Composer : Shri Varadendra Tirtharu
ಶ್ರೀ ವರದೇಂದ್ರ ತೀರ್ಥ ವಿರಚಿತ
ಓಂಕಾರ, ಮಂತ್ರ ವರ್ಣಗಳ ಉತ್ಪತ್ತಿ
ತಂತ್ರಸಾರ
(ಪ್ರಕಾಶಸಂಹಿತೆ ಅಧ್ಯಾಯ ೧ ರಲ್ಲಿರುವಂತೆ)
೧೬ ಪದ, ರಾಗ : ಸಾವೇರಿ, ಝಂಪಿತಾಳ
ಪಾಹಿ ಸಂಕೇರು ಹೇಕ್ಷಣ ಸರ್ವ ಕಾಮದಾ |
ಪಾಹಿ ಪದ್ಮಾಲಯ ನಿಕೇತನ ಸದಾ [ಪ]
ಜಯತು ಚತುರಾನನ ಭವೇಂದ್ರಾದಿ ವಿಭುದನುತ |
ಜಯತು ಚತುರಾನನ ರಮಾವಲ್ಲಭಾ |
ಜಯತು ಸುಖಪೂರ್ಣ ಚಿತ್ಸುಖಮುಖ ಸುಗುಣ ನಿಲಯ |
ಜಯತು ಜನ್ಮಾದಿ ಕಾರಣ ದೋಷಹ (೧)
ಕಮಲಾಕ್ಷ ಪರಮ ಸಂಭ್ರಮದಿಂದ ಲಕ್ಷ್ಮಿಕರ |
ಕಮಲದಿಂ ಸೇವೆಗೊಳುತಿರಲು ಆಗ |
ಅಮರ ನಿಕರಾರಾಧ್ಯ ಕಮಲಾಸನನು ಬಂದು |
ನಮಿಸಿ ಬಿನ್ನೈಸಿದನು ತನ್ನ ಪಿತಗೆ (೨)
ಆವ ಸರ್ವೋತ್ತಮನು ಆವಾವಗುಣಗಳಿಹ್ಯ |
ವಾವಾವ ಶಬ್ದ ವಾಚ್ಯಾವರೀತೆ |
ಈ ವಿಚಾರವನು ಪೇಳೆನಲು ನಸುನಗುತ ರಾ |
ಜೀವ ಸಂಭವಗೆ ಯಿನಿತೆಂದು ನುಡಿದ (೩)
ವನಜ ಸಂಭವ ಕೇಳು ನಾನೇ ಸರ್ವೋತ್ತಮನು |
ಯೆನಗೆ ನಂತಾನಂತ ಮಂಗಳಗುಣ |
ಪ್ರಣವ ವಾಚ್ಯನು ನಾನೆ ಅಷ್ಟ ವರಣೋಪೇತು
ಪ್ರಣ್ವ ವಿಚಾರವನು ಪೇಳ್ವೆ ನಿನಗೆ (೪)
ಸಾದರದಿ ಕೇಳಿನ್ನ ಕಾರುಕಾರ ಮಕಾರ |
ನಾದಬಿಂದು ಘೋಷ ಶಾಂತತಿಶಾಂತವು |
ಈ ದಿವ್ಯ ವರ್ಣದಲ್ಲಿ ವಿಶ್ವತೈಜಸ ಪ್ರಾಜ್ಞ |
ಮೋದಮಯ ತುರ್ಯಾತ್ಮ ಅಂತರಾತ್ಮ (೫)
ಪರಮಾತ್ಮ ಜ್ಞಾನಾತ್ಮ ಯೆಂಬಷ್ಟ ರೂಪದಿಂ |
ದಿರುತಿಹನು ವೇದಾದಿಯಲಿ ಸರ್ವದ |
ಪರಮ ಋಷಿಗಳು ಈ ಮಹಮಂತ್ರ ಜಪಿಸೆನ್ನ |
ಪುರವ ನೈದಿದರೂ ಸತ್ವರ ದಿಂದಲಿ (೬)
ವಾರಿರುಹ ಸಂಭವನೆ ಕೇಳಕಾರದಲಿ ಹದಿ |
ನಾರು ಅಚ್ಚುಗಳು ಜನಿಸಿದವೊ ಕ್ರಮದಿ |
ಚಾರು ಅಜ ಆನಂದ ಇಂದ್ರೇಶ ಮೊದಲಾದ |
ಯೀರೆಂಟು ರೂಪಗಳು ವಿಶ್ವಜನಿತ (೭)
ಉಮ ನಾದ ಬಿಂದು ಘೋಷಗಳಿಂದ ಕಚ ಟತಪ |
ವಿಮಲ ವರ್ಗ ಗಳು ಪುಟ್ಟಿದವು ಐದು |
ಕಮಲಭವ ಕೇಳು ತೈಜಸ ಪ್ರಾಜ್ಞತೂರ್ಯ ಆ |
ತುಮ ಅಂತರಾತ್ಮ ಮೂರ್ತಿಗಳಿಂದಲಿ (೮)
ಪಂಚವಿಂಶತಿ ರೂಪ ಅಭಿವ್ಯಕ್ತವಾದವು ವಿ |
ರಂಚಿಕೇಳ್ ಶಾಂತದಿಂ ಯರಲವ ಗಳು |
ಸಂಚಿಂತಿಸ್ಯೆತಿ ಶಾಂತದಿಂದ ಶಷಸಹಳ |
ಪಂಚಾಕ್ಷರಗಳು ಜನಿಸಿದವೊಯಿಲ್ಲಿ (೯)
ಪರಮಾತ್ಮ ಜ್ಞಾನಾತ್ಮ ರೂಪದಿಂದೊಭತ್ತು |
ನಿರುಪಮ ಸ್ವಮೂರ್ತಿಗಳು ಶೋಭಿಸಿದವು |
ಪರಮೇಷ್ಟಿ ನಾರಾಯಣಷ್ಟಾಕ್ಷರ ಮಂತ್ರ |
ವರವೆನಿನಗಾನು ಸಾಂಗೋಪಾಂಗದಿಂ (೧೦)
