Composer : Shri Vijayadasaru
ಸಕಲ ಕಾಲದಿ ಮಾಡಿದ ಕರ್ಮವು |
ಭಕುತಿಯಿಂದಲಿ ಬಂದರ್ಪಿತವೆನ್ನಿ ಉಡುಪಿಯಲಿ [ಪ]
ಯಾತ್ರೆಗಳ ಮಾಡಲಿ ತೀರ್ಥಗಳ ಮೀಯಲಿ |
ಸ್ತೋತ್ರಗಳ ಮಾಡಲಿ ಕೊಂಡಾಡಲಿ ||
ನೇತ್ರದಲಿ ನೋಡಿ ಕರಮುಗಿದು ನಮಸ್ಕರಿಸಲಿ
ಹೋತ್ರವನು ಮಾಡಿ ಹಿತವಾಗಿ ನುಡಿಯಲಿ ||೧||
ದಾನವನು ಮಾಡಲಿ ದಾಕ್ಷಿಣ್ಯವಾಗಲಿ |
ಮೌನವನು ಮಾಡಲಿ ಮಾತಾಡಲಿ ||
ಕಾನನವ ಸೇರಲಿ ಕಂಡಲ್ಲಿ ತಿರುಗಲಿ |
ಏನೇನು ಚರಿತೆಗಳ ಮಾಡುತಿರಲಿ ||೨||
ಪುಣ್ಯವಾದರು ಲೇಸೆ ಪಾಪವಾದರು ಹರಿ |
ಮನ್ನಿಸಿ ತಾನೀಗ ತೆಗೆದುಕೊಂಡು ||
ತನ್ನ ಸಮೀಪದಿ ಇಟ್ಟುಕೊಂಡು ಅವನ
ಘನ್ನ ಮೂರುತಿ ವಿಜಯವಿಠ್ಠಲ ಪೊರೆವ ||೩||
sakala kAladi mADida karmavu |
BakutiyiMdali baMdarpitavenni uDupiyali [pa]
yAtregaLa mADali tIrthagaLa mIyali |
stOtragaLa mADali koMDADali ||
nEtradali nODi karamugidu namaskarisali
hOtravanu mADi hitavAgi nuDiyali ||1||
dAnavanu mADali dAkShiNyavAgali |
maunavanu mADali mAtADali ||
kAnanava sErali kaMDalli tirugali |
EnEnu caritegaLa mADutirali ||2||
puNyavAdaru lEse pApavAdaru hari |
mannisi tAnIga tegedukoMDu ||
tanna samIpadi iTTukoMDu avana
Ganna mUruti vijayaviThThala poreva ||3||
Leave a Reply