Composer : Shri Amba bai
ವರವ ಕೊಡೆ ವಾರಿಜಾಕ್ಷಿ ನೀರೆ ತುಳಸಿಯೆ
ಕರಕರೆಯಗೊಳಿಸ ಬೇಡೆ ಕರುಣ ಪೂರ್ಣಳೆ ||ಪ||
ಸಿರಿವರನ ಸಹಿತ ನಿನ್ನ ಪೂಜಿಪೆ ಮುನ್ನ
ಪರಿಪರಿಯ ಧೂಪ ದೀಪ ಗಂಧಾಕ್ಷತೆಗಳಿಂ ||೧||
ವಾರಿಜಾಕ್ಷಿ ಷಡ್ರಸಗಳ ಆರೋಗಣೆ ಕೊಳ್ಳೆ
ನಾರಿ ನಿನಗೆ ಸರ್ವವಿಧದಿ ನಾನು ಎರಗುವೆ ||೨||
ಸಿರಿವರ ಗೋಪಾಲಕೃಷ್ಣವಿಠ್ಠಲನರಸಿಯೆ
ಕರದು ಎನಗೆ ಸರ್ವಾಭೀಷ್ಟ ಕೊಟ್ಟು ಪಾಲಿಸೆ ||೩||
varava koDe vArijAkShi nIre tuLasiye
karakareyagoLisa bEDe karuNa pUrNaLe ||pa||
sirivarana sahita ninna pUjipe munna
paripariya dhUpa dIpa gaMdhAkShategaLiM ||1||
vArijAkShi ShaDrasagaLa ArOgaNe koLLe
nAri ninage sarvavidhadi nAnu eraguve ||2||
sirivara gOpAlakRuShNaviThThalanarasiye
karadu enage sarvABIShTa koTTu pAlise ||3||
Leave a Reply