Composer : Shri Purandara dasaru
ಗುರುಭಕ್ತಿ ಯೆಂತೆಂಬ ಕನಕದೋಲೆಯನಿಟ್ಟು
ಹರಿಧ್ಯಾನವೆಂಬ ಆಭರಣವನಿಟ್ಟು
ಪರತತ್ವವೆಂತೆಂಬ ಪಾರಿಜಾತವ ಮುಡಿದು
ಪರಮಾತ್ಮ ಹರಿಗೇ ಆರತಿಯನೆತ್ತಿರೆ
ಜಯ ಮಂಗಳ ನಿತ್ಯ ಶುಭ ಮಂಗಳ ||೧||
ಆದಿ ಮೂರುತಿಯೆಂಬ ಅಚ್ಚ ಅರಿಶಿಣ ಬಳಿದು
ವೇದಮುಖವೆಂಬ ಕುಂಕುಮವನಿಟ್ಟು
ಸಾಧು ಸಜ್ಜನ ಸೇವೆಯೆಂಬ ಸಂಪಿಗೆ ಮುಡಿದು
ಮೋದದಿಮ್ ಲಕ್ಷ್ಮೀಗೆ ಆರತಿಯನೆತ್ತಿರೆ
ಜಯ ಮಂಗಳ ನಿತ್ಯ ಶುಭ ಮಂಗಳ ||೨||
ತನುವೆಂಬ ತಟ್ಟೆಯಲಿ ಮನಸೊಡಲನು ಇರಿಸಿ
ಘನಶಾಂತಿ ಎಂಬ ಆಜ್ಯವನು ತುಂಬಿ
ಆನಂದವೆಂತೆಂಬ ಬತ್ತಿಯನು ಹಚ್ಚಿಟ್ಟು
ಚಿನುಮಯ ಹರಿಗೆ ಆರತಿಯನೆತ್ತಿರೆ
ಜಯ ಮಂಗಳ ನಿತ್ಯ ಶುಭ ಮಂಗಳ ||೩||
ಕಾಮಾಂಧವಳಿದಂತ ಕಮಲದ ತಟ್ಟೆಯಲಿ
ನೇಮವೆಂತೆಂಬ ಹರಿದ್ರವನೆ ಕದಡಿ
ಆ ಮಹಾ ಸುಜ್ಞಾನವೆಂಬ ಸುಣ್ಣವ ಬೆರೆಸಿ
ಸೋಮಧರ ವಂದ್ಯಗೆ ಆರತಿಯನೆತ್ತಿರೆ
ಜಯ ಮಂಗಳ ನಿತ್ಯ ಶುಭ ಮಂಗಳ ||೪||
ನಾರದ ವಂದ್ಯನಿಗೆ ನವನೀತ ಚೋರನಿಗೆ
ನಾರಾಯಣಗೆ ಶ್ರೀ ವರಲಕ್ಷ್ಮೀಗೆ
ಸಾರಿದವರನು ಪೊರೆವ ಪುರಂದರ ವಿಠ್ಠಲಗೆ
ನೀರಜ ಮುಖಿಯರು ಆರತಿಯನೆತ್ತಿರೆ
ಜಯ ಮಂಗಳ ನಿತ್ಯ ಶುಭ ಮಂಗಳ ||೫||
gurubhakti yeMteMba kanakadOleyaniTTu
haridhyAnaveMba AbharaNavaniTTu
paratatvaveMteMba pArijAtava muDidu
paramAtma harigE Aratiyanettire
jaya maMgaLa nitya shubha maMgaLa ||1||
Adi mUrutiyeMba accha arishiNa baLidu
vEdamukhaveMba kuMkumavaniTTu
sAdhu sajjana sEveyeMba saMpige muDidu
mOdadim lakShmIge Aratiyanettire
jaya maMgaLa nitya shubha maMgaLa ||2||
tanuveMba taTTeyali manasoDalanu irisi
ghanashAMti eMba Ajyavanu tuMbi
AnaMdaveMteMba battiyanu hacchiTTu
chinumaya harige Aratiyanettire
jaya maMgaLa nitya shubha maMgaLa ||3||
kAmAMdhavaLidaMta kamalada taTTeyali
nEmaveMteMba haridravane kadaDi
A mahA suj~jAnaveMba suNNava beresi
sOmadhara vaMdyage Aratiyanettire
jaya maMgaLa nitya shubha maMgaLa ||4||
nArada vaMdyanige navanIta chOranige
nArAyaNage shrI varalakShmIge
sAridavaranu poreva puraMdara viThThalage
nIraja mukhiyaru Aratiyanettire
jaya maMgaLa nitya shubha maMgaLa ||5||
Leave a Reply