Nidre madida ranga

Composer : Shri Vadirajaru

By Smt.Shubhalakshmi Rao

ನಿದ್ರೆ ಮಾಡಿದ ರಂಗ ನಿದ್ರೆ ಮಾಡಿದ
ಭದ್ರ ಹಾಸಿಗೆ ಮೇಲೆ
ಸಮುದ್ರ ರಾಜನ ಮಗಳ ಸಹಿತ [ಪ.]

ವೇದಕದ್ದ ಅಸುರನಿಗಾಗಿ
ಆ ಮತ್ಸ್ಯ ರೂಪವ ಧರಿಸಿ
ಸಾಧಿಸಿ ಅಸುರನ ಕೊಂದ
ವಾರಿಜಾಕ್ಷ ಬಳಲಿ ಬಂದು (೧)

ತರಳ ಹಿರಣ್ಯಕಶ್ಯಪನ
ಕರುಳ ಬಗೆದು ಕೊರಳೊಳಿಟ್ಟು
ನರಮೃಗ ರೂಪವ ತಾಳಿ
ನರಸಿಂಹ ಬಳಲಿ ಬಂದು (೨)

ಬಲಿಯ ದಾನವನ್ನೆ ಬೇಡಿ
ನೆಲನ ಮೂರಡಿ ಮಾಡಿ
ಒಲಿದು ಬಾಗಿಲನ್ನೆ ಕಾಯ್ದ
ವಾಮನನಾದ ಬಳಲಿ ಬಂದು (೩)

ತಂದೆಯ ಮಾತನ್ನೆ ಕೇಳಿ
ತಾಯಿ ಶಿರವನ್ನೆ ಅಳಿದು
ಏಳುಮೂರು ಬಾರಿ ನೀನು
ಭೂಮಿಯ ಪ್ರದಕ್ಷಣೆ ಮಾಡಿ (೪)

ಸೀತೆಗಾಗಿ ಪಡೆಯ ಸವರಿ
ಸೇತುಬಂಧನವ ಮಾಡಿ
ದೂತರಾವಣನ್ನ ಕೊಂದು
ಸೀತಾರಾಮ ಬಳಲಿ ಬಂದು (೫)

ಗೋಕುಲದಲ್ಲಿ ಹುಟ್ಟಿ
ಗೋವುಗಳನ್ನೆಲ್ಲ ಕಾಯ್ದು
ಗೋಪಸ್ತ್ರೀಯರ ಸೀರೆ ಸೆಳೆದು
ಗೋಪಾಲಕೃಷ್ಣ ಬಳಲಿ ಬಂದು (೬)

ಬತ್ತಲೆ ಕುದುರೆಯನೇರಿ
ಮತ್ತೆ ತೇಜಿಯನ್ನೆ ನಡೆಸಿ
ಹತ್ತಾವತಾರವ ತಾಳಿ
ಮತ್ತೆ ಕಲ್ಕಿರೂಪನಾಗಿ (೭)

ಧರೆಯೊಳತ್ಯಧಿಕವಾದ ಶ್ರೀ-
ರಂಗ ಪಟ್ಟಣದಿ ನೆಲೆಸಿ
ಕರುಣದಿಂದ ಭಕ್ತರನ್ನು
ಸಲಹಬೇಕು ಹಯವದನನೆ (೮)


nidre mADida raMga nidre mADida
Badra hAsige mEle
samudra rAjana magaLa sahita [pa.]

vEdakadda asuranigAgi
A matsya rUpava dharisi
sAdhisi asurana koMda
vArijAkSha baLali baMdu (1)

taraLa hiraNyakaSyapana
karuLa bagedu koraLoLiTTu
naramRuga rUpava tALi
narasiMha baLali baMdu (2)

baliya dAnavanne bEDi
nelana mUraDi mADi
olidu bAgilanne kAyda
vAmananAda baLali baMdu (3)

taMdeya mAtanne kELi
tAyi Siravanne aLidu
ELumUru bAri nInu
BUmiya pradakShaNe mADi (4)

sItegAgi paDeya savari
sEtubaMdhanava mADi
dUtarAvaNanna koMdu
sItArAma baLali baMdu (5)

gOkuladalli huTTi
gOvugaLannella kAydu
gOpastrIyara sIre seLedu
gOpAlakRuShNa baLali baMdu (6)

battale kudureyanEri
matte tEjiyanne naDesi
hattAvatArava tALi
matte kalkirUpanAgi (7)

dhareyoLatyadhikavAda SrI-
raMga paTTaNadi nelesi
karuNadiMda Baktarannu
salahabEku hayavadanane (8)

Leave a Reply

Your email address will not be published. Required fields are marked *

You might also like

error: Content is protected !!