Composer : Shri Bagepalli Sesha dasaru
ಶ್ರೀ ಬಾಗೇಪಲ್ಲಿ ಶೇಷವಿಠಲದಾಸರ ಕೃತಿ
ರಾಗ : ಖರಹರಪ್ರಿಯ, ಆದಿತಾಳ
ಏಳಮ್ಮ ಸುಗುಣಾ ತುಳಸಿ || ಪ ||
ನಿನ್ನ ಕಾಣದೆ ಕ್ಷಣವು ಪ್ರಾಣ ನಿಲ್ಲದು ತಾಯೆ || ಅ ಪ ||
ಇಂದುವದನೇ ಕೇಳೇ | ಎನಗೊಂದನಾದರೂ ಪೇಳೆ |
ಚೆಂದಾದಿ ಬಂದೆನ್ನ ನಂದಾ ಪಾಲಿಸು ತಾಯೆ || ೧ ||
ಕನಸು ಮನಸಿನಲ್ಲಿ | ನಿನ್ನ ನೆನೆಸೂವೆ ಹಗಲಲ್ಲಿ |
ಮನಸೀನ ಓಟಕ್ಕೆ ಮನವಾ ನಿಲ್ಲಿಸು ತಾಯೆ || ೨ ||
ಆಸೆ ಇಲ್ಲವೇ ಎನಗೆ | ನಿನ್ನ ದಾಸನಲ್ಲವೇ ತಾಯೆ |
ಪೋಷಿಸಿ ಸಲಹೆನ್ನ ಶೇಷವಿಠಲ ಪ್ರಿಯೆ || ೩ ||
ELamma suguNA tuLasi || pa ||
ninna kANade kShaNavu prANa nilladu tAye || a pa ||
iMduvadanE kELE | enagoMdanAdarU pELe |
ceMdAdi baMdenna naMdA pAlisu tAye || 1 ||
kanasu manasinalli | ninna nenesUve hagalalli |
manasIna OTakke manavA nillisu tAye || 2 ||
Ase illavE enage | ninna dAsanallavE tAye |
pOShisi salahenna SEShaviThala priye || 3 ||
Leave a Reply