Composer : Shri Pranapati Vittala [Shri Shatpuraacharya]
Shri Vishwapriya Tirtharu :
ArAdhanE: AshADa amAvAsya
Parampare: 32nd in soDE maTa
gurugaLu: shri vishvEsha tIrtharU
shishyarU: shri vishvAdIsha tIrtharU (sOdemaTa)
shri raghupravIra tIrtharU (bhImanakaTTe maTa)
BrindAvana: uDupi krishNa maTa
Period: 1774-1865
ವಂದೇ ವಂದಾರು ಮಂದಾರಮಿಂದಿರಾಬ್ಜ ಮಧುವ್ರತಂ |
ಶ್ರೀವಿಶ್ವಪ್ರಿಯ ಯೋಗೀಂದ್ರ ಹೃದಬ್ಜನಿಲಯಂ ಹರಿಂ ||
vaMdE vaMdAru maMdAramiMdirAbja madhuvrataM |
SrIviSvapriya yOgIMdra hRudabjanilayaM hariM ||
ವೃಂದಾವನಾಚಾರ್ಯರ ಚರಣ ಕಮಲ-
ಕ್ಕೊಂದಿಸುವೆನು ಸತ್ತ್ವರ || ಪ ||
ಇಂದಿರೇಶನ ಗುಣ –
ವೃಂದ ಸಾಗರದೊಳು |
ಮಿಂದು ಸತತ ಪ್ರೇಮಾ-
ನಂದ ಪೂರಿತರಾದ || ಅ.ಪ ||
ನರಲೋಕದುದ್ಧರಣ ಮಾಡುವುದಕ್ಕೆ |
ಕರುಣದಿ ಶ್ರೀ ರಮಣ |
ಪರಮ ರಹಸ್ಯ | ವಿ ||
ಸ್ತರಿಸಿ ಪೇಳುವುದಕ್ಕೆ |
ವರಾಹಾಜ್ಞೇಯ ಕೊಡಲು |
ಧರೆಯೊಳಗೆ ಬಂದಿಹ || ೧ ||
ಕಲಿಯುಗದಲಿ ಪುಟ್ಟಿದ | ಸಜ್ಜನ |
ರೆಲ್ಲ ಬಳಲುತಿರಲು ಮೋಕ್ಷದ |
ಸುಲಭ ದಾರಿಯ ತೋರಿ ||
ಜಲಜನಾಭನ ಮಹಿಮೆ |
ಲಲಿತ ವಾಕ್ಯಗಳಿಂದ |
ತಿಳಿಸಿ ಬೋಧಿಸುತಿಹ || ೨ ||
ವಿಶ್ವಾಧೀಶರ ಕುವರ ಹಂಸಾಶ್ರಮ |
ವಿಶ್ವೇಶ ಮುನಿಪ ಕರ |
ಭಾಸ್ವರ ಕಮಲಜ ||
ವಿಶ್ವ ಭಾವಿಮತ |
ವಿಶ್ವಾ ದಾಸೋತ್ತಮ |
ವಿಶ್ವಪ್ರಿಯಾಮಯ || ೩ ||
ಶ್ರೀ ಗುರು ವಾದಿರಾಜ ಮುನಿವರ್ಯರ |
ಬಾಗುತಲೆ | ದಿವ್ಯಾಜ |
ರಾಗಾದಿ ಸೇವಿಸಿ ||
ನೀಗಿ ದುಷ್ಕ್ರುತಿಗಳ |
ಯೋಗೀಶ್ವರರ ಕೃಪೆ |
ಯೋಗದಿಂದಲಿ ಪಡೆದ || ೪ ||
ಬಿಟ್ಟು ದ್ವಾದಶ ವರುಷದಿ ಅನ್ನಂಗಳ |
ಸುಟ್ಟು ದುರುಳ ಕಾಮಾದಿ |
ಪ್ರೇಷ್ಠರ ದಯದಿಂದ ||
ಶ್ರೇಷ್ಠ ಶ್ರೀ ಪ್ರಾಣಪತಿ |
ವಿಠ್ಠಲನರ್ಚಿಸಿ ತುಷ್ಟಿಯ ಪಡಿಸಿದ || ೫ ||
vRuMdAvanAcAryara caraNa kamala-
kkoMdisuvenu sattvara || pa ||
iMdirESana guNa –
vRuMda sAgaradoLu |
miMdu satata prEmA-
naMda pUritarAda || a.pa ||
naralOkaduddharaNa mADuvudakke |
karuNadi SrI ramaNa |
parama rahasya | vi ||
starisi pELuvudakke |
varAhAj~jEya koDalu |
dhareyoLage baMdiha || 1 ||
kaliyugadali puTTida | sajjana |
rella baLalutiralu mOkShada |
sulaBa dAriya tOri ||
jalajanABana mahime |
lalita vAkyagaLiMda |
tiLisi bOdhisutiha || 2 ||
viSvAdhISara kuvara haMsASrama |
viSvESa munipa kara |
BAsvara kamalaja ||
viSva BAvimata |
viSvA dAsOttama |
viSvapriyAmaya || 3 ||
SrI guru vAdirAja munivaryara |
bAgutale | divyAja |
rAgAdi sEvisi ||
nIgi duShkrutigaLa |
yOgISvarara kRupe |
yOgadiMdali paDeda || 4 ||
biTTu dvAdaSa varuShadi annaMgaLa |
suTTu duruLa kAmAdi |
prEShThara dayadiMda ||
SrEShTha SrI prANapati |
viThThalanarcisi tuShTiya paDisida || 5 ||
Leave a Reply