Aruha barade nimma

Composer : Shri Helavanakatte Giriyamma

By Smt.Shubhalakshmi Rao

The story behind the song is here :
https://archive.org/details/in.ernet.dli.2015.382063/page/n79/mode/2up?view=theater

ಅರುಹ ಬಾರದೆ ನಿಮ್ಮ ಚರಿತೆಯನು |
ನರ ಲೋಕದೊಳು ನಗೆ ಗೇಡು ಮಾಡದ ಹಾಂಗೆ [ಪ]

ಕಲ್ಲೊಳು ಕಾಂತೆಯ ಮಾಡಿದೆ ಎಂದು |
ಹೇಳುತಲಿಹರು ಮೂಜಗದೊಳಗೇ |
ಅಲ್ಲಿ ತೋರಿಸಿದ ಹಾಂಗೆ |
ಇಲ್ಲಿ ತೋರಿಸಿದರೆ ಬಲ್ಲದೆನ್ನೊಡೆಯ |
ದೊಡ್ಡವನೆಂದು ಪೊಗಳುವೆ ನಾ [೧]

ತ್ರಿಭಂಗಿಯಾಗಿದ್ದ ಕುಬ್ಜೆಯ ತನು ಎತ್ತಿ |
ನವಯೌವ್ವನೆಯ ಮಾಡಿದೆಯೆಂಬರು |
ಬಹು ಪರಾಕ್ರಮವನು ಈಗ ತೋರಿಸಿದರೆ |
ಆಹುದೋ ಎನ್ನೊಡೆಯ ದೊಡವನೆಂದು ಸಾರುವೆನಾ [೨]

ನೀನೇ ಗತಿ ಎಂದು ನಂಬಿದ ಭಕ್ತನ ಕಣ್ಣೂನವ
ತಿದ್ದಿ ನಿಜವ ತೋರಿಸಯ್ಯ ||
ದೀನದಯಾಳು ಹೆಳವನ ಕಟ್ಟೆ ರಂಗಯ್ಯಾ |
ದಾನಿ ಎನ್ನೊಡೆಯ ದೊಡ್ಡವನೆಂದು ಹೇಳುವೆ ನಾ [೩]


aruha bArade nimma cariteyanu |
nara lOkadoLu nage gEDu mADada hAMge [pa]

kalloLu kAMteya mADide eMdu |
hELutaliharu mUjagadoLagE |
alli tOrisida hAMge |
illi tOrisidare balladennoDeya |
doDDavaneMdu pogaLuve nA [1]

triBaMgiyAgidda kubjeya tanu etti |
navayauvvaneya mADideyeMbaru |
bahu parAkramavanu Iga tOrisidare |
AhudO ennoDeya doDavaneMdu sAruvenA [2]

neenE gati eMdu naMbida Baktana kaNNUnava
tiddi nijava tOrisayya ||
dInadayALu heLavana kaTTe raMgayyA |
dAni ennoDeya doDDavaneMdu hELuve nA [3]

Leave a Reply

Your email address will not be published. Required fields are marked *

You might also like

error: Content is protected !!