Composer : Shri Mahipati dasaru
ಏನೆಂದು ಬಣ್ಣಿಸುವೆನೊ ನಾನು |
ಶ್ರೀನಾಥ ಪ್ರಿಯಳಾದ ಶ್ರೀ ತುಳಸಿ ಮಹಿಮೆಯನು ||ಪ||
ಜಲದಿ ಮಥನದಿ ಅಮೃತ ಕಲಶ ಬರೆಕಂಡು ಅತಿ |
ಜಲಜಾಂಬಕನ ಪ್ರೇಮಾಂಜಲ ಉದರಲು |
ಇಳಯೊಳದಿರಿಂದುದಿಸಿ ಬೆಳೆದು ನಿಂದಿರೆ ನೋಡಿ |
ಒಲಿದು ಕೋಮಲ ಮುಗುಳು ತಳೆದ ಶ್ರೀಹರಿ ತಾನು ||೧||
ಹರಿಯು ಧರಿಸಿದ ಕಂಡು ಸುರರೆಲ್ಲ ವಂದಿಸುತ |
ಶಿರದಲಾಂತರು ಪರಮ ಹರುಷದಿಂದ |
ಸಿರಿಸರಸ್ವತಿ ಗಿರಿಜೆ ನಿರುತ ನಿನ್ನಯ ವ್ರತದಿ |
ಧರೆಯೊಳಗೆ ತಮ್ಮ ತಮ್ಮ ಅರಸರೊಲಿಸಿದರೆಂದು ||೨||
ನೋಡಿದರೆ ದುರಿತ ಕುಲ ಓಡುವವು ತನುವ ನೀ
ಡಾಡಿ ಜಲನೀಡಿ ಕೊಂಡಾಡಿ ನಿಂದು |
ಕೂಡೆ ಮೃತ್ತಿಕೆ ಫಣಿಗೆ ತೀಡಿದರೆ ಭಕುತಿಯಲಿ |
ಬೇಡಿದಿಷ್ಟಾರ್ಥ ಕೈಗೂಡ ಬಹುದಿಳೆಯೊಳಗೆ ||೩||
ತುಲಸಿ ಭಕುತಿಲ್ಲದವ ಕುಲಿವಂಶದನುಜನವ |
ತುಲಸಿ ಧರಿಸಿದ ತನುವು ಸಲೆಮುಕ್ತಿ ಮಂಟಪವು |
ತುಲಸಿ ಬೆಳೆಹದಿ ಮನೆಯು ಬಲಿದ ಪುಣ್ಯದ ಖಣಿಯು |
ತುಲಸಿ ಇಲ್ಲದ ಗೇಹ ಕಲುಷಾಲಯ ||೪||
ಮೂಲದಲಿ ಬ್ರಹ್ಮ ತಾ ನೀಲಕಂಠನು ನಡುವೆ |
ಮೇಲುತುದಿಯಲಿ ವಿಷ್ಣು ಲೋಲಾಡುವಾ |
ಸಾಲಕೊಂಬೆಗಳಲಿ ವಿಶಾಲ ದೇವತೆಗಳಿಹರು |
ತಾಳಿ ಪ್ರೇಮವನು ಮಹೀಪತಿ ನಂದನಾಜ್ಞೆಯಲಿ ||೫||
EneMdu baNNisuveno nAnu |
SrInAtha priyaLAda SrI tuLasi mahimeyanu ||pa||
jaladi mathanadi amRuta kalaSa barekaMDu ati |
jalajAMbakana prEmAMjala udaralu |
iLayoLadiriMdudisi beLedu niMdire nODi |
olidu kOmala muguLu taLeda SrIhari tAnu ||1||
hariyu dharisida kaMDu surarella vaMdisuta |
SiradalAMtaru parama haruShadiMda |
sirisarasvati girije niruta ninnaya vratadi |
dhareyoLage tamma tamma arasarolisidareMdu ||2||
nODidare durita kula ODuvavu tanuva nI
DADi jalanIDi koMDADi niMdu |
kUDe mRuttike PaNige tIDidare Bakutiyali |
bEDidiShTArtha kaigUDa bahudiLeyoLage ||3||
tulasi Bakutilladava kulivaMSadanujanava |
tulasi dharisida tanuvu salemukti maMTapavu |
tulasi beLehadi maneyu balida puNyada KaNiyu |
tulasi illada gEha kaluShAlaya ||4||
mUladali brahma tA nIlakaMThanu naDuve |
mElutudiyali viShNu lOlADuvA |
sAlakoMbegaLali viSAla dEvategaLiharu |
tALi prEmavanu mahIpati naMdanAj~jeyali ||5||
Leave a Reply