Composer : Shri Pranesha dasaru
ಶರಣು ನಿನ್ನ ಚರಣ ಕಮಲಗಳಿಗೆ ಶಿವ ಶಿವಾ |
ಕರವ ಪಿಡಿದು ಸುಮತಿಯಿತ್ತು ಪೊರೆಯೊ ಶಿವ ಶಿವಾ || ಪ ||
ದಂತಿ ಚರ್ಮ ಹೊದ್ದ ಭಸ್ಮಭೂಶ ಶಿವ ಶಿವಾ |
ಚಿಂತಿ ರಹಿತ ಲಯಕೆ ಕರ್ತೃನಾದ ಶಿವ ಶಿವಾ ||
ಸಂತರಿಂದ ಸತತ ಸೇವೆಗೊಂಬ ಶಿವ ಶಿವಾ |
ಕಂತು ಪಿತನ ಪೂರ್ಣ ಪ್ರೀತಿ ಪಾತ್ರ ಶಿವ ಶಿವಾ || ೧ ||
ಮಂದಮತಿಯ ತಪ್ಪಿನೆಣಿಸ ಬ್ಯಾಡ ಶಿವ ಶಿವಾ |
ಕುಂದು ನಿನಗೆ ಎಂದಿಗೆಂದಿಗಿಲ್ಲ ಶಿವ ಶಿವಾ ||
ಮಂದಗಮನೆ ನಿನ್ನ ಮನದೊಳಿಲ್ಲೆ ಶಿವ ಶಿವಾ |
ತಂದು ಕೊಂಡ ದಕ್ಷ ವೃಥ ಕುವಾರ್ತಿ ಶಿವ ಶಿವಾ || ೨ ||
ಹೀನರಂತೆ ನಿನಗೆ ಕೋಪ ಸಲ್ಲ ಶಿವ ಶಿವಾ |
ಮಾಣು ಯಜ್ಞ ಸಹಾಯನಾಗು ದಯದಿ ಶಿವ ಶಿವಾ ||
ಏನುಪಾಯವಿದಕೆ ಚಿಂತಿಸುವದು ಶಿವ ಶಿವಾ |
ಪ್ರಾಣೇಶ ವಿಠಲ ನಿನ್ನ ವಶದೊಳಿಹನು ಶಿವ ಶಿವಾ || ೩ ||
SaraNu ninna caraNa kamalagaLige Siva SivA |
karava piDidu sumatiyittu poreyo Siva SivA || pa ||
daMti carma hodda BasmabhUsha Siva SivA |
ciMti rahita layake kartRunAda Siva SivA ||
saMtariMda satata sEvegoMba Siva SivA |
kaMtu pitana pUrNa prIti pAtra Siva SivA || 1 ||
maMdamatiya tappineNisa byADa Siva SivA |
kuMdu ninage eMdigeMdigilla Siva SivA ||
maMdagamane ninna manadoLille Siva SivA |
taMdu koMDa dakSha vRutha kuvArti Siva SivA || 2 ||
hInaraMte ninage kOpa salla Siva SivA |
mANu yaj~ja sahAyanAgu dayadi Siva SivA ||
EnupAyavidake ciMtisuvadu Siva SivA |
prANESa viThala ninna vaSadoLihanu Siva SivA || 3 ||
Leave a Reply