Composer : Shri Purandara dasaru
ಶ್ರೀಪತಿಯು ನಮಗೆ ಸಂಪದವೀಯಲಿ
ವಾಣಿಪತಿಯು ನಮಗೆ ದೀರ್ಘಾಯು ಕೊಡಲಿ [ಅ.ಪ]
ವರ ವಿಭುಧರನು ಪೊರೆಯೆ
ವಿಷವ ಕಂಠದಲಿಟ್ಟ
ಹರ ನಿತ್ಯ ನಮಗೆ ಸಹಾಯನಾಗಲಿ
ನರರೊಳುನ್ನತವಾದ ನಿತ್ಯ ಭೋಗಂಗಳನು
ಪುರುಹುತ ಪೂರ್ಣ ಮಾಡಿಸಲಿ ಬಿಡದೆ [೧]
ವಿನುತ ಸಿದ್ಧಿಪ್ರದನು ವಿಗ್ನೇಶ ದಯದಿಂದ
ನೆನೆದ ಕಾರ್ಯಗಳೆಲ್ಲ ನೆರವೇರುತಿರಲಿ
ದಿನದಿನದಿ ಧನ್ವಂತ್ರಿ ಆಪತ್ತುಗಳ ಕಳೆದು
ಮನ ಹರುಷವಿತ್ತು ಮನ್ನಿಸಲಿ ಬಿಡದೆ [೨]
ನಿರುತ ಸುಜ್ಞಾನವನು ಈವ ಗುರು ಮಧ್ವರಾಯ
ಗುರುಗಳಾಶೀರ್ವಾದ ನಮಗಾಗಲಿ
ಪುರಂದರ ವಿಠ್ಠಲನ ಕರುಣೆಯಿಂದಲಿ ಸಕಲ
ಸುರರೊಲುಮೆ ನಮಗೆ ಸುಸ್ಥಿರವಾಗಲಿ [೩]
SrIpatiyu namage saMpadavIyali
vANipatiyu namage dIrGAyu koDali [a.pa]
vara vibhudharanu poreye
viShava kaMThadaliTTa
hara nitya namage sahAyanAgali
nararoLunnatavAda nitya BOgaMgaLanu
puruhuta pUrNa mADisali biDade [1]
vinuta siddhipradanu vignEsha dayadiMda
neneda kAryagaLella neravErutirali
dinadinadi dhanvaMtri ApattugaLa kaLedu
mana haruShavittu mannisali biDade [2]
niruta suj~jAnavanu Iva guru madhvarAya
gurugaLASIrvAda namagAgali
puraMdara viThThalana karuNeyiMdali sakala
surarolume namage susthiravAgali [3]
Leave a Reply