( ನಾರಾಯಣ ಅಷ್ಟಾಕ್ಷರಮಂತ್ರ ಉತ್ಪತ್ತಿ )
ತಾರಗತ ಅಷ್ಟ ವರ್ಣಗಳಿಂದ ಓಂನಮೋ
ನಾರಾಯಣ ಯೆಂಬೀ ಮಂತ್ರವೂ |
ಚಾರು ಅಷ್ಟಾರ್ಣ ತದ್ವಾಚ್ಯ ಮೂರ್ತಿಗಳೆಂಟು |
ಸಾರವಿಶ್ವಾದಿ ಪ್ರಣವಸ್ಥ ಭಿನ್ನ (೧೧)
( ವ್ಯಾಹೃತಿಮಂತ್ರ ಉತ್ಪತ್ತಿ)
ಓಂ ಭೂಃ ಓಂ ಭುವಃ ಓಂ ಸ್ವಹಃ |
ಓಂ ಭೂರ್ಭುವಸುವಹ ಈ ವ್ಯಾಹೃತೀ |
ಅಂಬುಜೋದ್ಭವ ಪ್ರಣವಾದಿ ನಾಲ್ವರಣದಿಂ |
ಸಂಭವಿಸಿತೀಮಂತ್ರ ಸುಲಭದಿಂದ (೧೨)
ತನಯ ಕೇಳೀಮಂತ್ರ ಗತ ನಾಲ್ಕು ರೂಪಗಳು |
ಅನಿರುದ್ಧ ಪ್ರದ್ಯುಮ್ನ ಸಂಕರುಷಣ |
ಅನಘ ಶ್ರೀ ವಾಸುದೇವನ ಮೂರ್ತಿಗಳು ಚಿಂ |
ತನೆ ಮಾಡು ಈ ವ್ಯಾಹೃತಿಯಲಿ ಬಿಡದೆ (೧೩)
( ವಾಸುದೇವ ದ್ವಾದಶಾಕ್ಷರ ಮಂತ್ರ )
ನಿಗಮಾದಿ ಮೊದಲು ನಾಲ್ವರ್ಣದಿಂ ಓಂ ನಮೋ |
ಭಗವತೇ ವಾಸುದೇವಾಯ ಯೆಂಬಾ |
ಯುಗಳ ಆರಕ್ಷರಾತ್ಮಕ ಮಂತ್ರ ಪ್ರತಿಪಾದ್ಯ
ಭಗವದ್ರೂಪಗಳ ಪೇಳುವೆ ನಿನಗೆ ಕೇಳು (೧೪)
ಕೇಶವ ನಾರಾಯಣನು ಮಾಧವ ಗೋವಿಂದ |
ಕೇಶ ನಾಶನ ವಿಷ್ಣು ಮಧುಸೂದನ |
ಶ್ರೀಶ ತ್ರಿವಿಕ್ರಮನು ವಾಮನ ಶ್ರೀಧರ ಹೃಷಿ |
ಕೇಶಾಂಬುರೂಹನಾಭ ದಾಮೋದರ (೧೫)
( ಗಾಯತ್ರಿ ಮಂತ್ರ ಉತ್ಪತ್ತಿ)
ತೃತಿಯ ಆವರ್ತಿ ಅಷ್ಟಾರ್ಣದಿಂ ಮೂರು ವ್ಯಾ |
ಹೃತಿಯಿಂದ ದ್ವಿಷಡಕ್ಷರ ಯೆರಡರಿಂದ |
ಚತುರಾಸ್ಯ ಕೇಳು ಗಾಯಿತ್ರಿ ಉತ್ಪನ್ನ ವಾ |
ಯಿತು ಕೇಶವಾದಿ ಕೃಷ್ಣಾಂತರೂಪ | (೧೬)
( ಪುರುಷಸೂಕ್ತ ಅಭಿವ್ಯಕ್ತಿ ಯಿದರಿಂ ವೇದಾದಿಗಳು )
ವಿತತವಾದವು ಪುರುಷಸೂಕ್ತ ಗಾಯಿತ್ರಿಯಿಂ |
ದತುಳ ಈ ಪುರುಷಸೂಕ್ತದಲ್ಲಿ ವೇದ |
ತತಿಗಳುದಿಸಿದವು ನಿಗಮಾದಿ ಬ್ರಹ್ಮ ಸೂತ್ರ ಭಾ |
ರತ ಪಂಚರಾತ್ರಾದ ಆಗಮಗಳು (೧೭)
ಶತಕೋಟಿ ಮೂಲ ರಾಮಾಯಣ ಪುರಾಣಗಳು |
ಸ್ಮೃತಿ ಸಮೂಹಗಳುಪ ಪುರಾಣಗಳು |
ಇತರ ವೇದೋಕ್ತ ಸುಶಬ್ದ ಜನಿಸಿದವು ಸಂ
ತತ ವಾಚ್ಯನಾನೆ ಸಂದೇಹವಿಲ್ಲ (೧೮)
(ಓಂ ಕಾರಾದಿ ಪ್ರತಿಪಾದ ಭಗವದ್ರೂಪಗಳ ವರ್ಣನೆ)
ಉದಯಿಸುವ ರವಿಯವೋಲ್ ಕಾಂತಿ ಜ್ಞಾನಾನಂದ |
ಮುದಮೋದ ದಿವ್ಯ ಗುಣಮಯ ಶರೀರ |
ಸುದರುಶನ ದರ ಗದಾಂಬುಜಗಳಾಯುಧ ವೆನಗೆ |
ತ್ರಿದಶಗಣಮಯನು ಸರ್ವೆಶನಾನು (೧೯)
ಇದೊಸೆಯ ಲೆನ್ನ ಸೇವಿಪರು ಶ್ರೀ ಭೂದೇವಿ |
ಕೃದ್ಯೋಲ್ಕ ವಿಶ್ವ ಕೇಶವ ಮತ್ಪಾದಿ |
ಮದ್ರೂಪ ಗಣ ಮಧ್ಯಗನು ನಾನು ಬ್ರಹ್ಮಮಣಿ |
ಪಾದ್ಯರತಿ ಭಕ್ತಿಸೇವ್ಯನು ಸಮರ್ಥ (೨೦)
