Kalyanam Tulasi Kalyanam

Composer : Shri Purandara dasaru

By Smt.Shubhalakshmi Rao

ಯಾ ದೃಷ್ಟಾ ನಿಖಿಲಾಘಸಂಘಶಮನೀ ಸ್ಪೃಷ್ಟಾ ವಪುಃ ಪಾವನೀ |
ರೋಗಾಣಾಮಭಿವಂದಿತಾ ನಿರಸನೀ ಸಿಕ್ತಾಂತಕತ್ರಾಸಿನೀ |
ಪ್ರತ್ಯಾಸತ್ತಿ ವಿಧಾಯಿನೀ ಭಗವತಃ ಕೃಷ್ಣಸ್ಯ ಸಂರೋಪಿತಾ |
ನ್ಯಸ್ತಾ ತಚ್ಚರಣೆ ವಿಮುಕ್ತಿಫಲದಾ ತಸ್ಯೈ ತುಲಸ್ಯೈ ನಮಃ ||


ಕಲ್ಯಾಣಂ ತುಳಸೀ ಕಲ್ಯಾಣಂ ||ಪ||
ಕಲ್ಯಾಣವೇ ನಮ್ಮ ಶ್ರೀಕೃಷ್ಣ ತುಳಸಿಗೆ
ಬಲ್ಲಿದ ಶ್ರೀ ವಾಸುದೇವನಿಗೆ ||ಅ.ಪ||

ಅಂಗಳದೊಳಗೆಲ್ಲ ತುಳಸಿಯ ವನಮಾಡಿ
ಶೃಂಗಾರವ ಮಾಡಿ ಶೀಘ್ರದಿಂದ
ಕಂಗಳ ಪಾಪವ ಪರಿಹರಿಸುವ
ಮುದ್ದುರಂಗ ಬಂದಲ್ಲಿ ತಾ ನೆಲೆಸಿಹನು ||೧||

ಮಿಂದು ಮಡಿಯನುಟ್ಟು ಸಂದೇಹವ ಬಿಟ್ಟು
ತಂದ ಶ್ರೀ ಗಂಧಾಕ್ಷತೆ-ಗಳಿಂದ
ಸಿಂಧು ಶಯನನ ವೃಂದಾವನದಿ ಪೂಜಿಸೆ
ಕುಂದದ ಭಾಗ್ಯವ ಕೊಡುತಿಹಳು ||೨||

ಭಕ್ಷ್ಯ ಭೋಜ್ಯಂಗಳ ನೈವೇದ್ಯವನಿತ್ತು
ಲಕ್ಷ ಬತ್ತಿಯ ದೀಪ ಹಚ್ಚಿ
ಅಧೋಕ್ಷಜ ಸಹಿತ ವೃಂದಾವನ ಪೂಜಿಸೆ
ಸಾಕ್ಷಾತ್ ಮೋಕ್ಷವ ಕೊಡುತಿಹಳು ||೩||

ಉತ್ತಾನ ದ್ವಾದಶಿ ದಿವಸದಿಂದಲಿ ಕೃಷ್ಣ
ಶ್ರೀ ತುಳಸಿಗೆ ವಿವಾಹವ
ಚಿತ್ತ ನಿರ್ಮಲರಾಗಿ ಮಾಡಿದವರಿಗೆ
ಉತ್ತಮ ಗತಿ ಈವ ಪುರಂದರ ವಿಠಲನು ||೪||


yA dRuShTA niKilAGasaMGaSamanI spRuShTA vapuH pAvanI |
rOgANAmaBivaMditA nirasanI siktAMtakatrAsinI |
pratyAsatti vidhAyinI BagavataH kRuShNasya saMrOpitA |
nyastA taccaraNe vimuktiPaladA tasyai tulasyai namaH ||


kalyANaM tuLasI kalyANaM ||pa||
kalyANavE namma SrIkRuShNa tuLasige
ballida SrI vAsudEvanige ||a.pa||

aMgaLadoLagella tuLasiya vanamADi
SRuMgArava mADi SIGradiMda
kaMgaLa pApava pariharisuva
mudduraMga baMdalli tA nelesihanu ||1||

miMdu maDiyanuTTu saMdEhava biTTu
taMda SrI gaMdhAkShate-gaLiMda
siMdhu Sayanana vRuMdAvanadi pUjise
kuMdada BAgyava koDutihaLu ||2||

BakShya BOjyaMgaLa naivEdyavanittu
lakSha battiya dIpa hacci
adhOkShaja sahita vRuMdAvana pUjise
sAkShAt mOkShava koDutihaLu ||3||

uttAna dvAdaSi divasadiMdali kRuShNa
shrI tuLasige vivAhava
citta nirmalarAgi mADidavarige
uttama gati Iva puraMdara viThalanu ||4||

Leave a Reply

Your email address will not be published. Required fields are marked *

You might also like

error: Content is protected !!