Dayamade Taaye Vagdevi

Composer : Shri Jagannatha dasaru

By Smt.Shubhalakshmi Rao

ದಯಮಾಡೆ ದಯಮಾಡೆ ತಾಯೆ ವಾಗ್ದೇವಿ |ಪ|
ದಯದಿಂದ ನೀನೆನ್ನ ನೋಡೆ ವಾಗ್ದೇವಿ |ಅ.ಪ|

ಹಿತದಿ ಸನ್ಮತಿಯ ಶ್ರೀಮತಿದೇವಿ ನೀಡೆ
ವ್ರತತಿಜನೇತ್ರೆ ಭಾರತಿ ನೀ ದಯಮಾಡೆ ||೧||

ಸುಮುಖೀ ತ್ವಚ್ಚರಣಾಬ್ಜ ದ್ರುಮಛಾಯಶ್ರಿತರ
ಸುಮತಿಗಳೊಳಗಿಟ್ಟು ಮಮತೆಯಿಂ ಸಲಹೆ ||೨||

ಜಗನ್ನಾಥವಿಠಲನ ಅಂಘ್ರಿಗಳ ಸೇವೆಯೊಳು
ಸುಗುಣೆ ಸನ್ಮತಿಗೊಟ್ಟು ಬೇಗೆನ್ನ ಸಲಹೆ ||೩||


dayamADe dayamADe tAye vAgdEvi |pa|
dayadiMda nInenna nODe vAgdEvi |a.pa|

hitadi sanmatiya SrImatidEvi nIDe
vratatijanEtre BArati nI dayamADe ||1||

sumuKI tvaccaraNAbja drumaCAyaSritara
sumatigaLoLagiTTu mamateyiM salahe ||2||

jagannAthaviThalana aMGrigaLa sEveyoLu
suguNe sanmatigoTTu bEgenna salahe ||3||

Leave a Reply

Your email address will not be published. Required fields are marked *

You might also like

error: Content is protected !!