Composer : Shri Shrida vittala dasaru
ತಂಗಿ ಕೇಳಿದ್ಯಾ ಅಂಗನಾಮಣಿ
ರಂಗನೊಲಿದ ಭಾಗವತರ ಮಹಿಮೆ ಕೇಳಿದ್ಯಾ ||ಪ||
ಶ್ರವಣಾದಿ ನವವಿಧ ಸವಿಯ ಭಕುತಿಯಿಂದ
ಪ್ರವೀಣನೆನಿಸಿ ಮಾಧವನ ಧ್ಯಾನಿಪ ಖ್ಯಾತಿ ||೧||
ಅಮಲ ಸತ್ಕರ್ಮದಿ ಶಮದಮ ಪೂರ್ವಕ
ಅಮಿತ ಮಹಿಮನಂಘ್ರಿ ಕಮಲಾಖ್ಯಪರ ಖ್ಯಾತಿ ||೨||
ಶ್ರೀದವಿಠ್ಠಲನ ಪಾದ ಭಜಕರಾದ
ಸಾಧುವರ್ಯರ ಸುಬೋಧ ಬಣ್ಣಿಪರಾರೆ ||೩||
taMgi kELidyA aMganAmaNi
raMganolida bhAgavatara mahime kELidyA ||pa||
shravaNAdi navavidha saviya bhakutiyiMda
pravINanenisi mAdhavana dhyAnipa khyAti ||1||
amala satkarmadi shamadama pUrvaka
amita mahimanaMghri kamalAkhyapara khyAti ||2||
SrIdaviThThalana pAda bhajakarAda
sAdhuvaryara subOdha baNNiparAre ||3||
Leave a Reply