Composer : Shri Shrida vittala dasaru on Jagannatha dasaru
ಸಂಗಸುಖವ ಬಯಸಿ ಬದುಕಿರೊ | ಶ್ರೀಮದ್ |
ರಂಗನೊಲಿದ ಭಾಗವತರ || ಪ ||
ಸಂಗಸುಖವ ಬಯಸಿ ಬದುಕಿ ಭಂಗ ಬಡಿಪ ಭವವ ನೂಕಿ |
ಹಿಂಗದೆ ನರಸಿಂಗನನ್ನು ಕಂಗಳಿಂದಲಿ ಕಾಣುತಿಹರ || ಅ .ಪ ||
ಪುಟ್ಟಿದಾರಭ್ಯ ಪರಮ ವೈಷ್ಣವಾಧ್ಯಕ್ಷರೆನಿಸಿ |
ಶಿಷ್ಟ ಸದಾಚಾರದಲ್ಲಿ ನಿಷ್ಟರಾಗಿ ನಿತ್ಯ ಮುದ್ದು |
ಕೃಷ್ಣ ಕೀರ್ತನೆಯ ಪಾಡುತಾ | ಮಧ್ವಮತವ |
ಪುಷ್ಟಿಗೈಸಿ ಖಳರ ಕಾಡುತಾ | ಕಾಮ್ಯಕರ್ಮ |
ಬಿಟ್ಟು ಭಕುತಿಯನ್ನೆ ಮಾಡುತ | ಬಂದ ಲಾಭ |
ನಷ್ಟತುಷ್ಟಿಗಳಿಗೆ ವೊಡಂಬಟ್ಟ ಬಗೆಯ ಪೇಳಲೆಷ್ಟು || ೧ ||
ಭೂತದಯಾಶೀಲರಾದ ನೀತಗುರುದ್ವಾರ ಜಗ – |
ನ್ನಾಥವಿಠಲಾಂಕಿತವನು ಪ್ರೀತಿಯಿಂದ ಪಡೆದು ಸಂ – |
ಗೀತ ವೃತ್ತಪದ ಸುಳಾದಿಯ | ಪೇಳಿ ಪ್ರೇ – |
ಮಾತಿಶಯದಿ ಮಧುವಿರೋಧಿಯಾ | ಒಲಿಸಿಕೊಂಡು |
ಜಾತರಾಗಿ ಜವನ ಬಾಧಿಯ | ಬಯಲು ಮಾಡಿ |
ಖ್ಯಾತರಾಗಿಹರು ಪುಶಿಯ ಮಾತಿದಲ್ಲ ಮೀರಸಲ್ಲ || ೨ ||
ಮೇದಿನಿಯ ಮ್ಯಾಲುಳ್ಳ ಗಂಗಾದಿ ತೀರ್ಥಪತಿಗಳಿವರ |
ಕಾದುಕೊಂಡಿಹರು ಬಿಡದೆ ಸ್ವಾದಿ ರಾಜೇಂದ್ರರ ಪ್ರ – |
ಸಾದದಿಂದ ಹರಿಕಥಾಮೃತ | ಸಾರ ತತ್ವ |
ಸಾಧು ಜನರಿಗಾಗಿ ಪ್ರಾಕೃತಾ | ಸುಪದ್ಧತಿಯನು |
ಸಾದರದಲಿ ಪೇಳಿ ದುಷ್ಕೃತಾ | ದೂರಮಾಡಿ |
ಮೋದಿಸುವರಿಗೆಣೆಗಾಣೆ ಶ್ರೀದವಿಟ್ಠಲನ ಆಣೆ || ೩ ||
saMgasuKava bayasi badukiro | SrImad |
raMganolida BAgavatara || pa ||
saMgasuKava bayasi baduki BaMga baDipa Bavava nUki |
hiMgade narasiMganannu kaMgaLiMdali kANutihara || a .pa ||
puTTidAraBya parama vaiShNavAdhyakSharenisi |
SiShTa sadAcAradalli niShTarAgi nitya muddu |
kRuShNa kIrtaneya pADutA | madhvamatava |
puShTigaisi KaLara kADutA | kAmyakarma |
biTTu Bakutiyanne mADuta | baMda lABa |
naShTatuShTigaLige voDaMbaTTa bageya pELaleShTu || 1 ||
BUtadayASIlarAda nItagurudvAra jaga – |
nnAthaviThalAMkitavanu prItiyiMda paDedu saM – |
gIta vRuttapada suLAdiya | pELi prE – |
mAtiSayadi madhuvirOdhiyA | olisikoMDu |
jAtarAgi javana bAdhiya | bayalu mADi |
KyAtarAgiharu puSiya mAtidalla mIrasalla || 2 ||
mEdiniya myAluLLa gaMgAdi tIrthapatigaLivara |
kAdukoMDiharu biDade svAdi rAjEMdrara pra – |
sAdadiMda harikathAmRuta | sAra tatva |
sAdhu janarigAgi prAkRutA | supaddhatiyanu |
sAdaradali pELi duShkRutA | dUramADi |
mOdisuvarigeNegANe SrIdaviTThalana ANe || 3 ||
Leave a Reply