Composer : Shri Vijayadasaru
ಶ್ರೀ ತುಳಸಿಯ ಸೇವಿಸಿ || ಪ ||
ಶ್ರೀ ತುಳಸಿಯಳ ಸೇವೆ ಪ್ರೀತಿಯಿಂದಲಿ ಮಾಡೆ
ಗಾತರದ ಮಲವಳಿದು ಮಾತೆಯೆಂಬನಿತರೊಳು
ಪಾತಕ ಪರಿಹರಿಸಿ ಪುನೀತರನು ಮಾಡುವಳು
ಯಾತಕನುಮಾನವಯ್ಯ || ಅ.ಪ ||
ಸುಧೆಗಡಲ ಮಥಿಸುವ ಸಮಯದಲಿ ವೈದ್ಯನಾಗಿ
ಪದುಮನಾಭನು ತಾನು ಉದುಭವಿಸಿ ಬರಲಂದು
ಉದುರಿದುವು ಕಣ್ಣಿಂದ ಉದಕ ಉತ್ಸಹದಿಂದ
ಲದೆ ತುಳಸಿ ನಾಮನಾಗೆ ||
ತ್ರಿದಶರೊಂದಿಸುತ ಮೋದದಿಂ ಕೊಂಡಾಡಿದರು
ಒದಗಿ ಸುಜನರು ತಮ್ಮ ಸದನದಲಿ ನಿತ್ಯ ಸ –
ತ್ಪದವಿಗೆ ಸಿದ್ಧವೆಂದು ಮುದದಿಂದ ತಿಳಿದು
ವೃಂದಾವನ ರಚಿಸಿದರೈಯ || ೧ ||
ಮೂಲದಲಿ ಸರ್ವ ತೀರ್ಥಗಳುಂಟು ತನ್ಮಧ್ಯೆ
ಕಾಲ ಮೀರದೆ ಸರ್ವ ನದನದಿಗಳಮರಗಣ
ಮೇಲೆ ದಳ ಒಂದರಲಿ ಒಂದೊಂದು
ಮೂರುತಿಯು ವಾಲಯವಾಗಿಪ್ಪುದು ||
ಮೂರ್ಲೋಕಗಳ ಧರ್ಮ ವ್ರತಕೆ ಮಿಗಿಲೆನಿಸುವುದು
ನೀಲಮೇಘಶ್ಯಾಮಗರ್ಪಿಸಿದ ತುಳಸಿ ನಿ –
ರ್ಮಾಲ್ಯವನು ಸತತ ಕರ್ಣದಲಿ ಧರಿಸಿದ
ಮನುಜ ಕಾಲನಾಳಿಗೆ ಶೂಲನೊ || ೨ ||
ಉದಯದೊಳಗೆದ್ದು ನೀರೆರೆದು ಮಜ್ಜನಗೈದು
ತುದಿ ಬೆರಳಿನಿಂದ ಮೃತ್ತಿಕೆಯ ಫಣೆಯೊಳಗಿಟ್ಟು
ಮುದದಿಂದಲೊಂದು ಪ್ರದಕ್ಷಿಣಿ ನಮಸ್ಕಾರ
ತದನಂತರದಲಿ ಭಜನೆ ||
ವದನದೊಳು ಗೈಯೆ ಧರೆಯೊಳಗಿದ್ದ ಸರ್ವನದ –
ನದಿಗಳಿಗೆ ನೂರ್ಮಡಿ ಯಾತ್ರೆ ಮಾಡಿದ ಫಲ
ಒದಗುವುದು ಹಿಂದಣಾನಂತ ಜನ್ಮಗಳಘವ
ತುದಿ ಮೊದಲು ದಹಿಪುದಯ್ಯ|| ೩ ||
ಆವವನ ಮನೆಯಲ್ಲಿ ತುಳಸಿ ಸಾಲಿಗ್ರಾಮ
ಆವವನ ಮನೆಯಲ್ಲಿ ಹರಿದಾಸರಾ ಕೂಟ
ಆವವನ ಭುಜದಲ್ಲಿ ತಪ್ತಮುದ್ರಾಂಕಿತವು
ಪಾವಮಾನಿಯ ಮತದೊಳು ||
ಆವವನು ಕಾಲತ್ರಯವ ಕಳೆವ ನಾವಲ್ಲಿ
ಶ್ರೀವಾಸುದೇವಮುನಿದೇವಾದಿ ಗಣ ಸಹಿತ
ಕಾವುತ್ತಲಿಪ್ಪ ಬಲಿಗೊಲಿದಂತೆ ತೊಲಗದಲೆ
ಭಾವಿಸಿರಿ ಭಾವಜ್ಞರು || ೪ ||
ಕಂಡರೆ ದುರಿತಕ್ಕೆ ಕೆಂಡವನು ಬೀರುವುದು
ಕೊಂಡಾಡಿದರೆ ಪುಣ್ಯವಪರಿಮಿತವುಂಟು ಮೈ –
ದಿಂಡುಗೆಡಹಿದರೆ ಪುನರಪಿ ಜನನವಿಲ್ಲ ಸಲೆ
ದಂಡ ವಿಟ್ಟವ ಮುಕ್ತನೊ ||
ಚಂಡಾಲ ಕೇರಿಯೊಳು ಇರಲು ಹೀನಯವಲ್ಲ
ಪಾಂಡುರಂಗ ಕ್ಷೇತ್ರ ಸರಿಮಿಗಿಲು ಎನಿಸುವುದು
ತಂಡ ತಂಡದ ಕುಲಕೆ ಅವರವರ ಯೋಗ್ಯ ಫಲ
ಕಂಡವರಿಗುಂಟೆ ಅಯ್ಯ || ೫ ||
ಚಿತ್ತ ಶುದ್ದನು ಆಗಿ ಮುಂಝಾನೆಯೊಳು ತುಳಸಿ
ಸ್ತೋತ್ರವನೆ ಮಾಡುತ್ತ ದಿವ್ಯವಾಗಿಹ ತ್ರಿದಳ
ಪ್ರತ್ಯೇಕ ಪಾತ್ರೆಯಲಿ ತೆಗೆದು ಶೋಧಿಸಿತುಂಬಿ
ವಿತ್ತಾದಿಯಲಿ ತಾರದೆ ||
ಮತ್ತೆ ವಸ್ತ್ರದಿ ಹಸ್ತ ಶಿಲೆಯರ್ಕ ಏರಂಡ
