Composer : Shri kanakadasaru
ಎಂದೆಂದು ಇಂಥ ಚೋದ್ಯ ಕಂಡಿದ್ದಿಲ್ಲವೋ |ಪ|
ಅಂಗಡಿಯ ಬೀದಿಯೊಳೊಂದು ಆಕಳ ಕರು ನುಂಗಿತು
ಲಂಘಿಸುವ ಹುಲಿಯ ಕಂಡು ನರಿಯು ನುಂಗಿತು [೧]
ಹುತ್ತದೊಳಾಡುವ ಸರ್ಪ ಮತ್ತಗಜವ ನುಂಗಿತು
ಉತ್ತರ ದಿಶೆಯೊಳು ಬೆಳದಿಂಗಳಾಯಿತಮ್ಮಾ [೨]
ಯೋಗಮಾರ್ಗಿ ಕಾಗಿನೆಲೆಯಾದಿಕೇಶವರಾಯ
ಭಾಗವತರ ಬೆಡಗಿದು ಬೆಳದಿಂಗಳಾಯಿತಮ್ಮಾ [೩]
eMdeMdu iMtha cOdya kaMDiddillavO |pa|
aMgaDiya bIdiyoLoMdu AkaLa karu nuMgitu
laMGisuva huliya kaMDu nariyu nuMgitu [1]
huttadoLADuva sarpa mattagajava nuMgitu
uttara diSeyoLu beLadiMgaLAyitammA [2]
yOgamArgi kAgineleyAdikESavarAya
BAgavatara beDagidu beLadiMgaLAyitammA [3]
Leave a Reply