Composer : Shri Vadirajaru
ಯಾತಕಯ್ಯ ತೀರ್ಥಕ್ಷೇತ್ರಗಳು
ಶ್ರೀ ತುಲಸಿಯ ಸೇವಿಪ ಸುಜನರಿಗೆ ||ಪ||
ಅಮೃತವ ಕೊಡುವ ಹರುಷದೊಳಿರ್ದ
ಕಮಲೆಯರಸನ ಅಕ್ಷಿಗಳಿಂದ
ಪ್ರಮೋದಾಶ್ರು ಸುರಿಯೆ ಕ್ಷೀರಾಬ್ಧ್ದಿಯೊಳು
ಆ ಮಹಾತುಲಸಿ ಅಂದುದಿಸಿದಳು ||೧||
ಪರಿಮಳಿಸುವ ಮಾಲೆಯ ನೆವದಿ
ಹರಿಯುದರದಲ್ಲಿ ಸಿರಿಯೊಲಿಹಳು
ತರುಣಿ ತುಲಸಿ ತಪ್ಪದೆಯವನ
ಚರಣವ ರಮೆ ಭಜಿಸೆ ಭಜಿಪಳು ||೨||
ಪೂಜಿಸುವರ ಶಿರದಿ ನಿರ್ಮಾಲ್ಯಗಳ
ವ್ಯಾಜದಿಂದ ಲಕ್ಷ್ಮಿಯ ಕೂಡೆ ಬಹಳು
ಈ ಜಗದೊಳು ತಾವಿಬ್ಬರಿದ್ದಲ್ಲಿ ಆ
ಜನಾರ್ದನನಾಕ್ಷಣ ತಹಳು ||೩||
ಒಂದು ಪ್ರದಕ್ಷಿಣವನು ಮಾಡಿದವರ
ಹೊಂದಿಪ್ಪುದು ಭೂಪ್ರದಕ್ಷಿಣ ಪುಣ್ಯ
ಎಂದೆಂದಿವಳ ಸೇವಿಸುವ ನರರಿಗೆ
ಇಂದಿರೆಯರಸ ಕೈವಲ್ಯವೀವ ||೪||
ತುಲಸಿಯ ನೆಟ್ಟವನು ಮತ್ತೆ ತನಗೆ
ಇಳೆಯೊಳು ಪುಟ್ಟುವ ವಾರ್ತೆಯ ಕಳೆವ
ಜಲವೆರೆದು ಬೆಳೆಸಿದ ಮನುಜರ
ಕುಲದವರ ಬೆಳೆಸು ವೈಕುಂಠದಲ್ಲಿ ||೫||
ತುಲಸಿಯೆ ನಿನ್ನ ಪೋಲುವರಾರು
ಮೂಲದಲ್ಲಿ ಸರ್ವ ತೀರ್ಥಂಗಳಿಹವು
ದಳದಲ್ಲಿ ದೇವರ್ಕಳ ಸನ್ನಿಧಾನ
ಚೆಲುವಾಗ್ರದಿ ಸಕಲ ವೇದಗಳು ||೬||
ತುಲಸಿ ಮಂಜರಿಯೆ ಬೇಕಚ್ಚುತಂಗೆ
ದಳಮಾತ್ರ ದೊರಕಲು ಸಾಕವಗೆ
ಸಲುವುದು ಕಾಷ್ಠ ಮೂಲ ಮೃತ್ತಿಕೆಯು
ಫಲವೀವನಿವಳ ಪೆಸರ್ಗೊಳಲು ||೭||
ಕೊರಳಲ್ಲಿ ಸರ ಜಪ ಸರ ಗಳನ್ನು
ವರ ತುಲಸಿಯ ಮಣಿಯಿಂದ ಮಾಡಿ
ಗುರು ಮಂತ್ರವ ಜಪಿಸುವ ನರರು
ಹರಿ ಶರಣರ ನೆಲೆಗೆ ಸಾರುವರು ||೮||
ಎಲ್ಲಿ ತುಲಸಿಯ ಬನದಲ್ಲಿ ಲಕ್ಷುಮೀ-
ವಲ್ಲಭನು ಸರ್ವ ಸನ್ನಿಹಿತನಾಗಿ
ನೆಲಸಿಹನಿವಳೆ ಸಳೊಂದಿಲ್ಲದಿರೆ
ಸಲ್ಲದವಂಗನ್ಯ ಕುಸುಮದ ಪೂಜೆ ||೯||
ಎಲ್ಲ ಪಾಪಂಗಳೊಮ್ಮೊಮ್ಮೆ ಕೈಮುಗಿಯೆ
ಎಲ್ಲಿ ಪೋಪುದು ದೇಶ ದೇಶಂಗಳಿಗೆ-
ನೆಲ್ಲಿ ಮಲ್ಲಿಗೆ ಮೊದಲಾದ ಸೈನ್ಯ
ಅಲ್ಲೀಗಲು ನಮ್ಮ ಬನದಲೊಪ್ಪಿಹಳು ||೧೦||
ಹರಿ ಪಾದಕೆ ಶ್ರೀತುಲಸಿಯೇರಿಸಿದ
ನರರನು ಪರಮ ಪದಕೇರಿಸುವುದು
ನಿರುತದಿ ತುಲಸಿಯ ಕಂಡರವಗೆ
ನರಕಗಳ ದರುಶನ ಮತ್ತಿಲ್ಲ ||೧೧||
ಧನ್ಯ ತುಲಸಿಯ ದಳವಿಟ್ಟು ತೂಗೆ
ಮುನ್ನ ಕೃಷ್ಣಗೆ ಪಡಿ ಆಯಿತು
ಗಡನ್ನಿವಳ ವೃಂದಾವನದಲ್ಲಿ ನೆಟ್ಟು
ಮನೆ ಮನೆ ಮನ್ನಿಸದವನ್ಯಾವ ||೧೨||
ಕನಸಿನಲಿ ಕಂಡಂತೆ ಇನ್ನೊಂದು
ಕೊನೆವೆರಸಿದ ಪುಷ್ಪದಿ ಜಪಿಸಿ
ಅನುದಿನ ಹಯವದನನ್ನ ತೀರ್ಥವನು ಕೊಂಡು
ನಾ ಧನ್ಯನಾದೆನು ||೧೩||
yAtakayya tIrthakShEtragaLu
SrI tulasiya sEvipa sujanarige ||pa||
amRutava koDuva haruShadoLirda
kamaleyarasana akShigaLiMda