ಪತ್ರದಲಿ ತಾರದಲೆ ಭೂಮಿಯೊಳಗಿಡದೆ ಪೂ –
ರ್ವೋತ್ತರಭಿಮುಖನಾಗಿ ಭಕ್ತಿಯಿಂ ತರಬೇಕು
ಹೊತ್ತು ಮೀರಿಸಲಾಗದೊ || ೬ ||
ಕವಿ ಮಂಗಳವಾರ ವೈಧೃತಿ ವ್ಯತೀಪಾತ
ರವಿ ಶಶಿಯ ಸಂಗಮ ಪರ್ವಣಿ ಪುಣ್ಯಕಾಲ
ದಿವಸ ದ್ವಾದಶಿ ಶ್ರೇಷ್ಠ ಉಪರಾಗ ಪಿತೃಶ್ರಾದ್ಧ
ಇವುಗಳಲಿ ತೆಗೆಯಾದಿರಿ ||
ನವವಸನ ಪೊದ್ದು ಊಟವ ಮಾಡಿ ತಾಂಬೂಲ –
ಸವಿಯುತ್ತ ಮುಟ್ಟದಿರಿ ಯುವತಿ ಶೂದ್ರರಿಂ ತರಿ –
ಸುವುದುಚಿತವಲ್ಲೆಂದು ತಿಳಿದು ಕೊಂಡಾಡುತಿರಿ
ದಿವಸ ದಿವಸಗಳೊಳಯ್ಯ || ೭ ||
ದಳವಿದ್ದರೇ ಒಳಿತು ಇಲ್ಲದಿದ್ದರೆ ಕಾಷ್ಟ
ಎಲೆ ಮೃತ್ತಿಕೆಗಳಿಂದ ಪೂಜೆ ಮಾಡಲಿಬಹುದು
ತುಳಸಿ ನಿರ್ಮಾಲ್ಯವಾದರು ತ್ರಿವಾರದಲಿ
ತೊಳೆ ತೊಳೆದು ಏರಿಸಬಹುದು ||
ತುಳಸಿ ಒಣಗಿದ್ದರೂ ಲೇಶದೋಷಗಳಿಲ್ಲ
ತುಳಸಿ ವಿರಹಿತವಾದ ಪೂಜೆಯದು ಸಲ್ಲದು
ತುಳಸಿ ತುಳಸೀ ಎಂದು ಸ್ಮರಣೆಯಾದರು ಮಾಡಿ
ಜಲಜಾಕ್ಷನರ್ಚಿಸಿರೈಯ್ಯ || ೮ ||
ತುಳಸಿ ಇಲ್ಲದಸದನಹೊಲೆಮಾದಿಗರ ಸದನ
ತುಳಸಿ ಇಲ್ಲದ ಬೀದಿ ನರಕಕೆಳಸುವ ಹಾದಿ
ತುಳಸಿ ಇಲ್ಲದ ತೀರ್ಥವೆಂದಿಗಿದ್ದರು ವ್ಯರ್ಥ
ತುಳಸಿ ಬಲು ಪ್ರಾಧಾನ್ಯವೊ ||
ತುಳಸಿ ಮಿಶ್ರಿತವಾದ ನೈವೇದ್ಯ ಗತಿಸಾದ್ಯ
ತುಳಸಿ ಧರಿಸಿದ ದೇಹ ಪರಮ ಸಾರ್ಥಕವಯ್ಯ
ತುಳಸಿದಳ ಹರಿಗೆ ಅರ್ಪಿಸಿದವನ ಪುಣ್ಯಕ್ಕೆ
ನೆಲೆಯ ನಾ ಕಾಣೆನಯ್ಯ || ೯ ||
ಶಿವನಸತಿಪ್ರಹ್ಲಾದ ನಾರದ ವಿಭೀಷಣನು
ಧ್ರುವ ಅಂಬರೀಷ ಶಶಿಬಿಂದು ರುಕ್ಮಾಂಗದನು
ಇವರೆ ಮೊದಲಾದವರು ಭಕ್ತಿಪೂರ್ವಕದಲಿ
ವಿವರವನು ತಿಳಿದರ್ಚಿಸಿ ||
ತವಕದಿಂ ತಂತಮ್ಮ ಘನ ಪದವನೈದಿದರು
ಭುವನದೊಳಗುಳ್ಳ ನಿರ್ಮಲ ಜನರು ಭಜಿಸಿದರು
ಜವಭಟರನೋಡಿಸೀ ಜಡದೇಹವನು ನೀಗಿ
ಭವದೂರರಾದರೈಯ || ೧೦ ||
ಉದಯಕಾಲದೊಳೆದ್ದು ಆವನಾದರು ತನ್ನ
ಹೃದಯ ನಿರ್ಮಲನಾಗಿ ಭಕುತಿಪೂರ್ವಕದಿಂದ
ಸದಮಲಾ ತುಳಸಿಯನು ಸ್ತೋತ್ರಮಾಡಿದ ಕ್ಷಣಕೆ
ಮದಗರ್ವ ಪರಿಹಾರವೊ -||
ಇದೆ ತುಳಸಿ ಸೇವಿಸಲು ಪೂರ್ವದಲಿ ಕಾವೇರಿ
ನದಿಯ ತೀರದಲೊಬ್ಬ ಭೂಸುರ ಪದಕೆ ಪೋದ
ಪದಪದೆಗೆಸಿರಿ ವಿಜಯವಿಠ್ಠಲಗೆ ಪ್ರಿಯಳಾದ
ಮದನತೇಜಳ ಭಜಿಸಿರೈಯ || ೧೧ ||
SrI tuLasiya sEvisi || pa ||
SrI tuLasiyaLa sEve prItiyiMdali mADe
gAtarada malavaLidu mAteyeMbanitaroLu
pAtaka pariharisi punItaranu mADuvaLu
yAtakanumAnavayya || a.pa ||
sudhegaDala mathisuva samayadali vaidyanAgi
padumanABanu tAnu uduBavisi baralaMdu