ಅರಿದರ ವರಾಭಯಂಕಿತ ಚತುರ್ಭುಜನುನಾ |
ಲೆರಡು ರೂಪಂಗಳು ಪ್ರದೀಪವರ್ಣಾ |
ಸರುವಾಭರಣ ವಿಭೂಷಿತವಾದ ಮದ್ರೂಪ |
ನಿರುತ ಮೇಯವು ಮುಮುಕ್ಷುಗಳಿಂದಲಿ (೨೧)
( ಉಪಸಂಹಾರ )
ತಾರ ನಾರಾಯಣಾಷ್ಟಾಕ್ಷರವು ವ್ಯಾಹ್ಯತಿಯು |
ಈರಾರು ವರ್ಣ ಗಾಯತ್ರಿಮಂತ್ರ |
ಸಾರ ಮಾತೃಕ ಪುರುಷಸೂಕ್ತ ವೈಷ್ಣವಗಳಿವು |
ನೀರಜಾಸನಕೇಳು ಮಹಮಂತ್ರವೊ (೨೨)
ಸೀತಾರಮಣ ಮೂಲರಾಮನತಿ ಹರುಷದಿ ವಿ |
ಧಾತಗುಪದೇಶಿಸಿದ ಈತೆರದಲಿ |
ಪ್ರೀತಿಯಿಂದಲಿ ನಿರಂತರದಲಿಯಿದು ಪಠಿಸೆ ಶೇ |
ಷಾತಪತ್ರನು ಕಾಮಿತಾರ್ಥವೀವ (೨೩)
ಬ್ಯಾಗವಾಟದರಂಗ ಪೊಲಿದ ಶ್ರೀನರಸಿಂಹ |
ಭಾಗವತರುಣಗ ಶ್ರೀ ಜಗನ್ನಾಥದಾಸ |
ಬಾಗಿ ವಿಜ್ಞಾಪಿಸಲು ಕೈಕೊಂಡು ಪರಮಾನು
ರಾಗದಲಿ ಹೇಳಿದೆವು ತಂತ್ರಸಾರ (೨೪)
ಕರುಣಾಬ್ ವಸುಧೀಂದ್ರರಾಯರ ಕೃಪಾಬಲದಿ |
ವಿರಚಿಸಿದೆ ವೀಗ್ರಂಥ ಪದ ರೂಪದಿ |
ಅರಸಿಕನು ನಿಂದಿಸಲು ಕುಂದಾವದಿದಕೆ ಭಾ |
ಸ್ಮರನುದಯ ಸೂಕ ದೂಷಿಸಿದ ತೆರವು (೨೫)
ಧರ್ಮಾರ್ಥಕಾಮ ಮೋಕ್ಷಗಳೀವ ಗ್ರಂಥವಿದು |
ನಿರ್ಮಾಣ ಮಾಡಿಸಿದ ರಾಮಚಂದ್ರ |
ಭರ್ಮಗರ್ಭಗೆ ಪೊಲಿದು ಹೇಳಿದ ಮಹಾಮಂತ್ರ |
ಮರ್ಮಗಳಿನರಿತು ಜಪಿಸುವನೆಧನ್ಯ (೨೬)
ವರದೇಂದ್ರ ಮುನಿರಚಿತ ಈ ತಂತ್ರ ಸಾರವನು |
ಬರದೋದಿಕೇಳಿ ಮೋದಿಪಸುಜನರ |
ವರಮೂಲರಾಮ ವೇದವ್ಯಾಸರಿಹಪರದಿ |
ಕರುಣಿಪರು ಬೇಡಿದಿಷ್ಟಾರ್ಥಗಳನು (೨೭)
ಮಂಗಳ ರಮಾಪತಿಗೆ ಮಂಗಳ ದ್ರುಹಿಣ ಪಿತಗೆ |
ಮಂಗಳ ದಶಪ್ರಮತಿ ಮುನಿಮಾನ್ಯಗೆ |
ಮಂಗಳ ಶಿವೇಂದ್ರಾದಿ ಸುರನಿಕರ ಪೂಜ್ಯಗೆ |
ಮಂಗಳ ಜಗದ್ವಿಲಕ್ಷಣ ಮೂರ್ತಿಗೆ (೨೮)
ಇಪ್ಪತ್ತರೊಂಭತ್ತು ಪದಗಳೆಂಬ ವಿಮಲ |
ಪುಷ್ಪ ಮಾಲಿಕೆ ಮೂಲರಾಮನಡಿಗೆ |
ಅರ್ಪಿಸಿದೆವೀಸುಮನ ನಾಮವನುದಿನದಲ್ಲಿ |
ಒಪ್ಪದಿಹ್ಯದೇ ಬುಧರ ಮಸ್ತಕದಲಿ (೨೯)
shrI varadEMdra teertha virachita
OMkAra, maMtra varNagaLa utpatti
taMtrasAra
(prakASasaMhite adhyAya 1 ralliruvaMte)
16 pada, rAga : sAvEri, JaMpitALa
pAhi saMkEru hEkShaNa sarva kAmadA |
pAhi padmAlaya nikEtana sadA [pa]
jayatu caturAnana BavEMdrAdi viBudanuta |
jayatu caturAnana ramAvallaBA |
jayatu suKapUrNa citsuKamuKa suguNa nilaya |
