Darmya dura nillu – Lavani pada

Composer : Shri Shrida vittala

By Smt.Shubhalakshmi Rao

ದಾರ್ಮ್ಯಾ ದೂರ ನಿಲ್ಲು ದಾರಿಕಟ್ಟಿ ಬರದಿರು
ಯಾರಿಗಾಗಿ ಮಾರಬಂದೆ ಹಾಲ್ ಮೊಸರಾ, ಹೇಳ್ ನಿನ್ನ ಹೆಸರಾ
ದೂರ್ ದೂರಲ್ಲ ಕೋಲ್ ಕಾರ ಕೃಷ್ಣ ಕೇಳು ಬಾಲೆ
ದಾರಿಯೋಳ್ ಸುಂಕ ಶೋದಗಳುಂಟೂ ಇದು ಏನ್ ಗಂಟು (೧)

ಗಂಡನುಳ್ಳ ಬಾಲೆಯರ ದುಂಡಕುಚ ಮುಟ್ಟಲಿಕ್ಕೆ
ಪುಂಡತನ ಬುದ್ಧಿಯಿದು ಥರವೇನೋ ಜೀವಯರವೇನೋ
ಪುಂಡತನ ಬುದ್ದಿಯಿದು ಥರವೇನೆಂದರೆ
ಹೆಂಡತೆಂತ ಮುಟ್ಟಿದಾಗ ಕುಚಯುಗವಾ ಕಾಣದೆ ನಗುವ (೨)

ಯಾಕೆ ಮಾತಾಡುತಿದ್ದಿ ಕಾಕು ಮಾತಾಡುತಿದ್ದಿ
ಸಾಕು ನಿನ್ನ ಮಾತೀಗ ಸಲುಗೇನೋ ನಿನ್ನ ನಗೆ ಏನೋ
ಸಾಕು ನಿನ್ನ ಮಾತೀಗ ಸಲುಗೇನೆಂದರೆ
ಬೇಕು ಬೇಡಿದ್ದು ನಾ ಕೊಡುತೇನೆ ನಿನ್ನಿಡುತೇನೇ (೩)

ಕೊಂಡು ಕೊಂಡು ನಡೆಸಲಿಕ್ಕೆ ಶೆಟ್ಟಿಗಾರ ನಾನಲ್ಲ
ನೀನಿಟ್ಟುಕೊಂಡ ಸೂಳೆ ನಾನಲ್ಲ ಹೋಗೋ ನೀನಲ್ಲ ಸಾಗೋ
ಇಟ್ಟುಕೊಂಡ ಸೂಳೆ ನಾನಲ್ಲ ಹೋಗೆಂದರೆ
ಕಟ್ಟಿಕೊಂಡು ಹೋದೇನು ಒಳತನಕಾ ಬೆಳಬೆಳತನಕಾ (೪)

ಒಳತನಕ್ಯಾತಕೆ ಬೆಳತನಕ್ಯಾತಕೆ
ತಾಳಿಯರಿಲ್ಲಾ ಮಾತಿನ ಬೆಡಗಾ ಅಹುದೆಲೊ ಹುಡುಗ
ತಿಳಿಯದಿದ್ದರೆ ನಾ ತಿಳಿಯ ಹೇಳಿಕೊಡುವೆನೆಂದು
ಸೆಳೆದಪ್ಪಿಕೊಂಡ ಶ್ರೀದವಿಠಲ ಬಹುಬಹು ಧಿಟಲಾ (೫)


dArmyA dUra nillu dArikaTTi baradiru
yArigAgi mArabaMde hAl mosarA, hEL ninna hesarA
dUr dUralla kOl kAra kRuShNa kELu bAle
dAriyOL suMka SOdagaLuMTU idu En gaMTu (1)

gaMDanuLLa bAleyara duMDakuca muTTalikke
puMDatana buddhiyidu tharavEnO jIvayaravEnO
puMDatana buddiyidu tharavEneMdare
heMDateMta muTTidAga kucayugavA kANade naguva (2)

yAke mAtADutiddi kAku mAtADutiddi
sAku ninna mAtIga salugEnO ninna nage EnO
sAku ninna mAtIga salugEneMdare
bEku bEDiddu nA koDutEne ninniDutEnE (3)

koMDu koMDu naDesalikke SeTTigAra nAnalla
nIniTTukoMDa sULe nAnalla hOgO nInalla sAgO
iTTukoMDa sULe nAnalla hOgeMdare
kaTTikoMDu hOdEnu oLatanakA beLabeLatanakA (4)

oLatanakyAtake beLatanakyAtake
tALiyarillA mAtina beDagA ahudelo huDuga
tiLiyadiddare nA tiLiya hELikoDuveneMdu
seLedappikoMDa SrIdaviThala bahubahu dhiTalA (5)

Leave a Reply

Your email address will not be published. Required fields are marked *

You might also like

error: Content is protected !!