Composer : Shri Gurugovinda dasaru
ತುಳಸಿ ದೇವಿ ನಮಿಸಿ ಬೇಡುವೇ | ನಿಮ್ಮ ಪಾದ
ಒಲುಮೆಯಿಂದ ಭಜಿಸಿ ಪಾಡುವೇ ||ಪ||
ಅಲವ ಬೋಧರ ಹೃದಯ ವಾಸ |
ಸುಲಭ ನಮ್ಮ ಹರಿಯ ರೂಪ
ಫಲಿಸಿ ಎನ್ನ ಹೃದಯದಲ್ಲಿ |
ಗೆಲಿಸು ಎನ್ನ ಭವದ ತಾಪ ||ಅ.ಪ.||
ಹರಿಯ ನಯನಧಾರೆ ಸಂಭವೇ |
ಕಾಯೆ ತಾಯೆ ಸಿರಿಯ ರಮಣ ನಮಿತ ಪ್ರೀಯಳೇ ||
ವರ ಸುವರ್ಣ ಪುಷ್ಪವಮಿತ |
ಎರಮಿಸಿ ಬೇಡಿದಾರು ಹರಿಯು ಒಪ್ಪ ನಿಮ್ಮದಳ |
ವಿರಹಿತವಾದ ಪೂಜೆಯನ್ನ [೧]
ಸರಸಿಜಾಕ್ಷಿ ನಿನ್ನ ಮೃತ್ತಿಕಾ |
ಫಾಲದಲ್ಲಿ ಧರಿಸುವರ ಅಘಕೆ ಪಾವಕಾ ||
ಕರಣ ತೀರ್ಥಾದಿಗಳ | ವರದಳಗಳ್
ದ್ವಿನವಗಳನ್ನ ಧರಿಪ ಜನರ ಭಿವಿತ್ತು |
ಘೋರ ಪಾಪವನ್ನು ಕಳೆವೆ [೨]
ಶ್ರೀರಮಣಿ ಆವಿಷ್ಟಯೇ | ನಮಿಪೆ ತಾಯೆ
ಕರುಣಿಸೆನಗೆ ಸುಜನ ಸೇವಿತೇ ||
ಗುರುಗಳಂತರ್ಯಾಮಿಯಾದ |
ಗುರು ಗೋವಿಂದ ವಿಠಲಾನ ಚರಣ ವನಜ
ತೋರಿ ಎನಗೆ | ಹರಿಸು ಎನ್ನ ತ್ರಿವಿಧ ತಾಪ [೩]
tuLasi dEvi namisi bEDuvE | nimma pAda
olumeyiMda Bajisi pADuvE ||pa||
alava bOdhara hRudaya vAsa |
sulaBa namma hariya rUpa
Palisi enna hRudayadalli |
gelisu enna Bavada tApa ||a.pa.||
hariya nayanadhAre saMBavE |
kAye tAye siriya ramaNa namita prIyaLE ||
vara suvarNa puShpavamita |
eramisi bEDidAru hariyu oppa nimmadaLa |
virahitavAda pUjeyanna [1]
sarasijAkShi ninna mRuttikA |
PAladalli dharisuvara aGake pAvakA ||
karaNa tIrthAdigaLa | varadaLagaL
dvinavagaLanna dharipa janara Bivittu |
GOra pApavannu kaLeve [2]
SrIramaNi AviShTayE | namipe tAye
karuNisenage sujana sEvitE ||
gurugaLaMtaryAmiyAda |
guru gOviMda viThalAna caraNa vanaja
tOri enage | harisu enna trividha tApa [3]
Leave a Reply