Rayara Paado ele manave

Composer : Shri Gurushyamasundara dasaru

By Smt.Shubhalakshmi Rao

ರಾಯರ ಪಾಡೋ ಎಲೆ ಮನವೇ
ಭವ ಸಾಗರವನು ಜಯಿಸ ಬೇಕಾದರೆ ||ಪ||

ಕಲಿಯುಗವಿದು ಬಲು ಘೋರವಿದು
ಮಲಿನ ವಾಗವುದು ಮನ ಬಲು ಸುಲಭದಲಿ
ಗೊಲ್ಲ ಮಾಧವನ ಒಲುಮೆಯ ಪಡೆಯಲು
ಸುಲಭದ ಮಾರ್ಗವು ರಾಯರ ನಾಮವು || ೧ ||

ಎನಿತು ಜನುಮದ ಪುಣ್ಯವೋ ಮಾನವನಾಗಿರುವಿ
ಘನ್ನನೆನಿಪ ರಾಘವೇಂದ್ರ ಗುರುಗಳ ಪಡೆದಿರುವಿ
ಮುನ್ನ ಯೋಚಿಸದೆ ಗುರು ಪಾದಕ್ಕೆ ಶರಣೆನಲು
ಮನುಜನೆ ನಿನ್ನ ಸಕಲ ಜನುಮಗ-ಳುದ್ಧರಿಸುವವು || ೨ ||

ದೇಹವು ಶಾಶ್ವತವಲ್ಲ ತಿಳಿ ಮನವೆ
ದಾಹಕೆ ದಾಸನಾಗದಿರು ಎಲೆ ಮನವೆ
ಬಹು ವಿಧದಿ ಅನುಗ್ರಹಿಪ ರಾಘವೇಂದ್ರರ ಭಜಿಸಿ
ಮೋಹಕ ಗುರು ಶ್ಯಾಮ ವಿಠಲನ ನೀ ಪೊಂದು || ೩ ||


rAyara pADO ele manavE
Bava sAgaravanu jayisa bEkAdare ||pa||

kaliyugavidu balu GOravidu
malina vAgavudu mana balu sulaBadali
golla mAdhavana olumeya paDeyalu
sulaBada mArgavu rAyara nAmavu || 1 ||

enitu janumada puNyavO mAnavanAgiruvi
ghannanenipa rAGavEMdra gurugaLa paDediruvi
munna yOcisade guru pAdakke SaraNenalu
manujane ninna sakala janumaga-Luddharisuvavu || 2 ||

dEhavu SASvatavalla tiLi manave
dAhake dAsanAgadiru ele manave
bahu vidhadi anugrahipa rAGavEMdrara Bajisi
mOhaka guru SyAma viThalana nI poMdu || 3 ||

Leave a Reply

Your email address will not be published. Required fields are marked *

You might also like

error: Content is protected !!