Composer : Shri Prasannavenkata dasaru
ಶ್ರೀ ತುಳಸಿ ಮಹಿಮೆಯನು ಪೊಗಳಲಳವಲ್ಲ ಶ್ರೀ
ನಾಥ ನಾರಾಯಣನ ಅರ್ಚನೆಗೆ ಸರ್ವದಾ
ಪ್ರೀತಿಕರಳಾಗಿ ರಾಜಿಪಳು ಕಲಿಯುಗದಲ್ಲಿ
ನೋಂತವರ ಭಾಗ್ಯವೆಂತೊ ||ಪ||
ಶ್ರೀಮದಾರ್ಜಿತ ಕ್ಷೀರವಾರಿಧಿಯ ಮಥಿಸುತಿರೆ
ಆ ಮಹಾವಿಷ್ಣುವಿನ ನೇತ್ರದಿಂದಲಿ ಹೊರಟ
ಪ್ರೇಮಜಲದುದ್ಭವಿಸಿ ನಳನಳಿಸಿ
ದಿವ್ಯ ಆಮೋದ ಪೂರ್ಣಳಾಗಿ
ಭೂಮಿ ಪಾವನವ ಮಾಡುತಲಿ ಭೂನಿರ್ಜರರ
ಧಾಮ ಧಾಮಗಳಲ್ಲಿ ವೃಂದಾವನದಿ ನೆಲಸಿ
ಕಾಮಿತ ಫಲವನೀವ ಕಲ್ಯಾಣಿ ಕೃಷ್ಣನಿಗೆ
ನೇಮದಿಂ ಪ್ರಿಯಳಾದ (೧)
ಈ ಮನುಜ ದೇಹದಲಿ ದಾವ ಪ್ರಾಣಿಯು ಪಿತೃ
ಸ್ತೋಮವನ್ನ್-ಉದ್ಧರಿಪೆನೆಂದರೆ ಸುಲಭ ಸಾಧ್ಯ
ಕೋಮಲ ದಳವನೊಂದು ತಂದು ಮಾಧವನ
ಚರಣ ತಾಮರಸ-ಕರ್ಪಿಸುವದು
ತಾ ಮುನ್ನ ಮಾಡಿದಘ ಪಂಚಕಗಳೋಡಿದವು
ಸಾಮಾನ್ಯವಲ್ಲ ತುಳಸಿಯ ವನವ ಸೋಂಕಿ ಬಂ
ದಾ ಮರುತದಿಂದ ದೇಶ ಗ್ರಾಮಗಳು ಪಾವನವು
ಧೀಮಂತ ಮಾನ್ಯಳಾದ (೨)
ತುಳಸಿ ನೆಳಲಲ್ಲಿ ಅಂಕುರಗಳೆದ್ದಲ್ಲಿ ಪಿತೃ
ಗಳಿಗನ್ನವಿತ್ತ-ರಕ್ಷಯ ಫಲವು
ಊಧ್ರ್ವಪುಂಡ್ರ ತಳದ ಮೃತ್ತಿಕೆಯಲಿಟ್ಟರೆ
ಕೋಟಿ ತೀರ್ಥಗಳ ಮುಳುಗೆದ್ದ ಫಲ ಸಿದ್ಧವು
ನಿಲಯದಲಿ ಪತ್ರ ಮೃತ್ತಿಕೆ ಕಾಷ್ಠವಿರಲಲ್ಲಿ
ಕಲಿ ಮುಟ್ಟಲಂಜಿ ತೊಲಗುವನು ಮಣಿಸರಗಳನು
ಗಳದೊಳಾಂತರಾ ಕಲುಷ ಸಂಹರವು ಸಹ ಸಲೆ
ವಿಷ್ಣುಪದವಿಯನೀವ (೩)
ಶತಸಾಸಿರಪರಾಧವಿರಲಿನ್ನು ಮೃತ್ತಿಕೆಲಿ
ಪಿತ ಕಾಯದನಿಗೆ ಬಹುಜನ ನೋಡೆ ವಿಘ್ನಗಳ
