Idu ninage dharmave

Composer : Shri Jagannatha dasaru

By Smt.Shubhalakshmi Rao

ಇದು ನಿನಗೆ ಧರ್ಮವೇ ಇಂದಿರೇಶ
ಬದಿಗ ನೀನಾಗಿದ್ದು ಭೀತಿ ಪಡಿಸುವುದು ||ಪ||

ನಿನ್ನ ಗುಣಗಳ ತುತಿಸಿ ನಿನ್ನನೆ ಹಾರೈಸಿ
ನಿನ್ನವರ ಪ್ರೀತಿಯನು ಸಂಪಾದಿಸಿ
ಅನ್ಯರನು ಲೆಕ್ಕಿಸದೆ ಚೆನ್ನಾಗಿ ಬಾಳುವ
ಮಾನವನ ಈ ಪರಿಯ ಬನ್ನಬಡಿಸುವುದು ||೧||

ದುರುಳನಲ್ಲವೊ ನಿನ್ನ ಚರಣ ಸೇವಕರವನು
ಪರಿಪಾಲಿಪುದು ನಿನಗೆ ಪರಮಧರ್ಮ
ಗುರುಗಳಂತರ್ಯಾಮಿ ಕರಮುಗಿದು ಬಿನ್ನೈಪೆ
ಶರಣ ಪಾಲಕನೆಂಬ ಬಿರುದು ಸುಳ್ಳಾಗುತಿದೆ ||೨||

ಶೋಕನಾಷನ ವಿಗತ ಶೋಕನೆಂಬೊ ನಾಮ
ನಾ ಕೇಳಿ ಮೊರೆಹೊಕ್ಕೆ ಲೋಕಬಂಧೋ
ನೀರಾಕರಿಸದೆಮ್ಮ ನೀ ಸಾಕಬೇಕನುದಿನವು
ವಾಕು ಮನ್ನಿಪುದು ಲೋಕೈಕರಕ್ಷಾಮಣಿಯೆ ||೩||

ಗುಣವೇ ನಿನಗಿದು ಬರಿದೆ ದಣಿಸುವುದು ಶರಣರನು
ಪ್ರಣತಾರ್ತಿಹರ ವಿಭೀಷಣಪಾಲಕ
ಕ್ಷಣಕನಂತಪರಾಧ ಎಣಿಸುವರೆ ಕಡೆಯುಂಟೆ
ಮಣಿದು ಬಿನ್ನಹ ಮಾಳ್ಪೆ ದನುಜದಲ್ಲಣನೆ ||೪||

ನಮೋ ನಮೋ ಬ್ರಹ್ಮಣ್ಯ ದೇವ ದೇವರದೇವ
ನಮೋ ನಮೋ ಧನ್ವಂತ್ರಿ ದುರಿತಹಂತ್ರೀ
ನಮೋ ನಮೋ ಕಾರುಣ್ಯಶೀಲ ಸಜ್ಜನಪಾಲ
ನಮೋ ನಮೋ ಜಗನ್ನಾಥ ವಿಠಲ ವಿಖ್ಯಾತ ||೫||


idu ninage dharmavE iMdirESa
badiga nInAgiddu BIti paDisuvudu ||pa||

ninna guNagaLa tutisi ninnane hAraisi
ninnavara prItiyanu saMpAdisi
anyaranu lekkisade cennAgi bALuva
mAnavana I pariya bannabaDisuvudu ||1||

duruLanallavo ninna caraNa sEvakaravanu
paripAlipudu ninage paramadharma
gurugaLaMtaryAmi karamugidu binnaipe
SaraNa pAlakaneMba birudu suLLAgutide ||2||

SOkanAShana vigata SOkaneMbo nAma
nA kELi morehokke lOkabaMdhO
nIrAkarisademma nI sAkabEkanudinavu
vAku mannipudu lOkaikarakShAmaNiye ||3||

guNavE ninagidu baride daNisuvudu SaraNaranu
praNatArtihara viBIShaNapAlaka
kShaNakanaMtaparAdha eNisuvare kaDeyuMTe
maNidu binnaha mALpe danujadallaNane ||4||

namO namO brahmaNya dEva dEvaradEva
namO namO dhanvaMtri duritahaMtrI
namO namO kAruNyaSIla sajjanapAla
namO namO jagannAtha viThala viKyAta ||5||

Leave a Reply

Your email address will not be published. Required fields are marked *

You might also like

error: Content is protected !!