Satyadharma sadguruvara

Composer : Shri Pradyumna teertharu

By Smt.Shubhalakshmi Rao

Shri Satya Dharma Tirtharu – 1797 – 1830
ಅಗಾಧಬೋಧ ಸಂಭೂತ ಶಾಸ್ತ್ರಭಾವಾವಬೋಧಕಾನ್ |
ಭಾವಯೇ ಭಾವುಕಾಯಾಹಂ ಸತ್ಯಧರ್ಮಾಭಿಧಾನ್ ಗುರೂನ್
अगाधबोध संभूत शास्त्रभावावबोधकान् ।
भावये भावुकायाहं सत्यधर्माभिधान् गुरून् ॥
agaadhabOdha saMbhUta shaastrabhaavaavabOdhakaan |
bhaavayE bhaavukaayaahaM satyadharmaabhidhaan gurUn
Ardhane : Shravana Krishna Trayodashi ,
Vrundavana: Holehonnur


ಸತ್ಯಧರ್ಮ ಸದ್ಗುರುವರ ರಕ್ಷಿಸು (ಪ)
ಭೃತ್ಯ ನೀನಾಗೆಂದು ಕೃತ್ಯ ವಿಪರ್ಯಯ
ವೆತ್ತಣಿಸದೆ ಕೃತಕೃತ್ಯನ ಮಾಡಿಂದು (ಅ.ಪ)

ಸತ್ಯವರರ ವರ ಕುವರನೆ ನೀನು,
ಅತ್ಯುತ್ತಮ ಸುಖ ಚಿನ್ನ
ಯತ್ಯಾಶ್ರಮ ಸದ್ಧರ್ಮಾಚರಣದಿ,
ನಿತ್ಯಾರ್ಜಿತ ರಾಮ
ಭೃತ್ಯಜನಕೆ ಸದ್ಬುದ್ಧಿ ಬೋಧಿಸಿ,
ಕೃತಕೃತ್ಯರ ಮಾಡುತಲಿ
ಕೃತ್ಯದಿಂದ ಗುರುವಿದತ್ತ ಸುನಾಮ
ಯಥಾರ್ಥ ಪಡಿಸಿ ಕ್ಷಿತಿಗುತ್ತಮನೆನಿಸಿದ [೧]

ಭದ್ರಾತೀರನೆ ಇತ್ತು ಸುಭದ್ರಗಳ್,
ನಿದ್ರಾರಹಿತರಿಗೆ
ಆದ್ರಾಂತಃ ಕರುಣನೆ ಸೌಹಾರ್ದದಿ,
ಭದ್ರಾರಮಣನಲಿ
ಕಾದ್ರವೇಯ ಭೂಷಣನಂದದಿ ನೀ,
ಭದ್ರಾದೇವಿಯನು
ಛಿದ್ರರಹಿತ ಶಿಲೆ ಮಧ್ಯದಿ ಪಡೆದು
ಸುಭದ್ರಾಪತಿ ಸಖ ಮುದ್ರಾಧರನೆ [೨]

ಶ್ರೀ ನರಹರಿ ಪದ ನೀನನುದಿನದಲಿ,
ಧ್ಯಾನಮಾಡುತ ಬಾಹ್ಯ ಜ್ಞಾನವಿಲ್ಲದೆ
ಅನುಮಾನ, ವಿಪರ್ಯಯ ಹೀನಗೈಸಿ ಸಾಕ್ಷಿ
ಮಾನದಿಂದ, ಕೊಟ್ಯಾರ್ಭುದ ರವಿಪ್ರಭೆ
ಕಾಣುತ ಪ್ರತಿಮುಖವೋಲ್,
ಏನು ಇದಕೆ ಅನುಮಾನವಿಲ್ಲ ಹಂ
ಮನಿಯವನೆನ್ನುವೆ ನೀ ಸರಿ ಲಿಂಗ ರೂಪಧರ [೩]


satyadharma sadguruvara rakShisu (pa)
BRutya nInAgeMdu kRutya viparyaya
vettaNisade kRutakRutyana mADiMdu (a.pa)

satyavarara vara kuvarane nInu,
atyuttama suKa cinna
yatyASrama saddharmAcaraNadi,
nityArjita rAma
BRutyajanake sadbuddhi bOdhisi,
kRutakRutyara mADutali
kRutyadiMda guruvidatta sunAma
yathArtha paDisi kShitiguttamanenisida [1]

BadrAtIrane ittu suBadragaL,
nidrArahitarige
AdrAMtaH karuNane sauhArdadi,
BadrAramaNanali
kAdravEya BUShaNanaMdadi nI,
BadrAdEviyanu
Cidrarahita Sile madhyadi paDedu
suBadrApati saKa mudrAdharane [2]

SrI narahari pada nInanudinadali,
dhyAnamADuta bAhya j~jAnavillade
anumAna, viparyaya hInagaisi sAkShi
mAnadiMda, koTyArBuda ravipraBe
kANuta pratimuKavOl,
Enu idake anumAnavilla haM
maniyavanennuve nI sari liMga rUpadhara [3]

Leave a Reply

Your email address will not be published. Required fields are marked *

You might also like

error: Content is protected !!