Composer : Shri Purandara dasaru
ಯಾದವ ನಿ ಬಾ ಯದುಕುಲ ನಂದನ
ಮಾಧವ ಮಧುಸೂದನ ಬಾರೋ || ಪ||
ಸೋದರ ಮಾವನ ಮದುರೆಲಿ ಮಡುಹಿದ
ಯಶೋದ ನಂದನ ನೀ ಬಾರೋ ||ಅಪ||
ಶಂಖ ಚಕ್ರವು ಕೈಯೇಲಿ ಹೊಳೆಯುತ
ಬಿಂಕದ ಕೋವಲ ನಿ ಬಾರೋ
ಅಕಳಂಕ ಮಹಿಮನೆ ಆದಿ ನಾರಾಯಣ
ಬೇಕೆಂಬ ಭಕ್ತರಿಗೆ ಒಲಿ ಬಾರೋ ||೧||
ಕಣ ಕಲಂದಿಗೆ ಘಲು ಘಲುರೆನುತಲಿ
ಝುನು ಝುನು ವೇಣು ನಾದದಲಿ
ಚಿನ್ನಿಕೊಲು ಚೆಂಡು ಬುಗರಿಯನಾಡುತ
ಸಣ್ಣ ಸಣ್ಣ ಗೋವಳರೋದಗುಡಿ ||೨||
ಖಗ ವಾಹನನೆ ಬಗೆ ಬಗೆ ರೂಪನೆ
ನಗೆಮೊಗದರಸನೆ ನಿ ಬಾರೋ
ಜಗದೊಳು ನಿನ್ನಯ ಮಹಿಮೆಯ ಪೋಗಲುವೆ
ಪುರಂದರ ವಿಠಲ ನಿ ಬಾರೋ ||೩||
yAdava ni bA yadukula naMdana
mAdhava madhusUdana bArO || pa||
sOdara mAvana madureli maDuhida
yaSOda naMdana nI bArO ||apa||
SaMKa cakravu kaiyEli hoLeyuta
biMkada kOvala ni bArO
akaLaMka mahimane Adi nArAyaNa
bEkeMba Baktarige oli bArO ||1||
kaNa kalaMdige Galu Galurenutali
Junu Junu vENu nAdadali
cinnikolu ceMDu bugariyanADuta
saNNa saNNa gOvaLarOdaguDi ||2||
Kaga vAhanane bage bage rUpane
nagemogadarasane ni bArO
jagadoLu ninnaya mahimeya pOgaluve
puraMdara viThala ni bArO ||3||
Leave a Reply