Composer : Shri Harapanahalli Bheemavva
ಎತ್ತಿದಳಾರತಿಯಾ ಶ್ರೀ ತುಳಸಿಗೆ |
ಭಕ್ತಿ ಭಾವಗಳಿಂದಲಿ ||ಪ||
ಎತ್ತಿದಳಾರತಿ ಸತ್ಯಾಧರ್ಮನ ರಾಣಿ |
ಅಚ್ಯುತನ ತೋರೆಂದು ಅತಿ ದೈನ್ಯದಿಂದಲಿ || ಆ. ಪ.||
ಗಂಧ ಪರಿಮಳ ಪುಷ್ಪವು |
ಪಾಂಚಾಲಿ ತಾ ವೃಂದಾವನವ ಪೂಜಿಸಿ ||
ದುಂಡು ಮಲ್ಲಿಗೆ ಕರ್ಪೂರ ದೀಪ ಧೂಪಗಳಿಂದ |
ಇಂದ್ರ ನಂದನ ಸತಿ ಒಂದೇ ಮನಸಿನಲಿ || ೧ ||
ಹಾರ ಕೇಯೂರಗಳ|
ಮುಕ್ತಾವಳಿ ನಾರಿ ತುಳಸಿಗೆ ಆರ್ಸಿಸಿ||
ಚಾರು ಹಸ್ತಗಳಿಂದ ನಾರಿ ಬೊಗಸೆಯ ಒಡ್ಡಿ |
ವಾರಿಜನಾಭನ ತೋರು ತೋರು ಎನುತಲಿ || ೨ ||
ಅನ್ನ ಬೇಡಲು ಮುನಿಗಳು |
ಪತಿಗಳು ಬಂದು ಎನ್ನನ್ನೇ ಕಾಡುವರು |
ಪನ್ನಂಗವೇಣಿ ನಾ ನಿನ್ನ ಮೊರೆ ಹೊಕ್ಕೇನೆ |
ಪನ್ನಾಂಗ ಶಯನನ ತೋರು ತೋರೆನುತಲಿ || ೩ ||
ಕ್ಷುದೆಯಿಂದಲೊದರುವರು ದುರ್ವಾಸರ
ಎಂದ ಪತಿಗಳು ಬೆದರುವರು |
ಮತಿದಾಯಕಿ ನಿನ್ನ ಪತಿ ಶ್ರೀ ಕೃಷ್ಣಯ್ಯನ |
ಅತಿ ಅದ್ಭುತದಿ ತೋರಿಸು ಎಂದು ತುಳಸಿಗೆ || ೪ ||
ಬೇಡಿದ ಭಕ್ತರಿಗೆ ತುಳಾಸಿ ನೀನು|
ಸಾಯುಜ್ಯ ಪದವಿ ನೀಡೆ ||
ವಾರಿಜ ನಾಭನ್ನ ತೋರಿದಳಾಕ್ಶಣದಿ |
ಧೀರ ಭೀಮೇಶ ಕೃಷ್ಣನ ಸತಿ ತುಳಸಿಗೆ || ೫||
ettidaLAratiyA SrI tuLasige |
Bakti BAvagaLiMdali ||pa||
ettidaLArati satyAdharmana rANi |
acyutana tOreMdu ati dainyadiMdali || A. pa.||
gaMdha parimaLa puShpavu |
pAMcAli tA vRuMdAvanava pUjisi ||
duMDu mallige karpUra deepa dhUpagaLiMda |
iMdra naMdana sati oMdE manasinali || 1 ||
hAra kEyUragaLa|
muktAvaLi nAri tuLasige Arsisi||
cAru hastagaLiMda nAri bogaseya oDDi |
vArijanABana tOru tOru enutali || 2 ||
anna bEDalu munigaLu |
patigaLu baMdu ennannE kADuvaru |
pannaMgavENi nA ninna more hokkEne |
pannAMga Sayanana tOru tOrenutali || 3 ||
kShudeyiMdalodaruvaru durvAsara
eMda patigaLu bedaruvaru |
matidAyaki ninna pati SrI kRuShNayyana |
ati adbhutadi tOrisu eMdu tuLasige || 4 ||
bEDida Baktarige tuLAsi neenu|
sAyujya padavi nIDe ||
vArija nABanna tOridaLAkshaNadi |
dheera BImESa kRuShNana sati tuLasige || 5||
Leave a Reply