Varava Kodu Enage

Composer : Shri Kanaka dasaru

By Smt.Shubhalakshmi Rao

ವರವ ಕೊಡು ಎನಗೆ ವಾಗ್ದೇವಿ ನಿನ್ನ
ಚರಣ ಕಮಲಂಗಳನು ದಯಮಾಡು ದೇವಿ ||

ಶಶಿ ಮೊಗದ ನಸು ನಗೆಯ ಬಾಲೆ
ಎಸೆವ ಕರ್ಣದಿ ಮುತ್ತಿನೋಲೆ
ನಸುನಗುವ ಪಲ್ಲ ಗುಣಶೀಲೇ ದೇವಿ
ಬಿಸಜಾಕ್ಷಿ ಎನ್ನ ಹೃದಯದೊಳು ನಿಂದವಳೆ ||೧||

ಇಂಪು ಸೊಂಪಿನ ಚಂದ್ರ ಬಿಂಬೆ
ಕೆಂಪು ದುಟಿ ನಾಸಿಕದ ರಂಭೆ
ಜೋಂಪು ಮದನನ ಪೂರ್ಣ ಶಕ್ತಿ ಗೊಂಬೆ
ಸಂಪಿಗೆಯ ಮುಡಿದಿಟ್ಟ ಶಾರ್ದಾಂಬೆ ||೨||

ರವಿ ಕೋಟಿ ತೇಜ ಪ್ರಕಾಶೇ
ಕವಿಜನರ ಹೃತ್ಕಮಲ ವಾಸೇ
ಅವಿರಣ ಪುರಿಯ ಸಿರಿ ಕಾಗಿನೆಲೆಯಾದಿ
ಕೇಶವನ ಸುತಗೆ ಸನ್ನುತದ ರಾಣಿವಾಸೆ ||೩||


varava koDu enage vAgdEvi ninna
caraNa kamalaMgaLanu dayamADu dEvi ||

SaSi mogada nasu nageya bAle
eseva karNadi muttinOle
nasunaguva palla guNaSIlE dEvi
bisajAkShi enna hRudayadoLu niMdavaLe ||1||

iMpu soMpina caMdra biMbe
keMpu duTi nAsikada raMBe
jOMpu madanana pUrNa Sakti goMbe
saMpigeya muDidiTTa shArdAMbe ||2||

ravi kOTi tEja prakASE
kavijanara hRutkamala vAsE
aviraNa puriya siri kAgineleyAdi
kESavana sutage sannutada rANivAse ||3||

Leave a Reply

Your email address will not be published. Required fields are marked *

You might also like

error: Content is protected !!