jayatu janmAdi kAraNa dOShaha (1)
kamalAkSha parama saMBramadiMda lakShmikara |
kamaladiM sEvegoLutiralu Aga |
amara nikarArAdhya kamalAsananu baMdu |
namisi binnaisidanu tanna pitage (2)
Ava sarvOttamanu AvAvaguNagaLihya |
vAvAva Sabda vAcyAvarIte |
I vicAravanu pELenalu nasunaguta rA |
jIva saMBavage yiniteMdu nuDida (3)
vanaja saMBava kELu nAnE sarvOttamanu |
yenage naMtAnaMta maMgaLaguNa |
praNava vAcyanu nAne aShTa varaNOpEtu
praNva vichAravanu pELve ninage (4)
sAdaradi kELinna kArukAra makAra |
nAdabiMdu GOSha SAMtatiSAMtavu |
I divya varNadalli viSvataijasa prAj~ja |
mOdamaya turyAtma aMtarAtma (5)
paramAtma j~jAnAtma yeMbaShTa rUpadiM |
dirutihanu vEdAdiyali sarvada |
parama RuShigaLu I mahamaMtra japisenna |
purava naididarU satvara diMdali (6)
vAriruha saMBavane kELakAradali hadi |
nAru accugaLu janisidavo kramadi |
cAru aja AnaMda iMdrESa modalAda |
yIreMTu rUpagaLu viSvajanita (7)
uma nAda biMdu GOShagaLiMda kaca Tatapa |
vimala varga gaLu puTTidavu aidu |
kamalaBava kELu taijasa prAj~jatUrya A |
tuma aMtarAtma mUrtigaLiMdali (8)
paMcaviMSati rUpa aBivyaktavAdavu vi |
raMcikEL SAMtadiM yaralava gaLu |
saMciMtisyeti SAMtadiMda SaShasahaLa |
paMcAkSharagaLu janisidavoyilli (9)
paramAtma j~jAnAtma rUpadiMdoBattu |
nirupama svamUrtigaLu SOBisidavu |
paramEShTi nArAyaNaShTAkShara maMtra |
varaveninagAnu sAMgOpAMgadiM (10)
( nArAyaNa aShTAkSharamaMtra utpatti )
tAragata aShTa varNagaLiMda OMnamO
nArAyaNa yeMbI maMtravU |
