Tulasi Madhyadi

Composer : Shri Vyasarajaru

By Smt.Nandini Sripad,Blore

ಶ್ರೀ ವ್ಯಾಸರಾಯರ ಕೃತಿ, ರಾಗ: ವಸಂತ, ರೂಪಕತಾಳ

ತುಳಸಿಮಧ್ಯದಿ ಇರುವ ಕೃಷ್ಣನ |
ಬಳಸಿ ನೋಡುವ ಬನ್ನಿರೆ || ಪ ||

ಗೊಲ್ಲ ಸತಿಯರ ಗಲ್ಲ ಪಿಡಿದು |
ಎಲ್ಲ ನಟನೆಯ ತೋರುವ ||
ಫುಲ್ಲನಾಭನ ಮೆಲ್ಲ ಮೆಲ್ಲನೆ |
ಎಲ್ಲ ಹೆಂಗಳು ನೋಡಿರೆ || ೧ ||

ಕಾಮಿಜನರಿಗೆ ಕಾಮಿತಾರ್ಥವ |
ಪ್ರೇಮದಿಂದಲಿ ಕೊಡುತಿಹ ||
ಕಾಮನಯ್ಯನ ಚರಣಕಮಲವ |
ನಂಬಿ ಬದುಕುವ ಬನ್ನಿರೆ ||೨||

ಅಂಗರಾಗ ಶ್ರೀರಂಗ ಮಂಗಳ |
ಸಿಂಗರದಿ ತಾ ನಿಂತಿಹ ||
ಮಂಗಳಾಂಗನ ಮಂಗಳಾರತಿ |
ಹೆಂಗಳೆಲ್ಲರು ನೋಡಿರೆ || ೩ ||

ಒಂದು ಕೈಯಲಿ ಗಂಧಪುಷ್ಪ ಮ -|
ತ್ತೊಂದು ಕೈಯಲಿ ರಂಗನು ||
ಮಂದಹಾಸದಿ ಇಂದುಮುಖಿಯರಿ|
ಗ್ಹೊಂದಿಸುವನತಿ ಚಂದದಿ || ೪ ||

ಶುಕ್ರವಾರದಿ ಪೂಜೆಗೊಂಬುವ |
ಚಕ್ರಧರ ಶ್ರೀಕೃಷ್ಣನು ||
ನಕ್ರಹರ ತ್ರಿವಿಕ್ರಮನು ಮನ -|
ವಾಕ್ರಮಿಸಿ ಸುಖ ಕೊಡುತಿಹ|| ೫ ||


tuLasi madhyadi iruva kRuShNana |
baLasi nODuva bannire || pa ||

golla satiyara galla piDidu |
ella naTaneya tOruva ||
PullanABana mella mellane |
ella heMgaLu nODire || 1 ||

kAmijanarige kAmitArthava |
prEmadiMdali koDutiha ||
kAmanayyana caraNakamalava |
naMbi badukuva bannire ||2||

aMgarAga SrIraMga maMgaLa |
siMgaradi tA niMtiha ||
maMgaLAMgana maMgaLArati |
heMgaLellaru nODire || 3 ||

oMdu kaiyali gaMdhapuShpa ma -|
ttoMdu kaiyali raMganu ||
maMdahAsadi iMdumuKiyari|
g~hoMdisuvanati caMdadi || 4 ||

SukravAradi pUjegoMbuva |
cakradhara SrIkRuShNanu ||
nakrahara trivikramanu mana -|
vAkramisi suKa koDutiha|| 5 ||

Leave a Reply

Your email address will not be published. Required fields are marked *

You might also like

error: Content is protected !!