Composer : Shri Purandara dasaru
ಮಂಗಳಂ ಶ್ರೀ ತುಳಸೀ ದೇವಿಗೆ ,
ಮಂಗಳಂ ವೃಂದಾವನ ವಾಸಿಗೆ
ಜಯ ಮಂಗಳಂ ನಿತ್ಯ ಶುಭ ಮಂಗಳಂ |ಪ|
ನೋಡಿದ ಮಾತ್ರಕೆ ದೋಷ ಸಂಹಾರಿಗೆ
ಬೇಡಿದ ವರಗಳ ಕೊಡುವಳಿಗೆ
ಮಾಡೆ ವಂದನೆಯನು ಮನುಜರ
ಪಾಪದ ಗೂಡನೀಡಾಡುವ ಗುಣವಂತೆಗೆ (೧)
ಮುಟ್ಟೀದ ಮಾತ್ರಕ್ಕೆ ಮುಕ್ತರ ಮಾಡುವ
ಮುದದಿಂದುದ್ಧರಿಸುವ ಮುನಿ ವಂದ್ಯೆಗೆ
ಕೊಟ್ಟರೆ ನೀರನು ಪೇರಿಗೆ ಕಾಲನ
ಮುಟ್ಟಲೇಸದ ಹಾಗೆ ಮಾಳ್ಪಳಿಗೆ (೨)
ಬಿತ್ತಿ ಬೆಳಸಿ ತನ್ನ ಹೆಚ್ಚಿಸಿದವರಿಗೆ
ಚಿತ್ತವಲ್ಲಭ ಕೃಷ್ಣನ ಹರುಷದಲಿ
ಅತ್ಯಂತವಾಗಿ ತಾ ಭವದ ಬೇರ
ಕಿತ್ತು ಬಿಸಾಡುವ ಕೋಮಲೆಗೆ (೩)
ಕೋಮಲವಾಗಿದ್ದ ದಳ ಮಂಜರಿಗಳ
ಪ್ರೇಮದಿಂದಲಿ ತಂದು ಶ್ರೀ ಹರಿಗೆ
ನೇಮದಿಂದರ್ಚಿಸೆ ಪರಮಾತ್ಮನೊಳು
ಜೀವ ಕಾಮಿತಾರ್ಥವನೀವ ಸದ್ಗುಣೆಗೆ (೪)
ಕಾಷ್ಟವ ತಂದು ಗಂಧವ ಮಾಡಿ
ಕೃಷ್ಣಗೆ ನಿಶ್ಠೆಯಿಂದಲಿ ಲೇಪನ ಮಾಳ್ಪರ
ಜ್ಯೇಷ್ಠರೆನಿಸಿ ವೈಕುಂಠದಲಿ ನಿಲಿಸಿ
ಸಂತುಷ್ಟರ ಮಾಡುವ ಸೌಭಾಗ್ಯೆಗೆ (೫)
ಅನ್ನವನುಂಡರು ನೀಚರ ಮನೆಯಲ್ಲಿ
ಉನ್ನಂತ ಪಾಪವ ಮಾಡಿದ್ದರೂ
ತನ್ನ ದಳವನೊಂದ ಕರ್ಣದಲ್ಲಿಟ್ಟರೆ
ಧನ್ಯರ ಮಾಡುವ ದಯವಂತೆಗೆ (೬)
ಸರಸಿಜ ನಾಭನ ಸಲುಗೆಯ ರಾಣಿಗೆ
ಶರಣ ಜನರ ಪೊರೆವ ಸದ್ಗುಣೆಗೆ
ತಿರುಪತಿ ನಿಲಯ ಶ್ರೀ ಪುರಂದರ ವಿಠಲನ
ಚರಣ ಸೇವಕಳಾದ ಚಿನುಮಯೆಗೆ (೭)
maMgaLaM SrI tuLasI dEvige ,
maMgaLaM vRuMdAvana vAsige
jaya maMgaLaM nitya shubha maMgaLaM |pa|
nODida mAtrake dOSha saMhArige
bEDida varagaLa koDuvaLige
mADe vaMdaneyanu manujara
pApada gUDanIDADuva guNavaMtege (1)
muTTIda mAtrakke muktara mADuva
mudadiMduddharisuva muni vaMdyege
koTTare nIranu pErige kAlana
muTTalEsada hAge mALpaLige (2)
bitti beLasi tanna heccisidavarige
cittavallaBa kRuShNana haruShadali
atyaMtavAgi tA Bavada bEra
kittu bisADuva kOmalege (3)
kOmalavAgidda daLa maMjarigaLa
prEmadiMdali taMdu SrI harige
nEmadiMdarcise paramAtmanoLu
jIva kAmitArthavanIva sadguNege (4)
kAShTava taMdu gaMdhava mADi
kRuShNage niSTheyiMdali lEpana mALpara
jyEShTharenisi vaikuMThadali nilisi
saMtuShTara mADuva sauBAgyege (5)
annavanuMDaru nIcara maneyalli
unnaMta pApava mADiddarU
tanna daLavanoMda karNadalliTTare
dhanyara mADuva dayavaMtege (6)
sarasija nABana salugeya rANige
SaraNa janara poreva sadguNege
tirupati nilaya SrI puraMdara viThalana
caraNa sEvakaLAda cinumayege (7)
Leave a Reply