Composer : Shri Purandara dasaru
ಶ್ರೀ ಪುರಂದರದಾಸರ ಕೃತಿ, ರಾಗ : ಕಲ್ಯಾಣಿ, ಆದಿತಾಳ
ಏಳಮ್ಮ ತುಳಸಿ ಕೋಮಲವಾಣಿ || ಪ ||
ನೀಲವರ್ಣನ ರಾಣಿ ನಿತ್ಯಕಲ್ಯಾಣಿ || ಅ ಪ ||
ಉಟ್ಟಪೀತಾಂಬರ ಹೃದಯದಿ ಕೌಸ್ತುಭ |
ಇಟ್ಟ ದ್ವಾದಶನಾಮ ನೊಸಲಲ್ಲಿ ತಿಲಕ ||
ತೊಟ್ಟ ಮುತ್ತಿನ ಅಂಗಿ ತೋಳ ಭಾಪುರಿಯಿಂದ |
ಲಕ್ಷ್ಮೀರಮಣ ನಿನ್ನಪ್ಪಿದನಲ್ಲೇ ತುಳಸೀ || ೧ ||
ಬಲದ ಕೈಯಲ್ಲಿ ಚಕ್ರ ಎಡದ ಕೈಯಲ್ಲಿ ಶಂಖ |
ಕೊರಲೊಳಗ್ಹಾಕಿದ್ದ ಶ್ರೀವತ್ಸಲಾಂಛನ ||
ಉರಗಶಯನ ಮೇಲೆ ಮಲಗಿದ್ದ ಪರಮಾತ್ಮ |
ಕೊರಲೊಳು ಧರಿಸಿಕೊಂಡಿಹನಲ್ಲೇ ತುಳಸಿ || ೨ ||
ಬೃಂದಾವನದಲ್ಲಿ ಚೆಂದುಳ್ಳ ಬನದಲ್ಲಿ |
ಮಂದಗಮನೆಯರ ಮ್ಯಾಳದಲ್ಲಿ ||
ನಂದಗೋಪನ ಕಂದ ಬಾಯ ತಾಂಬೂಲದಲ್ಲಿ | ಆ –
ನಂದದಿಂದಲಿ ನಿನ್ನಪ್ಪಿದನಲ್ಲೇ ತುಳಸಿ || ೩ ||
ಎಳೆಯ ಬೆಳದಿಂಗಳಿಂದ ಕೊಳಲನಾದಗಳಿಂದ |
ಎಡಬಲದಲೊಪ್ಪುವ ಛತ್ರಚಾಮರಗಳಿಂದ ||
ಕಡಗ ಕಂಕಣದಿಂದ ಮುಡಿದ ಮಲ್ಲಿಗೆಯಿಂದ |
ಮುರಹರಮೂರ್ತಿ ನಿನ್ನಪ್ಪಿದನಲ್ಲೇ ತುಳಸಿ || ೪ ||
ಕಾಲಲಂದುಗೆಯಿಂದ ಕಸ್ತೂರಿನಾಮಗಳಿಂದ |
ಬಾಲಗೋಪಾಲರಿಂದ ಭಕ್ತವತ್ಸಲನು ||
ವೇಣುನಾದವ ಮಾಡಿ ಪ್ರಾಣಪತಿಯು ಲಕ್ಷ್ಮೀ |
ಪುರಂದರವಿಠಲ ನಿನ್ನಪ್ಪಿದನಲ್ಲೇ ತುಳಸಿ || ೫ ||
ELamma tuLasi kOmalavANi || pa ||
nIlavarNana rANi nityakalyANi || a pa ||
uTTapItAMbara hRudayadi kaustuBa |
iTTa dvAdaSanAma nosalalli tilaka ||
toTTa muttina aMgi tOLa BApuriyiMda |
lakShmIramaNa ninnappidanallE tuLasI || 1 ||
balada kaiyalli cakra eDada kaiyalli SaMKa |
koraloLag~hAkidda SrIvatsalAMCana ||
uragaSayana mEle malagidda paramAtma |
koraloLu dharisikoMDihanallE tuLasi || 2 ||
bRuMdAvanadalli ceMduLLa banadalli |
maMdagamaneyara myALadalli ||
naMdagOpana kaMda bAya tAMbUladalli | A –
naMdadiMdali ninnappidanallE tuLasi || 3 ||
eLeya beLadiMgaLiMda koLalanAdagaLiMda |
eDabaladaloppuva CatracAmaragaLiMda ||
kaDaga kaMkaNadiMda muDida malligeyiMda |
muraharamUrti ninnappidanallE tuLasi || 4 ||
kAlalaMdugeyiMda kastUrinAmagaLiMda |
bAlagOpAlariMda Baktavatsalanu ||
vENunAdava mADi prANapatiyu lakShmI |
puraMdaraviThala ninnappidanallE tuLasi || 5 ||
Leave a Reply