Elli Shri Tulasiya vanavu

Composer : Shri Purandara dasaru

By Smt.Shubhalakshmi Rao

ಎಲ್ಲಿ ಶ್ರೀ ತುಳಸಿಯ ವನವು |
ಅಲ್ಲೊಪ್ಪುವರು ಸಿರಿ-ನಾರಾಯಣರು ||ಪ||

ಗಂಗೆ ಯಮುನೆ ಗೋದಾವರಿ ಕಾವೇರಿ |
ಕಂಗೊಳಿಸುವ ಮಣಿಕರ್ಣಿಕೆಯು ||
ತುಂಗಭದ್ರೆ ಕೃಷ್ಣವೇಣಿ ತೀರ್ಥಗಳೆಲ್ಲ |
ಸಂಗಡಿಸುತ ವೃಕ್ಷ ಮೂಲದಲ್ಲಿರುವುವು [೧]

ಸರಸಿಜಭವ ಭವ ಸುರಪ ಪಾವಕ ಚಂ-|
ದಿರ ಸೂರ್ಯ ಮೊದಲಾದವರು ||
ಸಿರಿರಮಣನ ಆಜ್ಞೆಯಲಿ ಅಗಲದಂತೆ |
ತರು ಮಧ್ಯದೊಳು ನಿತ್ಯ ನೆಲಸಿಪ್ಪರು [೨]

ಋಗ್ವೇದ ಯಜುರ್ವೇದ ಸಾಮ ಅಥರ್ವಣ |
ಅಗ್ಗಳಿಸಿದ ವೇದ ಘೋಷಗಳು ||
ಅಗ್ರ ಭಾಗದಲ್ಲಿವೆ ಬೆಟ್ಟದೊಡೆಯನಲ್ಲಿ |
ಶೀಘ್ರದಿ ಒಲಿವ ಶ್ರೀ ಪುರಂದರ ವಿಠಲ [೩]


elli SrI tuLasiya vanavu |
alloppuvaru siri-nArAyaNaru ||pa||

gaMge yamune gOdAvari kAvEri |
kaMgoLisuva maNikarNikeyu ||
tuMgaBadre kRuShNavENi tIrthagaLella |
saMgaDisuta vRukSha mUladalliruvuvu [1]

sarasijaBava Bava surapa pAvaka caM-|
dira sUrya modalAdavaru ||
siriramaNana Aj~jeyali agaladaMte |
taru madhyadoLu nitya nelasipparu [2]

RugvEda yajurvEda sAma atharvaNa |
aggaLisida vEda GOShagaLu ||
agra BAgadallive beTTadoDeyanalli |
SIGradi oliva SrI puraMdara viThala [3]

Leave a Reply

Your email address will not be published. Required fields are marked *

You might also like

error: Content is protected !!