Composer : Shri Purandara dasaru
ಡಂಗುರಾವ ಸಾರಿ ಹರಿಯ ಡಿಂಗರಿಗರೆಲ್ಲರು
ಭೂ ಮಂಡಲಕ್ಕೆ ಪಾಂಡುರಂಗ ವಿಠ್ಠಲ ಪರದೈವವೆಂದು ||
ಒಡಲ ಜಾಗಟೆಯ ಮಾಡಿ ನುಡಿವ ನಾಲಿಗೆಯ ಪಿಡಿದು
ಬಿಡದೆ ಢಣಾ ಢಣಾರೆಂದು ಬಡಿದು ಚಪ್ಪಾಳಿಕ್ಕುತಾ || ೧ ||
ಹರಿಯು ಮುಡಿದ ಹೂವ ಹರಿವಾಣದಲ್ಲಿ ಹೊತ್ತುಕೊಂಡು
ಹರುಷದಿಂದ ಹಾಡಿ ಪಾಡಿ ಕುಣಿದು ಚಪ್ಪಾಳಿಕ್ಕುತಾ || ೨ ||
ಇಂತು ಲೋಕಕೆಲ್ಲ ಲಕ್ಷ್ಮೀ ಕಾಂತನಲ್ಲದಿಲ್ಲವೆಂದು
ಸಂತತಂ ಭಜಿಸುತ ನಿಶ್ಚಿಂತ ಪುರಂದರ ವಿಠಲನೆಂದೂ || ೩ ||
DaMgurAva sAri hariya DiMgarigarellaru
bhU maMDalakke pAMDuraMga viThThala paradaivaveMdu ||
oDala jAgaTeya mADi nuDiva nAligeya piDidu
biDade DhaNA DhaNAreMdu baDidu cappALikkutA || 1 ||
hariyu muDida hUva harivANadalli hottukoMDu
haruShadiMda hADi pADi kuNidu cappALikkutA || 2 ||
iMtu lOkakella lakShmI kAMtanalladillaveMdu
saMtataM Bajisuta nishchiMta puraMdara viThalaneMdU || 3 ||
Leave a Reply