uduriduvu kaNNiMda udaka utsahadiMda
lade tuLasi nAmanAge ||
tridaSaroMdisuta mOdadiM koMDADidaru
odagi sujanaru tamma sadanadali nitya sa –
tpadavige siddhaveMdu mudadiMda tiLidu
vRuMdAvana racisidaraiya || 1 ||
mUladali sarva tIrthagaLuMTu tanmadhye
kAla mIrade sarva nadanadigaLamaragaNa
mEle daLa oMdarali oMdoMdu
mUrutiyu vAlayavAgippudu ||
mUrlOkagaLa dharma vratake migilenisuvudu
nIlamEGaSyAmagarpisida tuLasi ni –
rmAlyavanu satata karNadali dharisida
manuja kAlanALige SUlano || 2 ||
udayadoLageddu nIreredu majjanagaidu
tudi beraLiniMda mRuttikeya PaNeyoLagiTTu
mudadiMdaloMdu pradakShiNi namaskAra
tadanaMtaradali Bajane ||
vadanadoLu gaiye dhareyoLagidda sarvanada –
nadigaLige nUrmaDi yAtre mADida Pala
odaguvudu hiMdaNAnaMta janmagaLaGava
tudi modalu dahipudayya|| 3 ||
Avavana maneyalli tuLasi sAligrAma
Avavana maneyalli haridAsarA kUTa
Avavana Bujadalli taptamudrAMkitavu
pAvamAniya matadoLu ||
Avavanu kAlatrayava kaLeva nAvalli
SrIvAsudEvamunidEvAdi gaNa sahita
kAvuttalippa baligolidaMte tolagadale
BAvisiri BAvaj~jaru || 4 ||
kaMDare duritakke keMDavanu bIruvudu
koMDADidare puNyavaparimitavuMTu mai –
diMDugeDahidare punarapi jananavilla sale
daMDa viTTava muktano ||
caMDAla kEriyoLu iralu hInayavalla
pAMDuraMga kShEtra sarimigilu enisuvudu
taMDa taMDada kulake avaravara yOgya Pala
kaMDavariguMTe ayya || 5 ||
citta Suddanu Agi muMJAneyoLu tuLasi
stOtravane mADutta divyavAgiha tridaLa
pratyEka pAtreyali tegedu SOdhisituMbi
vittAdiyali tArade ||
matte vastradi hasta Sileyarka EraMDa
