Composer : Shri Purandara dasaru
ವೃಂದಾವನವೇ ಮಂದಿರವಾಗಿಹೆ
ಇಂದಿರೆ ಶ್ರೀ ತುಳಸಿ ||
ನಂದನಂದನ ಮುಕುಂದಗೆ ಪ್ರಿಯಳಾದ |
ಚಂದದ ಶ್ರೀ ತುಳಸಿ ||ಪ||
ತುಳಸಿಯ ದಳದಲಿ ಹರಿಯಿಹನೆಂಬುದು |
ಶ್ರುತಿ ಸಾರುತಲಿದೆ ಕೇಳಿ |
ತುಳಸೀ ದರ್ಶನದಿಂದ ದುರಿತಗಳೆಲ್ಲ
ಹರಿದು ಪೋಗೊದು ಕೇಳಿ ||
ತುಳಸೀ ಸ್ಪರ್ಶನದಿಂದ ದೇಹ ಪಾವನವೆಂದು
ನೀವೆಲ್ಲ ತಿಳಿದು ಕೇಳಿ |
ತುಳಸೀ ಸ್ಮರಣೆ ಮಾಡಿ ಸಕಲೇಷ್ಟಗಳ ಪಡೆದು
ಸುಖದಲಿ ನೀವು ಬಾಳಿ [೧]
ಮೂಲಮೃತ್ತಿಕೆಯನು ಧರಿಸಿದ ಮಾತ್ರದಿ
ಮೂರುಲೋಕ ವಶವಗುವುದು |
ಮಾಲೆಗಳನೆ ಕೊರಳಲಿಟ್ಟ ಮನುಜಗೆ ಮುಕ್ತಿ
ಮಾರ್ಗವ ನೀವುದು ||
ಕಾಲಕಾಲಗಳಲಿ ಮಾಡಿದ ದುಷ್ಕರ್ಮ
ತಡೆದು ಬಿಸುಟು ಪೋಪುದು |
ಕಾಲನ ದೂತರ ಅಟ್ಟಿ ಕೈವಲ್ಯದ
ಲೀಲೆಯ ತೋರುವುದು [೨]
ಧರೆಯೊಳು ಸುಜನರ ಮರೆಯದೆ ಸಲಹುವ
ವರಲಕ್ಷ್ಮೀ ತುಳಸಿ |
ಪರಮಭಕ್ತರ ಪಾಪಗಳನು ತರಿದು ಪಾ-
ವನ ಮಾಡುವಳು ತುಳಸಿ ||
ಸಿರಿ ಆಯು ಪುತ್ರಾದಿ ಸಂಪತ್ತುಗಳನಿತ್ತು
ಹರುಷವೀವಳು ತುಳಸಿ |
ಪುರಂದರವಿಠಲನ್ನ ಚರಣ ಕಮಲದಾ
ಸ್ಮರಣೆ ಕೊಡುವಳು ತುಳಸಿ [೩]
vRuMdAvanavE maMdiravAgihe
iMdire SrI tuLasi ||
naMdanaMdana mukuMdage priyaLAda |
caMdada SrI tuLasi ||pa||
tuLasiya daLadali hariyihaneMbudu |
Sruti sArutalide kELi |
tuLasI darSanadiMda duritagaLella
haridu pOgodu kELi ||
tuLasI sparSanadiMda dEha pAvanaveMdu
nIvella tiLidu kELi |
tuLasI smaraNe mADi sakalEShTagaLa paDedu
suKadali nIvu bALi [1]
mUlamRuttikeyanu dharisida mAtradi
mUrulOka vaSavaguvudu |
mAlegaLane koraLaliTTa manujage mukti
mArgava nIvudu ||
kAlakAlagaLali mADida duShkarma
taDedu bisuTu pOpudu |
kAlana dUtara aTTi kaivalyada
lIleya tOruvudu [2]
dhareyoLu sujanara mareyade salahuva
varalakShmI tuLasi |
paramaBaktara pApagaLanu taridu pA-
vana mADuvaLu tuLasi ||
siri Ayu putrAdi saMpattugaLanittu
haruShavIvaLu tuLasi |
puraMdaraviThalanna caraNa kamaladA
smaraNe koDuvaLu tuLasi [3]
Leave a Reply