Tatva suvvali – Tulasi stotra

Composer : Shri Jagannatha dasaru

ಶ್ರೀ ತುಲಸೀ ಸ್ತುತಿ

ಬೃಂದಾವನಿ ಜನನಿ ವಂದಿಸುವೆ ಸತತ ಜ –
ಲಂಧರನ ರಾಣಿ ಕಲ್ಯಾಣಿ ಶ್ರೀ ತುಳಸೀ || ೧ ||

ಜಲಜಾಕ್ಷನಮಲ ಕಜ್ಜಲಬಿಂದು ಪೀಯೂಷ –
ಕಲಶದಿ ಬೀಳೆ ಜನಿಸಿದಿ | ಜನಿಸಿದಿ ಹರಿಯಿಂದ ಶ್ರೀ –
ತುಲಸಿ ನೀನೆಂದು ಕರೆಸಿದಿ || ೨ ||

ಶ್ರೀತರುಣಿವಲ್ಲಭನ ಪ್ರೀತಿವಿಷಯಳೆ ನಿನ್ನ
ನಾ ತುತಿಸಿ ಕೈಯ ಮುಗಿವೆನು | ಮುಗಿವೆ ಎನ್ನಯ ಮಹಾ –
ಪಾತಕವ ಕಳೆದು ಪೊರೆಯಮ್ಮ || ೩ ||

ನೋಡಿದವ ದುರಿತ ಈಡ್ಯಾಡಿದವ ನಿನ್ನ ಕೊಂ –
ಡಾಡಿದವ ನಿತ್ಯ ಹರಿಪಾದ | ಹರಿಪಾದ ಕಮಲಗಳ
ಕೂಡಾಡಿದವ ಸತ್ಯ ಎಂದೆಂದು || ೪ ||

ನಿಂದಿಸಿದವರೆಲ್ಲ ನಿಂದ್ಯರಾಗುವರು ಅಭಿ –
ವಂದಿಸಿದ ಜನರು ಜಗದೊಳು | ಜಗದೊಳು ಜನರಿಂದ
ವಂದ್ಯರಾಗುವರು ಎಂದೆಂದು || ೫ ||

ಕಲುಷವರ್ಜಿತೆ ನಿನ್ನ ದಳಗಳಿಂದಲಿ ಲಕ್ಷ್ಮೀ –
ನಿಲಯನಂಘ್ರಿಗಳ ಪೂಜಿಪ | ಪೂಜಿಪರಿಗೆ ಪರಮ ಮಂ –
ಗಳದ ಪದವಿತ್ತು ಸಲಹುವಿ || ೬ ||

ಶ್ರೀತುಳಸಿದೇವಿ ಮನ್ಮಾತ ಲಾಲಿಸು ಜಗ –
ನ್ನಾಥವಿಠಲನ್ನ ಚರಣಾಬ್ಜ | ಚರಣಾಬ್ಜ ಮನದಲ್ಲಿ
ನೀ ತೋರಿಸೆನೆಗೆ ನಿರುತದಿ || ೭ ||


SrI tulasI stuti

bRuMdAvani janani vaMdisuve satata ja –
laMdharana rANi kalyANi shree tuLasI || 1 ||

jalajAkShanamala kajjalabiMdu pIyUSha –
kalaSadi bILe janisidi | janisidi hariyiMda SrI –
tulasi nIneMdu karesidi || 2 ||

SrItaruNivallaBana prItiviShayaLe ninna
nA tutisi kaiya mugivenu | mugive ennaya mahA –
pAtakava kaLedu poreyamma || 3 ||

nODidava durita IDyADidava ninna koM –
DADidava nitya haripAda | haripAda kamalagaLa
kUDADidava satya eMdeMdu || 4 ||

niMdisidavarella niMdyarAguvaru aBi –
vaMdisida janaru jagadoLu | jagadoLu janariMda
vaMdyarAguvaru eMdeMdu || 5 ||

kaluShavarjite ninna daLagaLiMdali lakShmI –
nilayanaMGrigaLa pUjipa | pUjiparige parama maM –
gaLada padavittu salahuvi || 6 ||

SrItuLasidEvi manmAta lAlisu jaga –
nnAthaviThalanna caraNAbja | caraNAbja manadalli
nee tOrisenege nirutadi || 7 ||

Leave a Reply

Your email address will not be published. Required fields are marked *

You might also like

error: Content is protected !!