Composer : Shri Rama dasaru
Bade Sahebaru – 1882 – Jolada Hedagi of Devadurga Taluk, Raichur District.
ಉಗಾಭೋಗ
ತುಲಸಿಯಿರಲು ತುರುಚಿಯನು ತಂದೆ
ಗಂಗೆಯಿರಲು ತೋಡಿದ ಕೂಪದಿ ಪಾನವ ಮಾಡಿದೆ
ರಾಜ ಹಂಸವಿರಲು ಕೋಯೆಂದು ಕೂಗುವ ಕೋಳಿಗೆ ಹಾತೊರೆದೆ
ಬಾವನ್ನವಿರಲು ಬೇವಿನ ನೆಳಲೊಳೊಗೊರಗಿದೆ
ತಾಯಿಯ ಮಾರಿ ತೊತ್ತು ತರುವ ಮಾನವನಂತೆ
ಪುರಂದರವಿಠಲ ನೀನಿರಲನ್ಯತ್ರ ದೈವಗಳ ಎಣಿಸಿದೇ ||
ತುಳಸಮ್ಮ ಎನಗೊಲಿಯಮ್ಮ
ವಿಲಸಿತ ವಿಮಲೆ ನೀ ಕಲ್ಯಾಣ ಮಾಡೆನಗೆ [ಪ]
ನಿಲಯ ನಿಲಯದಲಿ ನಿಂದು ಭಕ್ತ
ಕುಲವನುದ್ಧರಿಸಿದಿ ಇಂದುಮುಖಿ
ಮಲಿನ ಹರಣೆ ದಯಸಿಂಧು ಅಹ
ಕುಲವನುದ್ಧರಿಸೆನ್ನ ಹೊಲೆಯ ಬವಣೆಯಲಿ
ಕಳವಳಪಡಿಸದೆ ಸಲಹು ಬೇಗೆನ್ನಮ್ಮ [೧]
ಭಯದೂರೆ ಜಯಕಾರೆ ಜಗಕೆ ಲೋಕ
ತ್ರಯದ ಜನನಿ ಎನ್ನ ಮನಕೆ ಬೇಗ
ಜಯವ ನೀಡಿ ಮಾಡು ಜೋಕೆ ಅಹ ರಮೆ
ದಯಯುತೆ ನಿನ್ನ ನಯದಿ ಬೇಡುವೆನವ್ವ
ಭವಭವದಲಿ ಎನ್ನ ಜಯವ ಪೊಂದಿಸೆ ತಾಯಿ [೨]
ಜಲಜನಾಭನ ಮೋಹಮಾಲೆ ನೀನು
ಬಲು ದಯಾನ್ವಿತಭಕ್ತಿ ಶೀಲೆ ಎನ್ನ
ಗಳವೆ ಪೊಗಳಲು ನಿನ್ನ ಲೀಲೆ ಆಹ
ಚೆಲುವ ಶ್ರೀರಾಮನ ಕೂಡಿಕೊಂಡೆನ್ನೊಳು
ನೆಲೆಗೊಳ್ಳು ಬಿಡದೆ ವರ ಫಲ ಪ್ರದಾಯಿನಿ [೩]
ugABOga
tulasiyiralu turuciyanu taMde
gaMgeyiralu tODida kUpadi pAnava mADide
rAja haMsaviralu kOyeMdu kUguva kOLige hAtorede
bAvannaviralu bEvina neLaloLogoragide
tAyiya mAri tottu taruva mAnavanaMte
puraMdaraviThala nIniralanyatra daivagaLa eNisidE ||
tuLasamma enagoliyamma
vilasita vimale nI kalyANa mADenage [pa]
nilaya nilayadali niMdu Bakta
kulavanuddharisidi iMdumuKi
malina haraNe dayasiMdhu aha
kulavanuddharisenna holeya bavaNeyali
kaLavaLapaDisade salahu bEgennamma [1]
BayadUre jayakAre jagake lOka
trayada janani enna manake bEga
jayava nIDi mADu jOke aha rame
dayayute ninna nayadi bEDuvenavva
BavaBavadali enna jayava poMdise tAyi [2]
jalajanABana mOhamAle nInu
balu dayAnvitaBakti SIle enna
gaLave pogaLalu ninna lIle Aha
celuva SrIrAmana kUDikoMDennoLu
nelegoLLu biDade vara Pala pradAyini [3]
Leave a Reply