Composer : Shri Beluru vaikunta dasaru
ಏಳಿಸು ನಂಜನನೂ ಬೇಗದೊಳೇಳಿಸು ನಂಜನನೂ |
ಬಾಳುವ ಮಗನನು ಕೋಳುವಿಡಿದುದು ಯಮನ
ನಾಳಿದೊಡೆಯ ವೇಲಾಪುರದರಸಾ [ಪ]
ಪತಿಯನು ನೀಗಿದ ಸತಿಮಾದಮ್ಮನು
ಸುತನಿಂ ಬದುಕುವೆನೆಂದೀ ಊರೊಳು
ಅತಿ ತಿರಿತಂದೋವುತ-ಲಿದ್ದಳು ಸುತ
ಮೃತನಾದನು ಅಚ್ಯುತ ಸಲಹಯ್ಯಾ (೧)
ಉರಿಯೊಳು ಬಿದ್ದಂತೊರಲಿ ಪೊರಲಿ ವೋ
ಹರಿ ಹರಿ ಹರಿ ಯೆಂದುರುಳಿ ಬಡಿದುಕೊಳ್ಳೇ
ದುರಿಯಶ ವೊಡೆಯಗೆ ಬರುವುದೆಂದು ನರ
ಹರಿ ರಕ್ಷಿಪನೆಂದೊರೆದೆನು ಹರಿಯೆ (೨)
ಸತ್ತಮಗನ ನೀ ತಂದಿತ್ತುದಿಲ್ಲವೇ ಹೇ
ಕರ್ತೃವೆ ಸಾಂದೀಪೋತ್ತಮನಿಗೆ ಅಂದು
ಉತ್ತರೆಯೊಡಲೊಳು ಅತ್ತು ಶಿಶುವು ಸಾ
ವುತ್ತಿರಲುಳುಹಿದೆ ಚಿತ್ತಜನಯ್ಯಾ (೩)
ಇರಿದಪಮೃತ್ಯು ಪೊತ್ತಿರಿದಪವಾದವು
ಉರುಳಿದೆ ನೋಡುತ್ತಿರುವರೆ ಸುಮ್ಮನೆ
ಅರಿಯದಂತಿರ್ದಡೆ ಪರಿಪಾಲಿಪರಾರು
ವರಮೃತ್ಯುಂಜಯ ಕರುಣಾಕರನೇ (೪)
ಮರಣವನೈದಿದ ತರಳ ನಂಜುಂಡನ
ಕರುಣಿಸದಿರ್ದಡೆ ಶಿರವನರಿದು ನಾ
ಚರಣದೊಳಿಡುವೆನು ದುರಿತಬಾಹುದು ನಿನ
ಗರಿಯದೆ ವೈಕುಂಠವಿಠಲ ಚೆನ್ನಿಗನೇ (೫)
ELisu naMjananU bEgadoLELisu naMjananU |
bALuva magananu kOLuviDidudu yamana
nALidoDeya vElApuradarasA [pa]
patiyanu nIgida satimAdammanu
sutaniM badukuveneMdI UroLu
ati tiritaMdOvuta-liddaLu suta
mRutanAdanu acyuta salahayyA (1)
uriyoLu biddaMtorali porali vO
hari hari hari yeMduruLi baDidukoLLE
duriyaSa voDeyage baruvudeMdu nara
hari rakShipaneMdoredenu hariye (2)
sattamagana nI taMdittudillavE hE
kartRuve sAMdIpOttamanige aMdu
uttareyoDaloLu attu SiSuvu sA
vuttiraluLuhide cittajanayyA (3)
iridapamRutyu pottiridapavAdavu
uruLide nODuttiruvare summane
ariyadaMtirdaDe paripAliparAru
varamRutyuMjaya karuNAkaranE (4)
maraNavanaidida taraLa naMjuMDana
karuNisadirdaDe Siravanaridu nA
caraNadoLiDuvenu duritabAhudu nina
gariyade vaikuMThaviThala cenniganE (5)
Leave a Reply