pramOdASru suriye kShIrAbdhdiyoLu
A mahAtulasi aMdudisidaLu ||1||
parimaLisuva mAleya nevadi
hariyudaradalli siriyolihaLu
taruNi tulasi tappadeyavana
caraNava rame Bajise BajipaLu ||2||
pUjisuvara Siradi nirmAlyagaLa
vyAjadiMda lakShmiya kUDe bahaLu
I jagadoLu tAvibbariddalli A
janArdananAkShaNa tahaLu ||3||
oMdu pradakShiNavanu mADidavara
hoMdippudu BUpradakShiNa puNya
eMdeMdivaLa sEvisuva nararige
iMdireyarasa kaivalyavIva ||4||
tulasiya neTTavanu matte tanage
iLeyoLu puTTuva vArteya kaLeva
jalaveredu beLesida manujara
kuladavara beLesu vaikuMThadalli ||5||
tulasiye ninna pOluvarAru
mUladalli sarva tIrthaMgaLihavu
daLadalli dEvarkaLa sannidhAna
celuvAgradi sakala vEdagaLu ||6||
tulasi maMjariye bEkaccutaMge
daLamAtra dorakalu sAkavage
saluvudu kAShTha mUla mRuttikeyu
PalavIvanivaLa pesargoLalu ||7||
koraLalli sara japa sara gaLannu
vara tulasiya maNiyiMda mADi
guru maMtrava japisuva nararu
hari SaraNara nelege sAruvaru ||8||
elli tulasiya banadalli lakShumI-
vallaBanu sarva sannihitanAgi
nelasihanivaLe saLoMdilladire
salladavaMganya kusumada pUje ||9||
ella pApaMgaLommomme kaimugiye
elli pOpudu dESa dESaMgaLige-
nelli mallige modalAda sainya
allIgalu namma banadaloppihaLu ||10||
hari pAdake SrItulasiyErisida
nararanu parama padakErisuvudu
nirutadi tulasiya kaMDaravage
narakagaLa daruSana mattilla ||11||
dhanya tulasiya daLaviTTu tUge
munna kRuShNage paDi Ayitu
gaDannivaLa vRuMdAvanadalli neTTu
mane mane mannisadavanyAva ||12||
kanasinali kaMDaMte innoMdu
koneverasida puShpadi japisi
anudina hayavadananna tIrthavanu koMDu
nA dhanyanAdenu ||13||
Leave a Reply