Sampattu ninagindu posadayite

Composer : Shri Vijayadasaru

By Smt.Shubhalakshmi Rao

ಸಂಪತ್ತು ನಿನಗಿಂದು ಪೊಸದಾಯಿತೆ |
ಸಿಂಪಿನಲಿ ಪಾಲುಗುಡಿದದು ಮರದಿಯಾ ರಂಗ [ಪ]

ಪಾಲು ಮೊಸರು ಕದ್ದು ಗೋವಳರೆಂಜಲನುಂಡು |
ತಾಳ ಫಲಗಳ ಮೆದ್ದದು ಮರದಿಯಾ ||
ಕಾಲ ಕಾಲಕೆ ಇಲ್ಲಿ ಷಡುರಸಾಯನ ಸವಿದು |
ಮೇಲಾಗಿ ಪೊಟ್ಟೆಯೆ ಪೊರೆವ ಅತಿಶಯವೇನು (೧)

ಕಂಡವರ ಕೈಯ್ಯ ಪಳ್ಳಿಯಲಿ ಹಳ ಹಳ ಎನಿಸಿ |
ಕೊಂಡು ಭಂಡಾಗಿ ಇದ್ದದು ಮರದಿಯಾ ||
ತಂಡ ತಂಡದಲಿಪ್ಪ ವೈಭೋಗ ವಾಹನ |
ತೋಂಡರು ಕರ ಮುಗಿದು ಕೊಂಡಾಡುವ ಭರವೊ (೨)

ಮತಿಹೀನ ಖಳಗಂಜಿ ವನಧಿಯೊಳಗೆ ದ್ವಾರ |
ವತಿಯಲ್ಲಿ ವಾಸವಾದದು ಮರದಿಯಾ ||
ಪ್ರತಿದಿವಸದಲ್ಲಿ ಸದ್ಭಕ್ತಿಯುಳ್ಳ ಶುದ್ಧ |
ಯತಿಗಳಿಂದಲಿ ಪೂಜೆ ಕೈಗೊಂಬ ಸಂಭ್ರಮವೊ (೩)

ಈ ವೈವಸ್ವತ ಮನ್ವಂತರ ಉಳ್ಳತನಕಾ |
ಈ ವಿಧದ ಕರ್ಮ ತಪ್ಪಲರಿಯದೊ ||
ಕೋವಿದರು ಪೇಳುವದು ಪುಸಿ ಎನ್ನದಿರು ದೇವ |
ಈ ಉಡುಪಿನ ಸ್ಥಾನ ನೆಚ್ಚಕೇನೊ ನಿನಗೆ (೪)

ಭಕುತಗೆ ಬಂದ ಮಹಾ ಕ್ಲೇಶ ಕಳೆಯದಿರಲು |
ಭಕುತವತ್ಸಲನೆಂಬ ಬಿರಿದು ಬರಿದೇ ||
ಮುಕುತೀಶ ಶಿರಿ ಕೃಷ್ಣ ವಿಜಯವಿಠ್ಠಲ | ವಿ |
ರುಕತಿಯೆ ಇತ್ತರೆ ಕೀರ್ತಿ ಬಾಹದು ನಿನಗೆ (೫)


saMpattu ninagiMdu posadAyite |
siMpinali pAluguDidadu maradiyA raMga [pa]

pAlu mosaru kaddu gOvaLareMjalanuMDu |
tALa PalagaLa meddadu maradiyA ||
kAla kAlake illi ShaDurasAyana savidu |
mElAgi poTTeye poreva atiSayavEnu (1)

kaMDavara kaiyya paLLiyali haLa haLa enisi |
koMDu BaMDAgi iddadu maradiyA ||
taMDa taMDadalippa vaiBOga vAhana |
tOMDaru kara mugidu koMDADuva Baravo (2)

matihIna KaLagaMji vanadhiyoLage dvAra |
vatiyalli vAsavAdadu maradiyA ||
pratidivasadalli sadBaktiyuLLa Suddha |
yatigaLiMdali pUje kaigoMba saMBramavo (3)

I vaivasvata manvaMtara uLLatanakA |
I vidhada karma tappalariyado ||
kOvidaru pELuvadu pusi ennadiru dEva |
I uDupina sthAna neccakEno ninage (4)

Bakutage baMda mahA klESa kaLeyadiralu |
BakutavatsalaneMba biridu baridE ||
mukutISa Siri kRuShNa vijayaviThThala | vi |
rukatiye ittare kIrti bAhadu ninage (5)

Leave a Reply

Your email address will not be published. Required fields are marked *

You might also like

error: Content is protected !!