cAru aShTArNa tadvAcya mUrtigaLeMTu |
sAraviSvAdi praNavastha Binna (11)
( vyAhRutimaMtra utpatti)
OM BUH OM BuvaH OM svahaH |
OM BUrBuvasuvaha I vyAhRutI |
aMbujOdBava praNavAdi nAlvaraNadiM |
saMBavisitImaMtra sulaBadiMda (12)
tanaya kELImaMtra gata nAlku rUpagaLu |
aniruddha pradyumna saMkaruShaNa |
anaGa SrI vAsudEvana mUrtigaLu ciM |
tane mADu I vyAhRutiyali biDade (13)
( vAsudEva dvAdaSAkShara maMtra )
nigamAdi modalu nAlvarNadiM OM namO |
BagavatE vAsudEvAya yeMbA |
yugaLa ArakSharAtmaka maMtra pratipAdya
BagavadrUpagaLa pELuve ninage kELu (14)
kESava nArAyaNanu mAdhava gOviMda |
kESa nASana viShNu madhusUdana |
SrISa trivikramanu vAmana SrIdhara hRuShi |
kESAMburUhanABa dAmOdara (15)
( gAyatri maMtra utpatti)
tRutiya Avarti aShTArNadiM mUru vyA |
hRutiyiMda dviShaDakShara yeraDariMda |
caturAsya kELu gAyitri utpanna vA |
yitu kESavAdi kRuShNAMtarUpa | (16)
( puruShasUkta aBivyakti yidariM vEdAdigaLu )
vitatavAdavu puruShasUkta gAyitriyiM |
datuLa I puruShasUktadalli vEda |
tatigaLudisidavu nigamAdi brahma sUtra BA |
rata paMcarAtrAda AgamagaLu (17)
SatakOTi mUla rAmAyaNa purANagaLu |
smRuti samUhagaLupa purANagaLu |
itara vEdOkta suSabda janisidavu saM
tata vAcyanAne saMdEhavilla (18)
(OM kArAdi pratipAda BagavadrUpagaLa varNane)
udayisuva raviyavOl kAMti j~jAnAnaMda |
mudamOda divya guNamaya SarIra |
sudaruSana dara gadAMbujagaLAyudha venage |
tridaSagaNamayanu sarveSanAnu (19)
idoseya lenna sEviparu SrI BUdEvi |
