Composer : Shri Purandara dasaru
ಆರಿಗೆ ವಧುವಾದೆ ಅಂಬುಜಾಕ್ಷಿ
ಕ್ಷೀರಾಬ್ಧಿಕನ್ನಿಕೆ ಶ್ರೀಮಹಾಲಕುಮಿ || ಪ||
ಶರಧಿಬಂಧನ ರಾಮಚಂದ್ರಮೂರುತಿಗೋ |
ಪರಮಾತ್ಮ ಶ್ರೀ ಅನಂತಪದ್ಮನಾಭನಿಗೋ |
ಸರಸಿಜನಾಭ ಜನಾರ್ಧನಮೂರುತಿಗೋ |
ಎರಡು ಹೊಳೆಯ ರಂಗಪಟ್ಟಣವಾಸಗೋ |೧|
ಚೆಲುವ ಬೇಲೂರ ಚೆನ್ನಿಗರಾಯನಿಗೋ |
ಕೆಳದಿ ಹೇಳು ಉಡುಪಿಯ ಕೃಷ್ಣರಾಯನಿಗೋ |
ಇಳೆಯೊಳು ಪಂಢರಾಪುರನಿಲಯ ವಿಠಲಗೋ |
ನಳಿನಾಕ್ಷಿ ಹೇಳು ಬದರೀನಾರಾಯಣನಿಗೋ |೨|
ಮಲಯಜಗಂಧಿ ಬಿಂದುಮಾಧವಗೋ |
ಸುಲಭ ದೇವರ ದೇವ ಪುರುಷೋತ್ತಮಗೋ |
ಫಲದಾಯಕ ನಿತ್ಯಮಂಗಳನಾಯಕಗೋ |
ಚೆಲುವೆ ನಾಚದೆ ಪೇಳು ಶ್ರೀವೆಂಕಟೇಶಗೋ |೩|
ವಾಸವಾರ್ಚಿತ ಕಾಂಚಿ ವರದರಾಜನಿಗೋ |
ಅಸುರಾರಿ ಶ್ರೀಮುಷ್ಣದ್-ಆದಿವರಾಹನಿಗೋ |
ಶೇಷಶಾಯಿಯಾದ ಶ್ರೀರಂಗನಾಯಕಗೋ
ಸಾಸಿರನಾಮದೊಡೆಯ ಅಳಗಿರೀಶಗೋ |೪|
ಶರಣಾಗತರ ಪೊರೆವ ಸಾರಂಗಪಾಣಿಗೋ |
ವರಗಳೀವ ಶ್ರೀನಿವಾಸಮೂರುತಿಗೋ |
ಕುರುಕುಲಾಂತಕ ರಾಜಗೋಪಾಲಮೂರುತಿಗೋ |
ಸ್ಥಿರವಾದ ಪುರಂದರವಿಠಲರಾಯನಿಗೋ |೫|
Arige vadhuvAde aMbujAkShi
kShIrAbdhikannike SrImahAlakumi || pa||
SaradhibaMdhana rAmacaMdramUrutigO |
paramAtma SrI anaMtapadmanABanigO |
sarasijanABa janArdhanamUrutigO |
eraDu hoLeya raMgapaTTaNavAsagO |1|
celuva bElUra cennigarAyanigO |
keLadi hELu uDupiya kRuShNarAyanigO |
iLeyoLu paMDharApuranilaya viThalagO |
naLinAkShi hELu badarInArAyaNanigO |2|
malayajagaMdhi biMdumAdhavagO |
sulaBa dEvara dEva puruShOttamagO |
PaladAyaka nityamaMgaLanAyakagO |
celuve nAcade pELu SrIveMkaTESagO |3|
vAsavArcita kAMci varadarAjanigO |
asurAri SrImuShNad-AdivarAhanigO |
SEShaSAyiyAda SrIraMganAyakagO
sAsiranAmadoDeya aLagirISagO |4|
SaraNAgatara poreva sAraMgapANigO |
varagaLIva SrInivAsamUrutigO |
kurukulAMtaka rAjagOpAlamUrutigO |
sthiravAda puraMdaraviThalarAyanigO |5|
Leave a Reply