Rangayya ninagarenendaro

Composer : Shri Purandara dasaru

By Smt.Shubhalakshmi Rao

ರಂಗಯ್ಯ ನಿನ್ನಗಾರೇನೆಂದರೊ ||ಪ||

ಸಕಲ ಭಾಗವತರು ಗತಿತಾಳ ಮೇಳದಿಂದ
ತಕಕಿಟಕಿಟತಕ ಧಿಮಿಕೆಂದು ಕುಣಿವಾಗ ||ಅ||

ಸಕ್ಕರೆ ಚೀಣಿ ಹಾಲಿನ ಕೆನೆ ರಸದಿಂದ |
ಉಕ್ಕುವ ನೊರೆಹಾಲನು ಮೆದ್ದ ಕೃಷ್ಣಯ್ಯ ||೧||

ದ್ರುಪದನ ಮಗಳ ಸೀರೆಯ ಸುತ್ತಿ ಸೆಳೆವಾಗ |
ಕೃಪೆಯಿಂದ ಅಕ್ಷಯವಿತ್ತ ದೇವನೆ ನಿನ್ನ ||೨||

ಜಗದೊಡೆಯ ಮೂಡಲಗಿರಿಯ ಕೋನೇರಿ ತಿಮ್ಮ |
ಅಗಣಿತ ಮಹಿಮ ಶ್ರೀಪುರಂದರವಿಠಲ ನಿನ್ನ ||೩||


raMgayya ninnagArEneMdaro ||pa||

sakala BAgavataru gatitALa mELadiMda
takakiTakiTataka dhimikeMdu kuNivAga ||a||

sakkare cINi hAlina kene rasadiMda |
ukkuva norehAlanu medda kRuShNayya ||1||

drupadana magaLa sIreya sutti seLevAga |
kRupeyiMda akShayavitta dEvane ninna ||2||

jagadoDeya mUDalagiriya kOnEri timma |
agaNita mahima SrIpuraMdaraviThala ninna ||3||

Leave a Reply

Your email address will not be published. Required fields are marked *

You might also like

error: Content is protected !!