Raghavendra gururaya enna

Composer : Shri Bheemesha vittala

By Smt.Shubhalakshmi Rao

ರಾಘವೇಂದ್ರ ಗುರುರಾಯ ಯೆನ್ನ | ಪಾ |
ಪೌಘಗಳೆಣಿಸದೆ ಪಾಲಿಸೋ [ಪ]

ನಾಗಶಯನನಣುಗನೇ ವಂದಿಪೆ | ಅನು |
ರಾಗದಿ ಹರಿಯನು ತೋರಿಸು [ಅ. ಪ]

ಹೀನ ವಿಷಯಗಳ ನೋಡುತ ಮನದಲಿ |
ಧ್ಯಾನವಗೊಳಿಸದೆ ಪೋಷಿಸು (೧)

ಬುಧರ ಚರಣಗಳ ನಮಿಸುತಲನುದಿನ |
ಮುದವ ಬಡುವ ಪಥವ ತೋರಿಸೋ (೨)

ನೀಚರ ಮನೆ ಮೃಷ್ಟಾನ್ನವ ತ್ಯಜಿಸುತ |
ಯಾಚನೆ ಮಾಡಿಸುವದೇ ಲೇಸೋ (೩)

ಕುನರ ಜೀವಿಯ ಬಿಡಿಸುತ ಭಕುತರ ಮನೆ |
ಶುನಕನ ಮಾಡುತ ಪಾಲಿಸೋ (೪)

ಬಾಲನ ಬಿನ್ನಪ ಭೀಮೇಶ ವಿಠ್ಠಲನ |
ಶೀಲ ಬಲ್ಲ ಗುರು ಲಾಲಿಸೋ (೫)


rAGavEMdra gururAya yenna | pA |
pauGagaLeNisade pAlisO [pa]

nAgaSayananaNuganE vaMdipe | anu |
rAgadi hariyanu tOrisu [a. pa]

hIna viShayagaLa nODuta manadali |
dhyAnavagoLisade pOShisu (1)

budhara caraNagaLa namisutalanudina |
mudava baDuva pathava tOrisO (2)

nIcara mane mRuShTAnnava tyajisuta |
yAcane mADisuvadE lEsO (3)

kunara jIviya biDisuta Bakutara mane |
Sunakana mADuta pAlisO (4)

bAlana binnapa BImESa viThThalana |
SIla balla guru lAlisO (5)

Leave a Reply

Your email address will not be published. Required fields are marked *

You might also like

error: Content is protected !!