Guruvina gulama

Composer : Shri Purandara dasaru

By Shri Krishnan

ಆವಿನ ಕೊಂಬಿನ ತುದಿಯಲ್ಲಿ ಸಾಸಿವೆ
ನಿಂತಷ್ಟು ಕಾಲವೇ
ನಿನ್ನ ನೆನೆದ ಜೀವರು ಮುಕ್ತನಾಗುವರೊ
ಸದಾ ಕಾಲವು ಹರೀ ಹರೀ ಹರೀ ಎಂದು ವದರುತಾನಿರುವ
ಈ ಜೀವರು ಮುಕ್ತರಾಗುವದಕ್ಕೆ
ಏನು ಸಂಶಯವೋ ಪುರಂದರವಿಠಲ ||


ಗುರುವಿನ ಗುಲಾಮನಾಗುವ ತನಕ
ದೊರೆಯದಣ್ಣ ಮುಕುತಿ
ಪರಿ ಪರಿ ಶಾಸ್ತ್ರವನೋದಿದರಿಲ್ಲ
ವ್ಯರ್ಥವಾಯಿತು ಭಕುತಿ [ಪ]

ಆರು ಶಾಸ್ತ್ರವ ಓದಿದರಿಲ್ಲ
ಮೂರಾರು ಪುರಾಣವ ಮುಗಿಸಿದರಿಲ್ಲ
ಸಾರಿ ಸಜ್ಜನರ ಸಂಗವ ಮಾಡದೆ
ಧೀರನಾಗಿ ತಾ ತಿರುಗಿದರಿಲ್ಲ [೧]

ಕೊರಳೊಳು ಮಾಲೆ ಧರಿಸಿದರಿಲ್ಲ
ಬೆರಳೊಳು ಜಪಮಣಿ ಎಣಿಸಿದರಿಲ್ಲ
ಮರುಳನಾಗಿ ತಾ ಶರೀರಕೆ ಬೂದಿಯ
ಒರಸಿಕೊಂಡು ತಾ ತಿರುಗಿದರಿಲ್ಲ [೨]

ನಾರಿಯ ಭೋಗ ಅಳಿಸಿದರಿಲ್ಲ
ಶಾರೀರಕೆ ಸುಖವನು ಬಿಡಿಸಿದರಿಲ್ಲ
ನಾರದ ವರದ ಪುರಂದರ ವಿಠಲನ
ಸೇರಿಕೊಂಡು ತಾ ಪಡೆಯುವ ತನಕ [೩]


Avina koMbina tudiyalli sAsive
niMtaShTu kAlavE
ninna neneda jIvaru muktanAguvaro
sadA kAlavu harI harI harI eMdu vadarutAniruva
I jIvaru muktarAguvadakke
Enu saMshayavO puraMdaraviThala ||


guruvina gulAmanAguva tanaka
doreyadaNNa mukuti
pari pari shAstravanOdidarilla
vyarthavAyitu bhakuti [pa]

Aru shAstrava Odidarilla
mUrAru purANava mugisidarilla
sAri sajjanara saMgava mADade
dhIranAgi tA tirugidarilla [1]

koraLoLu mAle dharisidarilla
beraLoLu japamaNi eNisidarilla
maruLanAgi tA sharIrake boodiya
orasikoMDu tA tirugidarilla [2]

nAriya bhOga aLisidarilla
shArIrake sukhavanu biDisidarilla
nArada varada puraMdara viThalana
sErikoMDu tA paDeyuva tanaka [3]

Leave a Reply

Your email address will not be published. Required fields are marked *

You might also like

error: Content is protected !!