ಶ್ರೀ ಜಗನ್ನಾಥದಾಸರಾಯರ ಸ್ತೋತ್ರಸುಳಾದಿ
ರಾಗ: ಹಂಸಧ್ವನಿ
ಧ್ರುವತಾಳ
ಪೊಂದಿ ಭಜಿಸು ಸತತ ಒಂದೇ ಮನದಿ ಸ್ಥಂಭ
ಮಂದಿರ ಮಾನವಿ ದಾಸಾರ್ಯರ
ಮಂದ ಮಾನವ ಕೇಳೋ ವಂದಿಸಿ ಸೇವಿಪರ
ಬಂಧನ ಪರಿಹರಿಸಿ ಮನದಭೀಷ್ಟ
ತಂದು ಕೊಡುವದಕ್ಕೆ ಮಂದಾರ ಕುಜದಂತೆ
ಬಂದಿಲ್ಲಿ ನಿಂದಿಹ್ಯರೆಂದು ತಿಳಿಯೊ
ಛಂದಾಗಿ ಇವರು ದಯದಿ ಕಣ್ದೆರೆದು ನೋಡಿದರೆ
ಬೆಂದು ಪೋಪವು ದೋಷ ವೃಂದವೆಲ್ಲ
ಕಂದನು ಮಾಡಿದ ಕುಂದು ಕ್ಷಮಿಸಿ ತಾಯಿ
ತಂದೆ ಸಲಹುವರಂತೆ ರಕ್ಷಿಸುವರೊ
ಹಿಂದೆ ಸಲ್ಹಾದ ಶಲ್ಯರೆಂದೆನಿಸುತ ಪು – |
ರಂದರಗುರು ಸ್ವಾದಿರಾಜರ ಪ್ರೀತ
ಸಿಂಧೂರವರದ ಶ್ಯಾಮಸುಂದರ ನಾಜ್ಞದಿ
ಇಂದುವಿನಂತೆ ಮೂಡಿ ಪುನಃ ಜಗದಿ || ೧ ||
ಮಟ್ಟತಾಳ
ತ್ವರವಾಟದಿ ಜನಿಸಿ ವರದೇಂದ್ರರನೊಲಿಸಿ
ಮರುತಾಗಮ ಗಳಿಸಿ ತುರುರಕ್ಷಕ ದಾಸ –
ವರ್ಯರ ಕರುಣದಲಿ ಶರಧಿಜ ಭಾಗದಲಿ
ಧರಣಿಪ ವಿಠಲೆಂಬೋ ಸುರಚರದಂಕಿತವ |
ದೊರಕಿಸಿ ಪ್ರಾಕೃತದಿ ಕರುಣಾಕರ
ಶ್ಯಾಮಸುಂದರನ ವರ್ಣಿಸಿದ ಪರಮ
ಭಾಗವತರ ನೆರೆನಂಬು ನಿರುತ || ೨ ||
ತ್ರಿವಿಡತಾಳ
ಇವರ ಸಂದರುಶನ ಭವ ಬಂಧ ಮೋಚನ
ಇವರ ಚರಣ ಧ್ಯಾನ ಗಂಗಾ ಸ್ನಾನ
ಇವರನ್ನ ಸಾರಿದರೆ ಜವನ ಅಂಜಿಕೆಯಿಲ್ಲ
ಇವರ ಕವನ ಸ್ತವನ ಶ್ರವಣದಿಂದ
ಪವನ ಸಚ್ಚಾಸ್ತ್ರದ ಪ್ರವಚನ ಫಲವಕ್ಕು
ಇವರಿದ್ದ ಸ್ಥಳ ಕಾಶಿ ರಾಮೇಶ್ವರ
ಇವರಲ್ಲಿ ಸಮಸ್ತ ದಿವಿಜರು ನೆಲೆಸಿದ್ದು
ಇವರಂದ ವಚನವ ನಡೆಸುವರು
ಇವರಲ್ಲಿರಲು ಬಿಟ್ಟು ಅವನಿ ಸುತ್ತಿದರವಗೆ
ಲವಲೇಶವಾದರು ಪುಣ್ಯವಿಲ್ಲ
ಇವರನುಗ್ರಹವಾಗೆ ಶ್ರೀಶಾಮಸುಂದರನು
ತವಕದಿ ಕರಪಿಡಿದು ಸಲಹುವ ಸಂತತ || ೩ ||
ಅಟ್ಟತಾಳ
ಧಾರುಣಿ ಸುರರ ಉದ್ಧಾರಗೋಸುಗವಾಗಿ |
ಮೂರೆಂಟು ಈರಾರು ಚಾರುಲಕ್ಷಣವುಳ್ಳ |
ಭಾರತಿಪತಿಯಂತೆ ತೋರುವ ಕಾಯುವ
ಶೌರಿ ಕಥಾಮೃತ ಸಾರ ಸುಗ್ರಂಥವಾ
ತಾ ರಚಿಸಿದ ಉಪಕಾರವು ವರ್ಣಿಸಲಾರಿಂದಸಾಧ್ಯವು |
ಪಾರಾಯಣ ಪ್ರತಿವಾರ ಬಿಡದೆ ಮಾಡೆ ಸಾರಲೇನು | ಸಂ
ಸಾರ ಶರಧಿಯಿಂದ ಪಾರಾಗಿ ಸದ್ಭಕುತಿ
ಪಾರಮಾರ್ಥಿಕ ಜ್ಞಾನ ವೈರಾಗ್ಯ ಪಡೆವುತ
ನಾರದ ನಮಿತ ಶ್ರೀ ಶಾಮಸುಂದರನ ಹೃ –
ದ್ವಾರಿಜದೊಳು ಕಂಡು ಸೂರೆಗೊಂಬುವ ಸುಖ || ೪ ||
ಆದಿತಾಳ
ಈತನ ಭಜಿಸಲು ಯಾತನೆಗಳು ಇಲ್ಲ
ಈತನ ಸೇರಲು ಯಾತರ ಭೀತಿಯು
ಈತನ ಹೊರತಿನ್ನು ದಾತರು ನಮಗಿಲ್ಲ
ಈತನೆ ರಕ್ಷಕ ಈತನೆ ತಾಯ್ತಂದೆ
ಈತನೆ ಸದ್ಗುರು ಈತನೆ ಗತಿಪ್ರದ
ಈತನೆ ಮೂಕಗೆ ಮಾತು ನುಡಿಸಿದಾತ
ಈತನ ಭಕ್ತಿಗೆ ಸೋತು ಎರಡುವ್ಯಾಳೆ
ವಾತಾಂತರ್ಗತ ನಮ್ಮ ಶಾಮಸುಂದರವಿಠಲ
ಪ್ರೀತಿಯಿಂದಿವರಿಗೆ ಮೃಷ್ಟಾನ್ನ ಉಣಿಸಿದ || ೫ ||
ಜತೆ
ಈ ಮಹಾಮಹಿಮರ ಪ್ರೇಮ ಪಡೆವರನ್ನ
ಶಾಮಸುಂದರವಿಠ್ಠಲ ಸ್ವಾಮಿ ಸತತ ಪೊರೆವ ||೬||
SrI jagannAthadAsarAyara stOtrasuLAdi
rAga: haMsadhvani
dhruvatALa
poMdi Bajisu satata oMdE manadi sthaMBa
maMdira mAnavi dAsAryara
maMda mAnava kELO vaMdisi sEvipara
