Composer : Shri Jagannatha dasaru
ರೋಗ ಹರನೆ ಕೃಪಾಸಾಗರ
ಶ್ರೀಗುರು ರಾಘವೇಂದ್ರ ಪರಿಪಾಲಿಸೊ | ಪ |
ಸಂತತ ದುರ್ಮತ ಧ್ವಾಂತ ದಿವಾಕರ |
ಸಂತ ವಿನುತ ಮಾತ ಲಾಲಿಸೊ | ೧ |
ಪಾವನಗಾತ್ರ ಸುದೇವವರನೆ |
ತವ ಸೇವಕ ಜನರೊಳಗಾಡಿಸೊ | ೨ |
ಘನ್ನ ಮಹಿಮ ಜಗನ್ನಾಥವಿಟ್ಠಲ
ಪ್ರಿಯ, ನಿನ್ನಾರಧನೆ ಮಾಡಿಸೊ | ೩ |
rOga harane kRupAsAgara
SrIguru rAGavEMdra paripAliso | pa |
saMtata durmata dhvAMta divAkara |
saMta vinuta mAta lAliso | 1 |
pAvanagAtra sudEvavarane |
tava sEvaka janaroLagADiso | 2 |
Ganna mahima jagannAthaviTThala
priya, ninnAradhane mADiso | 3 |
Leave a Reply