Tande venkateshanende

Composer : Shri Uragadri vittala dasaru [Ankita pradana padya]

By Smt.Shubhalakshmi Rao

Shri Ramachandra rayaru – 1907 – 1982
Upadesha from Shri Uragadri vittala dasaru
ankita nama – Shri Tande Venkatesha vittala
Aradhane: – Ashada bahula Ashtami


ತಂದೆ ವೆಂಕಟೇಶನೆಂದೆ
ಪುರಂದರ ದಾಸರ ಪ್ರಿಯನಿವನೆಂದೆ || ಪ ||

ಜನ್ಮ ಜನ್ಮಂಗಳಲಿ ತಂದೆ | ಎಂ |
ದೆಂದು ಭವ ಮೋಚನದೊಳು ತಂದೆ |
ಇಂದು ವಿನಯದಿ ತಂದೆ ದಂದುಗ ಬಿಡಿಸೆಂದೆ |
ನಿನ್ನ ಹೃನ್ಮಂದಿರಾರವಿಂದದೊಳು ನಿಂದೆ || ೧ ||

ಕಾಲ ಕಾಲದಿ ತಂದೆ ವಾಕು ಮನಕೆ |
ನಿಲುಕದಾಲಿಹೆ ತಂದೆ |
ಬಾಲ್ಯ ಯೌವನ ಜರಾ ||
ಲಯಾದ್ಯವಸ್ಥೆಯ ತಂದೆ |
ಕಾಲ ಕರ್ಮಗಳಲ್ಲಿ ಕಾರ್ಯ ಪ್ರೇರಣೆಗೆಲ್ಲ || ೨ ||

ಚತುರ ರೂಪದಿ ನಿಂದೆ ತಂದೇ |
ಚತುರ ರೂಪದಿ ತಂದೆ |
ನುತಿಪೆನೊ ಉರಗಾದ್ರಿ ವಾಸ ವಿಠ್ಠಲ |
ಅಪ್ರತಿ ಮಹಿಮ ಸೃಷ್ಟಿ ಸ್ಥಿತಿ ಲಯಕೆಲ್ಲ || ೩ ||


taMde veMkaTESaneMde
puraMdara dAsara priyanivaneMde || pa ||

janma janmaMgaLali taMde | eM |
deMdu Bava mOcanadoLu taMde |
iMdu vinayadi taMde daMduga biDiseMde |
ninna hRunmaMdirAraviMdadoLu niMde || 1 ||

kAla kAladi taMde vAku manake |
nilukadAlihe taMde |
bAlya yauvana jarA ||
layAdyavastheya taMde |
kAla karmagaLalli kArya prEraNegella || 2 ||

catura rUpadi niMde taMdE |
catura rUpadi taMde |
nutipeno uragAdri vAsa viThThala |
aprati mahima sRuShTi sthiti layakella || 3 ||

Leave a Reply

Your email address will not be published. Required fields are marked *

You might also like

error: Content is protected !!