ಗತಿಯುಡುಗಿ ದುಷ್ಟ ಗ್ರಹಗಳೆಲ್ಲನುಕೂಲ
ಗತಿಯಾದ ಫಲವೀವವು
ಪ್ರತಿದಿನದಿ ನಾಭಿಕ ಕರ್ಣದಲಿ ಶಿರದಲ್ಲಿ ಶ್ರೀ
ಪತಿಯ ನಿರ್ಮಾಲ್ಯದಳ ಧರಿಸಿ ಹರಿಪಾದ ತೀ
ರಥವೊಮ್ಮೆ ಸೇವಿಸಿದವರ ಮುಕ್ತಿ ಕರತಳವು
ಪತಿತಪಾವನಿ ಎನಿಸುವಾ (೪)
ದರುಶನದಿ ಸ್ಪರುಶನದಿ ಧ್ಯಾನದಿಂ ಕೀರ್ತನೆಯು
ನಿರುತ ಪ್ರಣಾಮಗಳು ಸ್ತೋತ್ರದಾರೋಪಣಿಂ
ಪರಮಜಲ ಶೇಚನಾರ್ಚನ ನಿಷ್ಠೆಯಿಂದ
ನವ ಪರೀಕ್ಷೆಯನು ಮಾಡಲು
ಹರಿಚರಣ ಕಮಲರತಿ ದೊರಕಿ ಯುಗ ಕೋಟಿ ಸಾ
ಸಿರ ಕಾಲ ತಿರುಗಿ ಬಂದರೆ ಸತತ ಮಾಂಗಲ್ಯ
ಹರಿಯ ಮನೆಯಲ್ಲಿ ನಿಜ ಹರುಷವನ್ನುಂಬುವರು
ಮುರಾರಿ ವರದಂತೆ ಪದವ (೫)
ಒಂದೊಂದು ದಳ ಕೋಟಿ ಸ್ವರ್ಣಭಾರಕೆ ಮಿಗಿಲು
ಎಂದು ವಿಶ್ವಾಸದಲಿ ತಂದು ಸಾಸಿರನಾಮ
ದಿಂದ ಗೋವಿಂದಗರ್ಪಿಸಿದರಿಲ್ಲಿಹ
ಭವದಂದುಗವು ಮಾನಿಸರ್ಗೆ
ಸುಂದರ ತುಲಸಿ ಮೂಲವನ್ನು ತೊಡಕಿರ್ದ ಕಳೆ
ಯಂದೆಗೆದು ಶಾಖೋಪ ಶಾಖದಿಂ ವೃದ್ಧಿಸಾ
ನಂದವಿತ್ತರಾ ನೂರೊಂದು ಕುಲ ನರಕವನು
ಹೊಂದಲೀಸರು ಪುಣ್ಯದಾ (೬)
ಶ್ರೀ ವಿಷ್ಣುವಲ್ಲಭೆಯ ಮೂಲದಲಿ ತೀರ್ಥಗಳು
ಬಾವನ್ನಗಂಧಿಯಳ ಮಧ್ಯದಲಿ ಸುರನಿಕರ
ಪಾವನಿಯಳಾ ಹರಿಯ ಕೊನೆಯಲಿ ಶ್ರುತಿ ಸಮೂಹ
ಲಾವಣ್ಯ ಗುಣರಾಸಿಯು
ಭಾವಶುದ್ಧಿಯಲಿ ಉದಯದಿ ಸ್ಮರಿಸಿ ನಿರುತದಿ
ನಾವ ಕಾರ್ಯಕೆ ಗೆಲುವು ಇಹಪರದ ಸೌಖ್ಯವಿ
ತ್ತಾವ ಕಾಲಕ್ಕೆ ಹೊರೆವ ಪ್ರಸನ್ನವೆಂಕಟ
ದೇವನಂಗ ದೊಳೊಪ್ಪುವಾ (೭)
Leave a Reply