Vrundavanada seve

Composer : Shri Vadirajaru

By Smt.Shubhalakshmi Rao

ವೃಂದಾವನದ ಸೇವೆ ಮಾಡಿದವರಿಗೆ
ಭೂ-ಬಂಧನ ಬಿಡುಗಡೆಯಾಗುವುದು ||ಅ.ಪ.||

ಏಳುತಾಲಿದಿರೆ ಕಂಡು ಕರವ ಮುಗಿದು ಬೇಗ
ಈರೇಳು ಲೋಕದ ಮಾತೆಗೆ ನಮೋಯೆಂಬೋದಲ್ಲದೆ
ಏಳು ಪರದಕ್ಷಿಣೆಯನ್ನು ಮಾಡಿದವರಿಗೆ
ಏಳು ಜನಮದ ಪಾಪ ಹಿಂಗುವುದು (೧)

ಸಾರಿಸಿ ರಂಗವಲ್ಲಿಯ-ನಿಟ್ಟು ಮೇಲೆ
ಪನ್ನೀರನೆರೆದು ಪ್ರತಿ ದಿವಸದಲ್ಲಿ
ಸಾರಿ ಸೇವೆಯ ಮಾಡಿದವರಿಗ್-ಮುನ್ನ
ಸೇರಿಸುವಳು ತನ್ನ ಪದವಿಯನು (೨)

ಒಡೆಯನ ಮನೆಗೆ ನೀರು ತರುತಲೊಬ್ಬಳು
ಎಡಹಿ ಬಿದ್ದಳು ತನ್ನ ಕೊಡನೊಡೆಯೆ
ಸಿಡಿದು ಶ್ರೀತುಳಸಿಗೆ ತಂಪಾಗಲು ಮುನ್ನ
ಕೊಡಳೆ ಅವಳಿಗೆ ಮೋಕ್ಷ ಪದವಿಯನು (೩)

ಕೇಶವ ಎಂಬ ಭೂಸುರಗೆ ಶುಕಯೋಗಿ
ಉಪ-ದೇಶಿಸಿದನು ತನ್ನ ಭಾಗವತದಲ್ಲಿ
ಕಾಸುವೀಸ ಹೊನ್ನು ಹಣ ಸವೆಯದ ಮುನ್ನ
ನಿ-ರಾಶೆಯಿಂದಲಿ ಮುಕ್ತಿ ದೊರಕುವುದು (೪)

ಪೊಡವಿಗಧಿಕವಾದ ಸೋದೆ ಪುರದ ತ್ರಿವಿಕ್ರಮ
ಎಡ ಭಾಗದಲಿ ಲಕ್ಷ್ಮಿ ದೇವಿಯ ಸಹಿತ
ಸಡಗರದಿಂದಲಿ ಹಯವದನನ ಪಾದ
ಬಿಡದೆ ಪೂಜಿಸಿ ಭಕ್ತಿ ಪಡೆವಿರಯ್ಯ (೫)


vRuMdAvanada sEve mADidavarige
BU-baMdhana biDugaDeyAguvudu ||a.pa.||

ELutAlidire kaMDu karava mugidu bEga
IrELu lOkada mAtege namOyeMbOdallade
ELu paradakShiNeyannu mADidavarige
ELu janamada pApa hiMguvudu (1)

sArisi raMgavalliya-niTTu mEle
pannIraneredu prati divasadalli
sAri sEveya mADidavarig-munna
sErisuvaLu tanna padaviyanu (2)

oDeyana manege nIru tarutalobbaLu
eDahi biddaLu tanna koDanoDeye
siDidu SrItuLasige taMpAgalu munna
koDaLe avaLige mOkSha padaviyanu (3)

kESava eMba BUsurage SukayOgi
upa-dESisidanu tanna BAgavatadalli
kAsuvIsa honnu haNa saveyada munna
ni-rASeyiMdali mukti dorakuvudu (4)

poDavigadhikavAda sOde purada trivikrama
eDa BAgadali lakShmi dEviya sahita
saDagaradiMdali hayavadanana pAda
biDade pUjisi Bakti paDevirayya (5)

Leave a Reply

Your email address will not be published. Required fields are marked *

You might also like

error: Content is protected !!