baMdhana pariharisi manadaBIShTa
taMdu koDuvadakke maMdAra kujadaMte
baMdilli niMdihyareMdu tiLiyo
CaMdAgi ivaru dayadi kaNderedu nODidare
beMdu pOpavu dOSha vRuMdavella
kaMdanu mADida kuMdu kShamisi tAyi
taMde salahuvaraMte rakShisuvaro
hiMde salhAda SalyareMdenisuta pu – |
raMdaraguru svAdirAjara prIta
siMdhUravarada SyAmasuMdara nAj~jadi
iMduvinaMte mUDi punaH jagadi || 1 ||
maTTatALa
tvaravATadi janisi varadEMdraranolisi
marutAgama gaLisi tururakShaka dAsa –
varyara karuNadali Saradhija BAgadali
dharaNipa viThaleMbO suracaradaMkitava |
dorakisi prAkRutadi karuNAkara
SyAmasuMdarana varNisida parama
BAgavatara nerenaMbu niruta || 2 ||
triviDatALa
ivara saMdaruSana Bava baMdha mOcana
ivara caraNa dhyAna gaMgA snAna
ivaranna sAridare javana aMjikeyilla
ivara kavana stavana SravaNadiMda
pavana saccAstrada pravacana Palavakku
ivaridda sthaLa kASi rAmESvara
ivaralli samasta divijaru nelesiddu
ivaraMda vacanava naDesuvaru
ivaralliralu biTTu avani suttidaravage
lavalESavAdaru puNyavilla
ivaranugrahavAge SrISAmasuMdaranu
tavakadi karapiDidu salahuva saMtata || 3 ||
aTTatALa
dhAruNi surara uddhAragOsugavAgi |
mUreMTu IrAru cArulakShaNavuLLa |
BAratipatiyaMte tOruva kAyuva
Sauri kathAmRuta sAra sugraMthavA
tA racisida upakAravu varNisalAriMdasAdhyavu |
pArAyaNa prativAra biDade mADe sAralEnu | saM
sAra SaradhiyiMda pArAgi sadBakuti
pAramArthika j~jAna vairAgya paDevuta
nArada namita SrI SAmasuMdarana hRu –
dvArijadoLu kaMDu sUregoMbuva suKa || 4 ||
AditALa
Itana Bajisalu yAtanegaLu illa
Itana sEralu yAtara BItiyu
Itana horatinnu dAtaru namagilla
Itane rakShaka Itane tAytaMde
Itane sadguru Itane gatiprada
Itane mUkage mAtu nuDisidAta
Itana Baktige sOtu eraDuvyALe
vAtAMtargata namma SAmasuMdaraviThala
prItiyiMdivarige mRuShTAnna uNisida || 5 ||
jate
I mahAmahimara prEma paDevaranna
SAmasuMdaraviThThala svAmi satata poreva ||6||
Leave a Reply