavaguNaveNisade prati – |
kShaNake kathAmRuta uNisu karuNadi || 5 ||

Leave a Reply

Your email address will not be published. Required fields are marked *

You might also like

error: Content is protected !!