kRudyOlka viSva kESava matpAdi |
madrUpa gaNa madhyaganu nAnu brahmamaNi |
pAdyarati BaktisEvyanu samartha (20)
aridara varABayaMkita caturBujanunA |
leraDu rUpaMgaLu pradIpavarNA |
saruvABaraNa viBUShitavAda madrUpa |
niruta mEyavu mumukShugaLiMdali (21)
( upasaMhAra )
tAra nArAyaNAShTAkSharavu vyAhyatiyu |
IrAru varNa gAyatrimaMtra |
sAra mAtRuka puruShasUkta vaiShNavagaLivu |
nIrajAsanakELu mahamaMtravo (22)
sItAramaNa mUlarAmanati haruShadi vi |
dhAtagupadESisida Iteradali |
prItiyiMdali niraMtaradaliyidu paThise SE |
ShAtapatranu kAmitArthavIva (23)
byAgavATadaraMga polida SrInarasiMha |
BAgavataruNaga SrI jagannAthadAsa |
bAgi vij~jApisalu kaikoMDu paramAnu
rAgadali hELidevu taMtrasAra (24)
karuNAb vasudhIMdrarAyara kRupAbaladi |
viraciside vIgraMtha pada rUpadi |
arasikanu niMdisalu kuMdAvadidake BA |
smaranudaya sUka dUShisida teravu (25)
dharmArthakAma mOkShagaLIva graMthavidu |
nirmANa mADisida rAmacaMdra |
BarmagarBage polidu hELida mahAmaMtra |
marmagaLinaritu japisuvanedhanya (26)
varadEMdra muniracita I taMtra sAravanu |
baradOdikELi mOdipasujanara |
varamUlarAma vEdavyAsarihaparadi |
karuNiparu bEDidiShTArthagaLanu (27)
maMgaLa ramApatige maMgaLa druhiNa pitage |
maMgaLa daSapramati munimAnyage |
maMgaLa SivEMdrAdi suranikara pUjyage |
maMgaLa jagadvilakShaNa mUrtige (28)
ippattaroMBattu padagaLeMba vimala |
puShpa mAlike mUlarAmanaDige |
arpisidevIsumana nAmavanudinadalli |
oppadihyadE budhara mastakadali (29)
Leave a Reply