Composer : Shri Gurushreesha vittala
ಎಂತು ಪೊಗಳಲಿ ಜಗನ್ನಾಥ ದಾಸರ ನಾ ||
ಕಂತು ಪಿತ ಒಲಿದವರ ಅಂತರಂಗದಿ ಪೊಳೆವ |ಅ.ಪ|
ಶ್ರೀರಮಾದೇವಿ ಪತಿಯೊಡನೆ ಇವರಲಿ ನಿಂತು |
ಈರೆರಡು ಅವ್ಯಕ್ತದೇಹ ಸಹಿತ |
ಆರು ನಾಲಕು ತತ್ವದಭಿಮಾನಿಗಳ ಕೂಡಿ |
ಮೂರು ಗುಣ ಕಾರ್ಯಗಳ ಮಾಡಿ ತೋರ್ಪಳು ಸುಖವ ||೧|
ಚತುರಮುಖ ವಾಯು ನಿಜ ಸತಿಯರಿಂದೊಡಗೂಡಿ |
ಇತರ ದೇವತೆಗಳು ಸತತ ಇದ್ದು |
ವಿತತ ಮಹಿಮನ ಸೇವಿಸುತಲಿ ಸುಜ್ಞಾನವನು
ಹಿತದಿಂದವರಗಿತ್ತು ಅತಿ ತೋಷ ಪಡಿಸುವರು ||೨||
ಕರಣಾಭಿಮಾನಿಗಳು ಶಿವ ಇಂದ್ರ ಸೂರ್ಯರು ತಾವ್ |
ನಿರವಧಿಷ್ಠಾನದಲಿ ಹರಿಗರ್ಪಿಸಿ |
ಸುರನರರ ತರತಮವ ಅರುಪಿ ಪಂಚ ಭೇದವನು |
ಹರಿದಾಸ್ಯವಿತ್ತು ಪರಿಶೋಭಿಸುವರ್ ಅನುದಿನದಿ ||೩||
ಈ ಪರಿ ನಿರಂತರದಿ ಆಪಾದ ಮೌಳಿತನ
ಕಾಪಯೋಜಜ ಮುಖರ ರೂಪಂಗಳಲಿ |
ಆ ಪರಮ ಪುರುಷನ ವ್ಯಾಪಾರ ನೊಡುತಲಿ |
ಅಪಾರ ಮಹಿಮನ ಸ್ವರೂಪ ಸ್ಮರಿಸುತಲಿಹರು ||೪||
ಈ ಸುಮನಸರಾ ಮಹಿಮೆ ಸೂಸಿ ತಾ ತಿಳಿದು ನಿಜ |
ದಾಸನಾದವನ ಅಘನಾಶನ |
ಕಾಸಿನಾಶೆಗೆ ಪರರ ದಾಸನಾದವನು | ಗುರು |
ಶ್ರೀಶವಿಠ್ಠಲನ ದಾಸರಾ ಮಹಿಮೆ ಬಲ್ಲನೇ ||೫||
eMtu pogaLali jagannAtha dAsara nA ||
kaMtu pita olidavara aMtaraMgadi poLeva |a.pa|
shrIramAdEvi patiyoDane ivarali niMtu |
eereraDu avyaktadEha sahita |
Aru nAlaku tatvadabhimAnigaLa kUDi |
mUru guNa kAryagaLa mADi tOrpaLu sukhava ||1|
chaturamukha vAyu nija satiyariMdoDagUDi |
itara dEvategaLu satata iddu |
vitata mahimana sEvisutali suj~jAnavanu
hitadiMdavaragittu ati tOSha paDisuvaru ||2||
karaNAbhimAnigaLu shiva iMdra sUryaru tAv |
niravadhiShThAnadali harigarpisi |
suranarara taratamava arupi paMcha bhEdavanu |
haridAsyavittu parishObhisuvar anudinadi ||3||
ee pari niraMtaradi ApAda mouLitana
kApayOjaja mukhara rUpaMgaLali |
A parama puruShana vyApAra noDutali |
apAra mahimana svarUpa smarisutaliharu ||4||
ee sumanasarA mahime sUsi tA tiLidu nija |
dAsanAdavana aghanAshana |
kAsinAshege parara dAsanAdavanu | guru |
shrIshaviThThalana dAsarA mahime ballanE ||5||
Leave a Reply