Composer : Shri Gopala dasaru
ಶ್ರೀ ಯದುವರಕುಲ ತೋಯದಿ ಹಿಮಕರಾಶ್ರಿತ ಜನಮಂದಾರ
ಮಾಯಾ ಪೂತನಿಹಾರ ವೇದೋದ್ದಾರ ಮಂದಾರ ಶೈಲಧರ ಪ]
ಗಂಗೋದ್ಭವ ಬಲಿ ವ್ಯಾಸ ಪರಾಶರ
ಪುಂಗವನುತ ಚರಣ
ಮಂಗಳಾಂಗ ಕುಂತಿ-ಸುತ ಪಾಲನ
ಮೌನಿ ಹೃದಯ ಸದನ
ತುಂಗ ಚತುರ್ಭುಜ ಶಂಖ ಚಕ್ರಧರ
ದನುಜವಂಶ ದಹನ
ಅಂಗಜ ಜನಕ ಕಾಳಿಂಗ ಗರ್ವಹರ
ಅಂಬರೀಶ ಕರುಣ [೧]
ಭೂಸುರ ಪತ್ನಿ ವಿಭೂಷಣಧರ
ಕಂಸಾಸುರ ಮುರ ಮಥನ
ವಾಸವಾದಿ ಕಮಲಾಸನ ಪೂಜಿತ
ವೈನತೇಯಗಮನ
ಶ್ರೀಶುಕ ಶೌನಕ ಸನಕ ಸನಂದನ
ಸೇವಿತ ಹಯವದನ
ದಾಸ ಕಲುಷ ವಿನಾಶ
ತ್ರಿಭುವನಾಧೀಶ ಶೇಷ ಶಯನ [೨]
ಶರಣಾಗತ ಪೋಷಣ ಮೃದು ಭಾಷಣ
ಶಕಟಾಸುರ ಹರಣ
ಕರಿವರ ರಿಪುಹರ ಕನಕಾಂಬರಧರ
ಶರನಿಧಿ ಮದ ಹರಣ
ನರಹರಿ ವೇಲಾಪುರಿ ಕೇಶವ ಶ್ರೀಧರ
ಕೌಂಸ್ತುಭಾ ಭರಣ
ಕರುಣಾ ಸಾಗರ ಶ್ರೀಗೋಪಾಲವಿಠಲ
ಕಮಲಾಚಲ ರಮಣ [೩]
SrI yaduvarakula tOyadi himakarASrita janamaMdAra
mAyA pUtanihAra vEdOddAra maMdAra Sailadhara pa]
gaMgOdBava bali vyAsa parASara
puMgavanuta caraNa
maMgaLAMga kuMti-suta pAlana
mauni hRudaya sadana
tuMga caturBuja SaMKa cakradhara
danujavaMSa dahana
aMgaja janaka kALiMga garvahara
aMbarISa karuNa [1]
BUsura patni viBUShaNadhara
kaMsAsura mura mathana
vAsavAdi kamalAsana pUjita
vainatEyagamana
SrISuka Saunaka sanaka sanaMdana
sEvita hayavadana
dAsa kaluSha vinASa
triBuvanAdhISa SESha Sayana [2]
SaraNAgata pOShaNa mRudu BAShaNa
SakaTAsura haraNa
karivara ripuhara kanakAMbaradhara
Saranidhi mada haraNa
narahari vElApuri kESava SrIdhara
kauMstuBA BaraNa
karuNA sAgara SrIgOpAlaviThala
kamalAcala ramaNa [3]
Leave a Reply