patradali tAradale BUmiyoLagiDade pU –
rvOttaraBimuKanAgi BaktiyiM tarabEku
hottu mIrisalAgado || 6 ||
kavi maMgaLavAra vaidhRuti vyatIpAta
ravi SaSiya saMgama parvaNi puNyakAla
divasa dvAdaSi SrEShTha uparAga pitRuSrAddha
ivugaLali tegeyAdiri ||
navavasana poddu UTava mADi tAMbUla –
saviyutta muTTadiri yuvati SUdrariM tari –
suvuducitavalleMdu tiLidu koMDADutiri
divasa divasagaLoLayya || 7 ||
daLaviddarE oLitu illadiddare kAShTa
ele mRuttikegaLiMda pUje mADalibahudu
tuLasi nirmAlyavAdaru trivAradali
toLe toLedu Erisabahudu ||
tuLasi oNagiddarU lESadOShagaLilla
tuLasi virahitavAda pUjeyadu salladu
tuLasi tuLasI eMdu smaraNeyAdaru mADi
jalajAkShanarcisiraiyya || 8 ||
tuLasi illadasadanaholemAdigara sadana
tuLasi illada bIdi narakakeLasuva hAdi
tuLasi illada tIrthaveMdigiddaru vyartha
tuLasi balu prAdhAnyavo ||
tuLasi miSritavAda naivEdya gatisAdya
tuLasi dharisida dEha parama sArthakavayya
tuLasidaLa harige arpisidavana puNyakke
neleya nA kANenayya || 9 ||
SivanasatiprahlAda nArada viBIShaNanu
dhruva aMbarISha SaSibiMdu rukmAMgadanu
ivare modalAdavaru BaktipUrvakadali
vivaravanu tiLidarcisi ||
tavakadiM taMtamma Gana padavanaididaru
BuvanadoLaguLLa nirmala janaru Bajisidaru
javaBaTaranODisI jaDadEhavanu nIgi
BavadUrarAdaraiya || 10 ||
udayakAladoLeddu AvanAdaru tanna
hRudaya nirmalanAgi BakutipUrvakadiMda
sadamalA tuLasiyanu stOtramADida kShaNake
madagarva parihAravo -||
ide tuLasi sEvisalu pUrvadali kAvEri
nadiya tIradalobba BUsura padake pOda
padapadegesiri vijayaviThThalage priyaLAda
madanatEjaLa Bajisiraiya || 11 ||
Leave a Reply