Composer : Shri Vyasarajaru
ಜಯ ಜಯ ಜಯರಾಯ |
ದಯದಿಂದ ಪಾಲಿಸೋ ಮಹರಾಯ || ಪ ||
ಪ್ರತಿಜನ್ಮದಿ ತ್ವಚ್ಚರಣದಲಿ
ಸದ್ರತಿಯನಿತ್ತು ಕಾಯೋ ಕರುಣದಲಿ |
ಅತಿ ಬಲದಿಂ ಹೃದ್ಗತ ತಮವಳಿದ್
ಉನ್ನತಿಯನು ಕೊಡು ಸನ್ನುತ ಭರದಿ || ೧ ||
ಅಚ್ಯುತ ಪಾದಾಂಬುಜ ಭೃಂಗ
ನಿನ್ನರ್ಚನೆಯನು ಕೊಡು ಕಮಲಾಂಗ ಗುರು |
ತ್ವಚ್ಚರಿತೆಯ ತೋರೋ ಗುಣಸಾಂದ್ರ
ಪ್ರಚ್ಚುತ ದೂಷಣ ಸಚ್ಚಿತ ಭೂಷಣ
ಮೆಚ್ಚಿಪೆ ನಿನ್ನನು ಮುನಿತುಂಗ || ೨ ||
ಬೃಂದಾರಕ ವೃಂದಾರಾಧ್ಯ
ಅಘವೃಂದವಿದೂರ ಕುಜನಭೇದ್ಯ |
ಆನಂದತೀರ್ಥರ ಮತ ಜನಬೋಧ್ಯ
ಸುಂದರ ತಾಂಡವದಿಂದಿಹ ಕೃಷ್ಣನ
ವಂದಿಪ ಸದ್ಗುರು ನಿರವದ್ಯ || ೩ ||
jaya jaya jayarAya |
dayadiMda pAlisO maharAya || pa ||
pratijanmadi tvaccaraNadali
sadratiyanittu kAyO karuNadali |
ati baladiM hRudgata tamavaLid
unnatiyanu koDu sannuta Baradi || 1 ||
acyuta pAdAMbuja BRuMga
ninnarcaneyanu koDu kamalAMga guru |
tvaccariteya tOrO guNasAMdra
praccuta dUShaNa saccita BUShaNa
meccipe ninnanu munituMga || 2 ||
bRuMdAraka vRuMdArAdhya
aGavRuMdavidUra kujanaBEdya |
AnaMdatIrthara mata janabOdhya
suMdara tAMDavadiMdiha kRuShNana
vaMdipa sadguru niravadya || 3 ||
Leave a Reply