Sallado Krishna sallado

Composer : Shri Purandara dasaru

By Smt.Shubhalakshmi Rao

ಸಲ್ಲದೋ ಕೃಷ್ಣ ಸಲ್ಲದೋ
ಸಲ್ಲದೋ ಕೃಷ್ಣ ಸಲ್ಲದೋ ಸಿರಿ
ವಲ್ಲಭ ಇದ ನೋಡಿ ಪಾಲಿಸಬೇಕೋ [ಪ]

ಬಿತ್ತಿ ಬೆಳೆಸಿ ತಲೆಯೆತ್ತಿದ ಪೈರನು
ಮತ್ತೆ ತುರುವಿಂಡು ಬಿಟ್ಟು ಮೆಲ್ಲಿಸುವುದು (೧)

ಸಾವಿರ ಹೊನ್ನಿಕ್ಕಿ ಸದನವ ಸಾಧಿಸಿ
ಪಾವಕನುರಿಗೆ ನೀನೊಪ್ಪಿಸಿ ಕೊಡುವುದು (೨)

ಕುಶಲದಿ ಬಣ್ಣಿಸಿ ಬರೆದ ಚಿತ್ತಾರವ
ಮಸಿ ಮಣ್ಣು ಮಾಡಿ ನೀ ಕೆಡಿಸುವುದು (೩)

ಬಹುಕಾಲ ಮುದ್ದಿಸಿ ಕಲಿಸಿ ಮಾತುಗಳ
ಗಿಳಿಯ ಸಾಕಿ ಬಾವುಗಳಿಗೆ ಒಪ್ಪಿಸುವುದು (೪)

ಕರುಣಿಸು ಸಿರಿ ಪುರಂದರ ವಿಠ್ಠಲ ನಮ್ಮ
ಹಿರಿಯ ಮಾಡಿ ಮತ್ತೆ ಕಿರಿದು ಮಾಡುವುದು (೫)


salladO kRuShNa salladO
salladO kRuShNa salladO siri
vallaBa ida nODi pAlisabEkO [pa]

bitti beLesi taleyettida pairanu
matte turuviMDu biTTu mellisuvudu (1)

sAvira honnikki sadanava sAdhisi
pAvakanurige nInoppisi koDuvudu (2)

kuSaladi baNNisi bareda cittArava
masi maNNu mADi nI keDisuvudu (3)

bahukAla muddisi kalisi mAtugaLa
giLiya sAki bAvugaLige oppisuvudu (4)

karuNisu siri puraMdara viThThala namma
hiriya mADi matte kiridu mADuvudu (5)

Leave a Reply

Your email address will not be published. Required fields are marked *

You might also like

error: Content is protected !!